ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಂದ ಹಕ್ಕು ಪತ್ರ ವಿತರಣೆ

No comments
          TOC ಸೋಮವಾರಪೇಟೆ:-ತಾಲೂಕಿನ ಚೌಡ್ಲು,ಶಾಂತಳ್ಳಿ,ಬೇಳೂರು, ನೇರುಗಳಲೆ ವ್ಯಾಪ್ತಿಯ 104 ಜನರಿಗೆ  94C ಹಾಗೂ 94CC ಯಡಿಯಲ್ಲಿನ ಹಕ್ಕು ಪತ್ರವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ನಗರದ ಶಾಸಕರ ಕಚೇರಿಯಲ್ಲಿ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು. ಫಲಾನುಭವಿಗಳಿಗೆ ನೀಡಿದ ಹಕ್ಕು ಪತ್ರವನ್ನು ಬೇರೆಯವರಿಗೆ ವರ್ಗಾವಣೆ ಮಾಡದಂತೆ ಹಾಗೂ ಮಾರಾಟ ಮಾಡದಂತೆ ತಿಳಿಸಿದರು. ಮನೆಗಳನ್ನು ಬಾಡಿಗೆ ನೀಡುವುದು ತಿಳಿದು ಬಂದಲ್ಲಿ ಅದರ ಹಕ್ಕು ಜಾಗವನ್ನು ಪೈಸಾರಿ ಮಾಡಲಾಗುವುದು ಹಾಗೂ ಹಕ್ಕು ಪತ್ರವನ್ನು ಸರ್ಕಾರ ವಾಪಸ್ ಹಿಂಪಡೆಯುವಂತೆ ಮಾಡಲಾಗುವುದೆಂದರು.
ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯಿತಿ,ಉಪಾಧ್ಯಕ್ಷರಾದ  ಲೋಕೇಶ್ವರಿ ಗೋಪಾಲ್,ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್ ಸೋಮವಾರಪೇಟೆ ತಹಶೀಲ್ದಾರ್ ಆರ್.ಗೋವಿಂದರಾಜ್,ಕಂದಾಯ ಪರಿವೀಕ್ಷಕರಾದ ಬಿ.ಎನ್.ವಿನು ಸೇರಿದಂತೆ ಮತ್ತಿತರರು ಹಾಜರಿದ್ದರು.

No comments

Post a Comment