ವರದಿ: ಶಿಬಿಲಿ ಕಲ್ಕಂದೂರು
ಸೋಮವಾರಪೇಟೆ ( TOC ನ್ಯೂಸ್) : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF) ಸೋಮವಾರಪೇಟೆ ಡಿವಿಷನ್ ಸಮಿತಿಯ ಹಾಗೂ QTEAM ವತಿಯಿಂದ ನಾಳೆ ಡಿವಿಷನ್ ಗೊಳಪಟ್ಟ ಸೆಕ್ಟರ್ ಕೇಂದ್ರಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 8:00 ಗಂಟೆಗೆ ಹೊಸತೋಟದಲ್ಲಿ SSF ಕೊಡಗು ಜಿಲ್ಲಾಧ್ಯಕ್ಷರಾದ ಅಝೀಝ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಂತರ ಮಾದಪುರದಲ್ಲಿ 9:00 ಗಂಟೆಗೆ, ಸುಂಟಿಕೊಪ್ಪದಲ್ಲಿ 10:00 ಗಂಟೆಗೆ, ಕುಶಾಲನಗರದಲ್ಲಿ 11:15ಗಂಟೆಗೆ, ಕೂಡಿಗೆಯಲ್ಲಿ 12:30 ಗಂಟೆಗೆ, ಶನಿವಾರಸಂತೆಯಲ್ಲಿ 2:00 ಗಂಟೆಗೆ, ಕೊಡ್ಲಿಪೇಟೆಯಲ್ಲಿ 3:00 ಗಂಟೆಗೆ ಹಾಗೂ ಸೋಮವಾರಪೇಟೆಯಲ್ಲಿ 4:45ಗಂಟೆಗೆ ಕಾರ್ಯಕ್ರಮ ನಡೆಯಲಿದೆ.ಗಾಂಧೀಜಿಯ ಕನಸು ನನಸಾಗಲಿ ಎಂಬ ಧೇಯ್ಯದಲ್ಲಿ ಹಲವು ಕಡೆಗಳಲ್ಲಿನ ಕಾರ್ಯಕ್ರಮಗಳಲ್ಲಿ SSF ಸೋಮವಾರಪೇಟೆ ಡಿವಿಷನ್ ಅಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಭಾಷಣ ಮಾಡಲಿದ್ದಾರೆ.
