TOC ಮಡಿಕೇರಿ :-ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಜಾತಿ ಹಾಗೂ ಧರ್ಮ ರಹಿತ ಸಮಾಜ ನಿರ್ಮಾಣ ಅಗತ್ಯ ಎಂದು ಮಕ್ಕಳ ತಜ್ಞರಾದ ಡಾ.ಬಿ.ಸಿ.ನವೀನ್ ಕುಮಾರ್ ಅವರು ಪ್ರತಿಪಾದಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು, ಕಸಾಪ ಮಡಿಕೇರಿ ಘಟಕ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 115 ನೇ ಜನ್ಮ ದಿನಾಚರಣೆ ಪ್ರಯುಕ್ತ ಕುವೆಂಪು ಅವರ ‘ಬದುಕು ಬರಹ’ ಶೀರ್ಷಿಕೆಯಡಿ ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಗರದ ಡಿ.ದೇವರಾಜ ಅರಸು ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಜನರು ಕುವೆಂಪು ಅವರ ವಿಚಾರಧಾರೆಗಳು ತಿಳಿದುಕೊಳ್ಳುವುದು ಅಗತ್ಯಗತ್ಯವಾಗಿದೆ. ಜಾತಿ, ಧರ್ಮ ಒಳ್ಳೆಯದಲ್ಲ ಎಂಬುದನ್ನು ಕುವೆಂಪು ಅವರು ಸಾರಿದ್ದರು, ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬುದನ್ನು ಪ್ರತಿಪಾದಿಸಿದ್ದರು. ಆ ನಿಟ್ಟಿನಲ್ಲಿ ಕುವೆಂಪು ಅವರ ವಿಚಾರ, ಸಿದ್ಧಾಂತ ಕುರಿತು ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದರು.
ಕುವೆಂಪು ಅವರ ಕಥೆ, ಕವನ, ಸಾಹಿತ್ಯ, ಇಡೀ ಸಮಾಜಕ್ಕೆ ಬೆಳಕು ಚೆಲ್ಲುತ್ತದೆ. ಹಾಗೆಯೇ ರಾಮಾಯಣ ದರ್ಶನಂ ಸಾಹಿತ್ಯಕ್ಕೆ ಪುರಾಣದ ಬದಲಾಗಿ ಆಧ್ಯಾತ್ಮಿಕತೆಯ ಸ್ಪರ್ಶ ನೀಡಿದ್ದರು. ಇವರ ಬರಹಗಳು ಸಮಾಜದಲ್ಲಿ ಬೆಳಕು ಚೆಲ್ಲುವುದರ ಜೊತೆಗೆ ಭೌದ್ಧಿಕ ಪ್ರಬುದ್ಧತೆಯನ್ನು ಹೆಚ್ಚಿಸುತ್ತದೆ ಎಂದು ಡಾ.ಬಿ.ಸಿ.ನವೀನ್ ಕುಮಾರ್ ಅವರು ಪ್ರತಿಪಾದಿಸಿದರು.
ಸಮಾಜದ ಅಭಿವೃದ್ಧಿಗೆ ವಚನ ಸಾಹಿತ್ಯ, ದಾಸ ಸಾಹಿತ್ಯ, ನವೋದಯ, ನವ್ಯ, ಬಂಡಾಯ ಹೀಗೆ ಹಲವು ಸಾಹಿತ್ಯ ವಿಚಾರಗಳನ್ನು ಓದಿ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಕುವೆಂಪು ಅವರು ಮೌಢ್ಯಗಳನ್ನು ಧಿಕ್ಕರಿಸಿ ವೈಚಾರಿಕತೆಯನ್ನು ಪ್ರತಿಪಾದಿಸಿದ್ದರು. ಪ್ರಶ್ನೆ ಮಾಡುವ ಮನೋಭಾವ ಇರಬೇಕು ಎಂದು ಹೇಳಿದ್ದರು. ವೈಚಾರಿಕವಾಗಿ ಯೋಚಿಸಬೇಕು ಎಂಬುದನ್ನು ತಿಳಿಸಿದ್ದರು. ಹಾಗೆಯೇ ಮಂತ್ರ ಮಾಂಗಲ್ಯದ ಮೂಲಕ ಸರಳ ವಿವಾಹಕ್ಕೆ ಒತ್ತು ನೀಡಿದ್ದರು ಎಂದರು.
ಕನ್ನಡ ಭಾಷೆಯ ಆಸ್ಮಿತೆಯನ್ನು ಉಳಿಸಬೇಕು. ಸಾಹಿತ್ಯ ಕ್ಷೇತ್ರ ಸಂಘಟನಾತ್ಮಕವಾಗಿ ಬೆಳೆಯಬೇಕು. ಸಾಹಿತ್ಯವು ಹಲವು ಭೌದ್ಧಿಕ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತರಾದ ಎಚ್.ಟಿ.ಅನಿಲ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪುಸ್ತಕ ಮಳಿಗೆ ತೆರೆಯುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಹೊಸ ಹೊಸ ಕನ್ನಡ ಪುಸ್ತಕಗಳು ಬಂದಾಗ ಸಾಹಿತ್ಯಾಸಕ್ತರು ಮತ್ತು ಓದುಗರು ಕೊಂಡುಕೊಳ್ಳಲು ಪುಸ್ತಕ ಮಳಿಗೆ ಅತ್ಯಗತ್ಯವಾಗಿದ್ದು, ಆದ್ದರಿಂದ ಕನ್ನಡ ಪುಸ್ತಕ ಮಳಿಗೆ ತೆರೆಯುವಂತಾಗಬೇಕು ಎಂದು ಅವರು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಹೆಚ್ಚಿನ ಒತ್ತೇಜನ ನೀಡುವ ಕೆಲಸ ಮಾಡುತ್ತಿದೆ. ಸ್ಥಳೀಯ ಪತ್ರಿಕೆಗಳು ಸಹ ಪ್ರೋತ್ಸಾಹ ನೀಡುತ್ತಾ ಬಂದಿವೆ, ಅವುಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವಂತಾಗಬೇಕು. ಕುವೆಂಪು ಅವರ ಸಿದ್ಧಾಂತ, ಆಶಯ ಮತ್ತು ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್.ಎಂ.ಚಂಗಪ್ಪ ಅವರು ಮಾತನಾಡಿ ಕುವೆಂಪು ಅವರು ಸೇರಿದಂತೆ ಎಲ್ಲಾ ದಾರ್ಶನಿಕರ ಜೀವನ ಚರಿತ್ರೆಯನ್ನು ಯುವಜನರಿಗೆ ಪರಿಚಯಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ ಬೆಳವಣಿಗೆಗೆ ಶ್ರಮಿಸುತ್ತಿವೆ ಎಂದು ಚಂಗಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಸಾಹಿತ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೆಚ್ಚಿನ ಶ್ರಮ ವಹಿಸುತ್ತಿದೆ. ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕನ್ನಡ ಭಾಷಾ ಪತ್ರಿಕೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರೋತ್ಸಾಹಿಸಿಕೊಂಡು ಬರಲಾಗಿದೆ ಎಂದರು.
ಇದೇ ಪ್ರಥಮ ಬಾರಿಗೆ ಕುವೆಂಪು ಅವರ ಬದುಕು ಬರಹ ಕುರಿತು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್, 29 ರಂದು ಕುವೆಂಪು ಜನ್ಮ ದಿನಾಚರಣೆ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮೋಹನ್ ಕುಮಾರ್ ಅವರು ಮಾತನಾಡಿದರು. ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷರಾದ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ, ಡಾ.ದಯಾನಂದ, ಅಮೆಚೂರು ಲೋಕನಾಥ್, ಕೋಡಿ ಚಂದ್ರಶೇಖರ್, ಉ.ರಾ.ನಾಗೇಶ್, ಪ್ರಸನ್ನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಮೇಶ್, ಇತರರು ಇದ್ದರು.
ಎಸ್.ಎಂ.ಚಂಗಪ್ಪ, ಡಾ.ಬಿ.ಸಿ.ನವೀನ್ ಕುಮಾರ್, ಅಂಬೆಕಲ್ಲು ಕಶಾಲಪ್ಪ, ಎಚ್.ಟಿ.ಅನಿಲ್, ಮೋಹನ್ ಕುಮಾರ್ ಅವರನ್ನು ಕಸಾಪ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು. ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಷಾ ರಾಣಿ ಅವರು ನಿರೂಪಿಸಿ, ವಂದಿಸಿದರು. ಸಾಹಿತಿ ಎಸ್.ಎಲ್.ಶೇಷಗಿರಿ ರಾವ್ ನಿಧನಕ್ಕೆ ಇದೇ ಸಂದರ್ಭದಲ್ಲಿ ಸಂತಾಪ ಸೂಚಿಸಲಾಯಿತು

No comments
Post a Comment