ಆತ್ಮವಿಶ್ವಾಸ ಹಾಗು ನಿರಂತರ ಅಭ್ಯಾಸದಿಂದ ಗುರಿ ಮುಟ್ಟಲು ಸಾದ್ಯ -- ವಿಶಾಲಾಕ್ಷಿ ವಿದ್ಯಾರ್ಥಿಗಳಿಗೆ ಕಿವಿ ಮಾತು

No comments
       TOCಅಮ್ಮತ್ತಿ :- ಆತ್ಮವಿಶ್ವಾಸ ಹಾಗು ನಿರಂತರ ಅಭ್ಯಾಸದಿಂದ ಗುರಿ ಮುಟ್ಟಲು ಸಾದ್ಯ ಎಂದು ಅಮ್ಮತ್ತಿಯ ನೆಕ್ಸ್ಟ್ ಜೆನೆರೇಷನ್ ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಜೆ ವಿಶಾಲಾಕ್ಷಿ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
       ಸಮೀಪದ ಸಿದ್ದಾಪುರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆ ಮತ್ತು ಅಂತಿಮ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬ  ವಿಷಯದಲ್ಲಿ ನಡೆಸಲಾದ ಕಾರ್ಯಗಾರದಲ್ಲಿ ಅವರು ಮಾತನಾಡುತ್ತಿದ್ದರು.
      ಪ್ರಶ್ನೆ ಪತ್ರಿಕೆಗಳಿಗೆ ಉತ್ತರಗಳನ್ನು ಯಾವ ರೀತಿಯಲ್ಲಿ ಬರೆಯಬೇಕು ಮೌಲ್ಯಮಾಪಕರು ಯಾವ ರೀತಿಯ ಉತ್ತರಗಳನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಅವರು ವಿದ್ಯಾರ್ಥಿಗಳಿಗೆ ವಿವರಿಸಿ ಕೊಟ್ಟರು.

No comments

Post a Comment