ವಿ.ಪಿ.ಎಲ್ ಉದ್ಘಾಟನೆ: ನಗರದಲ್ಲಿ ಕ್ರೀಡಾ ಕಲಿಗಳ ಜಾಥ

No comments

ವಿ.ಪಿ.ಎಲ್ ದ್ವೀತಿಯ ಆವೃತ್ತಿ ಟ್ರೋಫಿ ಅನಾವರಣ: ಡಿಸೆಂಬರ್‌ 24ರಿಂದ  ಆರಂಭ: ಅಧಿಕೃತ 12 ತಂಡಗಳು ಒಟ್ಟು 180 ಮಂದಿ ಆಟಗಾರರು



      TOC ವಿರಾಜಪೇಟೆ: ಸ್ನೇಹ ಸೌಹಾರ್ದವನ್ನು ಬಿಂಬಿಸುವ ಕ್ರೀಡಾ ಹಬ್ಬವೆಂದು ಖ್ಯಾತಿಗೊಂಡು ನಗರದಲ್ಲಿ ಆಯೋಜನೆಗೊಂಡ ವಿರಾಜಪೇಟೆ ಪ್ರೀಮಿಯರ್ ಲೀಗ್ ಇಂದು ಉದ್ಘಾಟನೆಗೊಂಡಿತು. ನಗರದಲ್ಲಿ ವಿ.ಪಿ.ಎಲ್ ಅಧಿಕೃತ ತಂಡಗಳ ಕ್ರೀಡಾ ಪಟುಗಳು, ಮಾಲೀಕರು, ವಿ.ಪಿ.ಎಲ್ ಉದ್ಘಾಟನಾ ಜಾಥಕ್ಕೆ ಚಾಲನೆ ನೀಡಲಾಯಿತು.

 ವಿರಾಜಪೇಟೆ ನಗರದ ಯುತ್ ಫ್ರೇಂಡ್ಸ್ ಅಯೋಜಕತ್ವದಲ್ಲಿ ನಗರ ಮತ್ತು ಸುತ್ತಮುತ್ತಲಿನ ಕ್ರೀಡಾ ಪಟುಗಳಿಗೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆರಂಭವಾದ ವಿರಾಜಪೇಟೆ ಕ್ರೀಕೆಟ್ ಪ್ರಿಮೀಯರ್ ಲೀಗ್ ದ್ವೀತಿಯ ಅವೃತ್ತಿಗೆ ಇಂದು ಅಧಿಕೃತ ತಂಡಗಳ ಸದಸ್ಯರು ಮತ್ತು ಮಾಲೀಕರ ಉದ್ಘಾಟನಾ ಜಾಥವು ನಗರದಲ್ಲಿ ಆಯೋಜನೆಗೊಂಡಿತು.



 ಜಾಥವು ನಗರದ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯ ಮುಂಭಾಗದಿಂದ ಮೆಗ್ನೋಲಿಯ ರೆಸಾರ್ಟ್ ವ್ಯವಸ್ಥಾಪಕರಾದ ಪ್ರವೀಣ್ ಅವರು ವಿ.ಪಿ.ಎಲ್ ಅಧಿಕೃತ ಲಾಂಚನ ಮುದ್ರಿತ ಭಾವುಟವನ್ನು ತೋರುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು. ಜಾಥವು ಮುಖ್ಯ ರಸ್ತೆ , ಖಾಸಾಗಿ ಬಸ್ಸು ನಿಲ್ದಾಣ , ಗೋಣಿಕೊಪ್ಪಲು ರಸ್ತೆ ಮಾರ್ಗವಾಗಿ ಸಾಗಿ ಸಂತ ಅನ್ನಮ್ಮ ಕಾಲೇಜು ಮೈಧಾನದಲ್ಲಿ ಅಂತ್ಯಗೊಂಡಿತ್ತು. ವಿ.ಪಿ.ಎಲ್ ಜಾಥದಲ್ಲಿ ಒಟ್ಟು 12 ತಂಡಗಳ ಮಾಲೀಕರು, 180 ಮಂದಿ ಅಟಗಾರರು, ಆಯೋಜಕರು ಭಾಗವಹಿಸಿದ್ದರು.


ಸಂತ ಅನ್ನಮ್ಮ ಪದವಿ ಕಾಲೇಜಿನ ಸಿ.ಪಿ.ಪ್ರಕಾಶ್‌ ಸಭಾಂಗಣದಲ್ಲಿ, ಕೊಡಗಿನಲ್ಲಿ ಪ್ರಥಮ ಭಾರಿಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಟ್ರೋಫಿ ತಯಾರು ಮಾಡುವ ಕಂಪೆನಿಯಿಂದ ತಯಾರಿಸಲ್ಪಟ್ಟ ಟ್ರೋಫಿಯನ್ನು. ವಿರಾಜಪೇಟೆ ನಗರದ ಅರಕ್ಷಕ ವೃತ್ತ ನೀರಿಕ್ಷಕರಾದ ಕ್ಯಾತೆ ಗೌಡ, ನಗರದ ಆರಕ್ಷಕ ಠಾಣಾಧಿಕಾರಿ ಮರಿಸ್ವಾಮಿ, ಟ್ರೋಫಿ ಧಾನಿಗಳಾದ ಸಾಗರ್ ಡೆಕೋರೆಟರ್ಸ್ ಮಾಲೀಕರಾದ ಸಾಗರ್ ಮತ್ತು ಸ್ಪೋಟ್ಸ್ ವಲ್ಡ್ ಮಡಿಕೇರಿ ಮಾಲೀಕರಾದ ಅನ್ಸಫ್ ಮತ್ತು ಅಯೋಜಕರಾದ ಇಂತಿಯಾಜ್, ನೀತಿನ್ ಲೆಪು, ಅಭಿಲಾಶ್, ಶವಾಜ್, ಮೊಹೀನ್ ಟ್ರೋಫಿಯನ್ನು ಅನಾವರಣಗೊಳಿಸಿದರು.


 ವಿ.ಪಿ.ಎಲ್ ಉದ್ಘಾಟನಾ ಜಾಥದಲ್ಲಿ ಅಮ್ಮತಿಯ ರಾಜೇಶ್ ಮತ್ತು ತಂಡದವರಿಂದ ಡಾಮ್‌ ಮತ್ತು ಜರಿಯ ಪ್ರತಿರೂಪಗಳು ಮತ್ತು ಸ್ಥಳಿಯ ಕಲಾವಿದರಿಂದ ಡೊಳ್ಳು ವಾದ್ಯವು ಮೆರಗು ನೀಡಿದವು.

ದಿನಾಂಕ24-12-2019 ರಿಂದ 29-12-2019ರ ವರೆಗಿನ ಆರು ದಿನಗಳ ಕಾಲ ನಡೆಯುವ ಲೀಗ್ ಕ್ರೀಕೆಟ್ ಪಂದ್ಯಾಟವು ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜು ಮೈಧಾನದಲ್ಲಿ ನಡೆಯಲಿದೆ.

No comments

Post a Comment