ಈ ಬಾರಿ ಅಪ್ಲಿಕೇಶನ್ ಮೂಲಕ ಜನಗಣತಿ

No comments

ಬೆಂಗಳೂರು (TOC NEWS) : 2011ರಲ್ಲಿ ರಾಜ್ಯ ಸರ್ಕಾರ 7ನೇ ಜನಗಣತಿ ಮಾಡಿತ್ತು. ಈಗ 9 ವರ್ಷದ ಬಳಿಕ 8ನೇ ಜನಗಣತಿ ಮಾಡಲು ನಿರ್ಧಾರ ಮಾಡಿದೆ. ರಾಜ್ಯದ ಜನಸಂಖ್ಯೆ, ಜಾತಿ, ಕುಟುಂಬದ ಮಾಹಿತಿ, ಅಸ್ತಿಗಳ ವಿವರ ಸೇರಿದಂತೆ ಕುಟುಂಬದ ಸಂಪೂರ್ಣ ಮಾಹಿತಿ ಸಂಗ್ರಹ ಮಾಡೋದು ಈ ಜನಗಣತಿಯ ವಿಶೇಷ.
ಈ ಜನಗಣತಿ ಇನ್ನೊಂದು ವಿಶೇಷ ಅಂದ್ರೆ ಇಡೀ ಜನಗಣತಿ ಮೊಬೈಲ್ ಆಪ್ ಮೂಲಕವೇ ನಡೆಯಲಿದೆ. ಇದಕ್ಕಾಗಿ ವಿಶೇಷ ಪರಿಣಿತರ ತಂಡ ರಚನೆ ಮಾಡಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೆ ತರೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಕಾಗದ ರಹಿತ ಸಮೀಕ್ಷೆ ಇದಾಗಲಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮೊಬೈಲ್ ಆಪ್ ನೀಡುವ ಮೂಲಕ ಜನಗಣತಿ ನಡೆಸಲಾಗುತ್ತೆ. ಜನಗಣತಿ ರೂಪುರೇಷೆಗಳನ್ನ ಸಿದ್ಧ ಮಾಡಲಾಗ್ತಿದ್ದು, ಆದಷ್ಟು ಬೇಗ ಜನಗಣತಿ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

No comments

Post a Comment