ಸುನ್ನಿ‌ ಸಮನ್ವಯ ಸಮಿತಿ ರಚನೆ

No comments
ಮಡಿಕೇರಿ TOC: ಕೇಂದ್ರ ಸರ್ಕಾರದ ಸಿಎಎ ಎನ್‌ಆಗ್ನಿ ಮತ್ತು - ಎನ್‌ಪಿಆರ್ ಕಾಯ್ದೆಗಳು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿರುವ ಸುನ್ನಿ ಸಮನ್ವಯ ಸಮಿತಿಯ ಸಂಯೋಜಕ ಸಿ . ಎಂ . ಅಬ್ದುಲ್ ಹಮೀದ್ ಮುಸ್ಲಿಯಾರ್ , ಕೇಂದ್ರದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸುವ ಉದ್ದೇಶದಿಂದ ಎರಡು ಪಂಗಡಗಳಾಗಿದ್ದ ಸುನ್ನಿ ಸಮುದಾಯವನ್ನು ಒಗ್ಗೂಡಿಸಿ ' ಸುನ್ನಿ ಸಮನ್ವಯ ಸಮಿತಿ ' ಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ . ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಆದರ್ಶ ಮತ್ತು ತತ್ತ್ವ ಸಿದ್ದಾಂತಗಳಲ್ಲಿ ಸುನ್ನಿಯ ಎರಡು ಪಂಗಡಗಳಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲವಾದರು , ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ಸಂಘಟನೆಗಳ ಮೂಲಕ ಕಾರ್ಯನಿರ್ವಹಣೆ ನಡೆಯುತ್ತಿತ್ತು . ಇದೀಗ ನಮ್ಮ ಧಾರ್ಮಿಕ ಚಿಂತನೆಗೆ , ತತ್ತ್ವ ಸಿದ್ಧಾಂತಗಳಿಗೆ ಧಕ್ಕೆ ಬಂದಲ್ಲಿ ಅದನ್ನು ಸುನ್ನಿ ಸಮನ್ವಯ ಸಮಿತಿಯ ಮೂಲಕ ಒಗ್ಗಟ್ಟಾಗಿ ಎದುರಿಸಲು ನಿರ್ಧರಿಸಿರುವುದಾಗಿ ಸ್ಪಷ್ಟಪಡಿಸಿದರು .
             ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಮತ್ತು ಜಾರಿಗೆ ಬರಬೇಕಾಗಿರುವ ಇತರೆ ಕಾಯ್ದೆಗಳು ಸಂವಿಧಾನದ ಆಶಯಗಳಿಗೆ ವಿರುದ್ದವಾಗಿದೆ . ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ಸಮುದಾಯದವರು , ವಿದ್ಯಾರ್ಥಿಗಳು ಹೋರಾಟಕ್ಕೆ ಧುಮುಕಿದ್ದಾರೆ . ಅದೇ ರೀತಿ ನಾವು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದು , ನಮ್ಮ ಈ ಹೋರಾಟ ಯಾವುದೇ ಧರ್ಮ , ಸಂಘಟನೆ ಅಥವಾ ವ್ಯಕ್ತಿಗಳ ವಿರುದ್ದವಲ್ಲ , ಬದಲಾಗಿ ನ್ಯಾಯಕ್ಕಾಗಿ ಮಾತ್ರವೆಂದು ಹೇಳಿದರು . ಪ್ರಪಂಚದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ವಿಶೇಷ ಗೌರವವಿದೆ . ಸಾಮಾಜಿಕ ನ್ಯಾಯ , ಸರ್ವಧರ್ಮಗಳಿಗೆ ರಕ್ಷಣೆ ಪೋಷಣೆ ಮತ್ತು ಸೌಹಾರ್ದ ಬದುಕಿಗೆ ಸಂವಿಧಾನ ಅವಕಾಶವನ್ನು ಒದಗಿಸಿದೆ . ಇಂತಹ ನಿಲುವುಗಳಿಗೆ ವಿರುದ್ಧವಾಗಿ ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಕೇಂದ್ರ ಸರ್ಕಾರದ ಧೋರಣೆ ಸಂವಿಧಾನ ಬಾಹಿರವೆಂದು ಅಭಿಪ್ರಾಯಪಟ್ಟರು . ಯಾವುದೇ ರಾಷ್ಟ್ರದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಭಾರತದಲ್ಲಿ ಆಶ್ರಯವನ್ನು ಕೋರಿ ಬರುವವರಿಗೆ ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸಮರ್ಪಕವಲ್ಲ . ಆಶ್ರಯ ಕೋರುವ ಎಲ್ಲಾ ಸಮುದಾಯದವರಿಗೂ ಪೌರತ್ವ ನೀಡಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆಯೆಂದು ತಿಳಿಸಿದ ಅಬ್ದುಲ್ ಹಮೀದ್ ಮುಸ್ಲಿಯಾರ್ , ಸ್ವಾಮಿ ವಿವೇಕಾನಂದರು ಸರ್ವ ಧರ್ಮ ಸಮನ್ವಯತೆಯನ್ನು ಸಾರಿದ ಮಹಾನ್ ವ್ಯಕ್ತಿಯಾಗಿದ್ದು , ಅವರ ಆಶಯಗಳಿಗೂ ಕೇಂದ್ರದ ಧೋರಣೆ ವಿರುದ್ಧವಾಗಿದೆಯೆಂದು ನುಡಿದರು . ಕೇವಲ ಬಹುಮತ ಇದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಸಂವಿಧಾನ ಬಾಹಿರವಾದ ಕಾಯ್ದೆಗಳನ್ನು ಜಾರಿಗೆ ತರುವ ಬದಲು , ಆ ಬಹುಮತವನ್ನು ದೇಶದ ಅಭಿವೃದ್ಧಿಗೆ ಬಳಸಬೇಕು . ಈಶಾನ್ಯ ರಾಜ್ಯವಾದ ಅಸ್ಸಾಮಿನಲ್ಲಿ ಎನ್‌ಆಗ್ನಿಯಿಂದ 19 ಲಕ್ಷ ಜನರು ಪೌರತ್ವದಿಂದ ವಂಚಿತರಾಗಿದ್ದು , ಇವರಲ್ಲಿ 13 ಲಕ್ಷ ಮಂದಿ ಮುಸ್ಲಿಮೇತರರೇ ಆಗಿದ್ದಾರೆ . ಹೀಗೆ ಈ ಕಾಯ್ದೆ ಎಲ್ಲಾ ಧರ್ಮೀಯರಿಗೂ ಸಂಕಷ್ಟವನ್ನು ತಂದೊಡ್ಡಲಿದೆ . ರಾಷ್ಟ್ರಪತಿ ಪದಕ ಪುರರ್ಸ್ಕತ ಸನಾವುಲ್ಲ ಅವರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಾಗದೆ ಜೈಲು ಸೇರುವಂತಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು .
              ಪೌರತ್ವ ಕಾಯ್ದೆಯಲ್ಲಿ ಭಾರತೀಯ ಮುಸ್ಲಿಂ ಸಮುದಾಯದ ಪೌರತ್ವ ರದ್ದಾಗುವ ಪ್ರಸ್ತಾಪವಿಲ್ಲ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು , ಕೇಂದ್ರ ಜಾರಿಗೆ ತಂದಿರುವ ಸಿಎಎಯು ಭಾರತದ ಜಾತ್ಯತೀತ ಪರಿಕಲ್ಪನೆಗೆ ವಿರುದ್ಧವಾಗಿದೆ . ಜಾತಿ ಧರ್ಮದ ಆಧಾರದಲ್ಲಿ ಪೌರತ್ವವನ್ನು ನಿರಾಶ್ರಿತರಿಗೆ ನಿಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ . ಯಾವುದೇ ದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗುವವರಿಗೆ ಧರ್ಮದ ಆಧಾರವನ್ನು ಮೀರಿ ಇಲ್ಲಿ ಪೌರತ್ವವನ್ನು ನೀಡಬೇಕೆಂದು ಸಮರ್ಥಿಸಿಕೊಂಡರು .
          ಸಮನ್ವಯ ಸಮಿತಿಯ ಸಂಯೋಜಕ ಹಫೀಲ್ ಸಅದಿ ಮಾತನಾಡಿ , ಪೌರತ್ವ ಕಾಯ್ದೆಯ ಬಗ್ಗೆ ಜನರಲ್ಲಿರುವ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಜ . 22ರ ಒಳಗಾಗಿ ಜಿಲ್ಲೆಯ ಎಲ್ಲಾ ಮೊಹಲ್ಲಾಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತದೆ . ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾದಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಹೇಳಿದರು . ಸಮಿತಿ ಪದಾಧಿಕಾರಿಗಳು - ವಕ್ಸ್ ಸಲಹಾ ಸಮಿತಿ ಸದಸ್ಯರು ಕೆ . ಎ . ಯಾಕೂಬ್ ಮಾತನಾಡಿ , ಸಮಿತಿಗೆ 25 ಮಂದಿಯನ್ನು ಆಯ್ಕೆ ಮಾಡಲಾಗಿದ್ದು , ಈ ಪೈಕಿ , ಅಧ್ಯಕ್ಷರಾಗಿ ಕೆ . ಎ . ಮುಹಮ್ಮದ್ ಮುಸ್ಲಿಯಾರ್ ಎಡಪಾಲ , ಉಪಾಧ್ಯಕ್ಷರಾಗಿ ಕೆ . ಎ . ಯಾಕೂಬ್ , ಎ . ಎ . ಮುಹಮ್ಮದ್ ಹಾಜಿ , ಮುಖ್ಯ ಸಂಯೋಜಕರಾಗಿ ಎಂ . ಎಂ . ಅಬ್ದುಲ್ಲ ಫೈಝಿ , ಸಂಯೋಜಕರಾಗಿ ಹಫೀಲ್ ಸಅದಿ , ಸಿ . ಎಂ . ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು . ಸುದ್ದಿಗೋಷ್ಠಿಯಲ್ಲಿ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು .

No comments

Post a Comment