ಸೋಮವಾರಪೇಟೆ TOC : ಇಲ್ಲಿನ ಸ್ವಾಮಿ ವಿವೇಕಾನಂದ
ಜಯಂತ್ಯೋತ್ಸವ ಸಮಿತಿಯ ಆಶ್ರಯದಲ್ಲಿ ಮಾನಸ
ಸಭಾಂಗಣದಲ್ಲಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ
ಕಾರ್ಯಕ್ರಮವನ್ನು ಆಚರಿಸಲಾಯಿತು. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು
ದೇಶದ ಯುವ ಜನಾಂಗದ ಮೇಲೆ ಅಪಾರವಾದ ನಂಬಿಕೆ
ಇಟ್ಟಿದ್ದರು. ಅವರ ನಂಬಿಕೆಯನ್ನು ಹುಸಿಗೊಳಿಸದಂತೆ
ಯುವ ಜನಾಂಗ ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ನವ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ಸ್ವಾಮೀಜಿಗಳು,
ಸಮಾಜಕ್ಕೆ ಸಾರ್ವಕಾಲಿಕ ಸ್ಪೂರ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಸವಾಪಟ್ಟಣದ
ತೋಂಟದಾರ್ಯ ಮಠಾಧೀಶರಾದ ಶ್ರೀ ಸ್ವತಂತ್ರ ಬಸವಲಿಂಗ
ಸ್ವಾಮೀಜಿ ಮಾತನಾಡಿ, ವಿವೇಕಾನಂದರು ಭಾರತೀಯರೆಲ್ಲರಿಗೂ
‘ರೋಲ್ ಮಾಡೆಲ್’ ಆಗಬೇಕು. ಅವರಂತೆಯೇ ಎಲ್ಲರೂ
ದೇಶಪ್ರೇಮ ಮತ್ತು ಧರ್ಮನಿಷ್ಠೆಯನ್ನು
ಅಳವಡಿಸಿಕೊಳ್ಳಬೇಕು ಎಂದರು.
ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ
ಶ್ರೀ ಬೋಧಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಎಲ್ಲರೂ
ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು
ಅಳವಡಿಸಿಕೊಳ್ಳಬೇಕು. ತ್ಯಾಗ ಮತ್ತು ಸೇವೆ ನಮ್ಮ
ಧ್ಯೇಯವಾಗಬೇಕು. ವಿವೇಕಾನಂದರ ಜೀವನವನ್ನು
ಅಧ್ಯಯನ ಮಾಡಬೇಕು. ಅವರ ಕನಸಿನ ಭವ್ಯ ಭಾರತ
ನಿರ್ಮಾಣ ಎಲ್ಲರ ಸಂಕಲ್ಪವಾಗಬೇಕು ಎಂದರು.
ಕಿರಿಕೊಢ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ,
ಭಾರತೀಯ ಸಂಸ್ಕೃತಿಯ ತಳಹದಿಯನ್ನು ವಿದೇಶಕ್ಕೂ
ವಿಸ್ತರಿಸಿದ ಮಹಾನ್ ಸಂತ ವಿವೇಕಾನಂದರ ಆದರ್ಶಗಳನ್ನು
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು
ಕಿವಿಮಾತು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ
ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್. ಸದಾನಂದ್ ಮಾತನಾಡಿ,
ಕಳೆದ 7 ವರ್ಷಗಳಿಂದ ಸೋಮವಾರಪೇಟೆಯಲ್ಲಿ
ವಿವೇಕಾನಂದ ಜಯಂತಿ ಆಚರಣೆಯ ಮೂಲಕ ಅವರ
ಚಿಂತನೆಗಳನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯ
ಮಾಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ರಮೇಶ್, ಸಮಿತಿಯ
ಕಾರ್ಯದರ್ಶಿ ಎಸ್. ಮಹೇಶ್, ಖಜಾಂಚಿ ಮೃತ್ಯುಂಜಯ,ಲಕ್ಷ್ಮೀಕಾಂತ್ ಕೋಮರಪ್ಪ,ವಿಜಯ್ ಹಾನಗಲ್,ಅಭಿಷೇಕ್ ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ವಿವಿಧ
ಸ್ಪರ್ಧೆಗಳನ್ನು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ
ವಿತರಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ವಿವೇಕಾನಂದ
ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ವಿವಿಧ ಶಾಲಾ
ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ
ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಡೊಳ್ಳು ಕುಣಿತ
ತಂಡದೊಂದಿಗೆ ವಿವೇಕಾನಂದರ ವಿಚಾರಧಾರೆಗಳ ಜಾಗೃತಿ
ಜಾಥಾ ನಡೆಯಿತು.

No comments
Post a Comment