"ವಿದ್ಯಾರ್ಥಿಗಳ ಭವಿಷ್ಯ ಮಾಧಕವಸ್ತುಗಳಿಂದ ಮಾರಕವಾಗದಿರಲಿ : ಹುಸೈನ್ ಮುಹೀನಿ"
ಪುತ್ತೂರು: ಕರ್ನಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ರಾಜ್ಯ ಸಮಿತಿಯ ನಿರ್ದೇಶನದಂತೆ, ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ವತಿಯಿಂದ ಆಯೋಜಿಸಿದ ಮಾಧಕದ್ರವ್ಯದ ವಿರುದ್ಧ ಜನಜಾಗೃತಿ ಕಾರ್ಯಕ್ರಮವು ಅ.೨ ರಂದು ಪುತ್ತೂರು ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ನಡೆಯಿತು.
-----ಕ್ಯೂ ಟೀಂ ಸದಸ್ಯರಿಂದ ಕಾಲ್ನಡಿಗೆ ಜಾಥಾ----
ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್‌ನ ಆಯ್ದ ಕ್ಯೂ ಟೀಂ ಸದಸ್ಯರಿಂದ ಪುತ್ತೂರು ಮಿನಾರ್ ಕಾಂಪೆಕ್ಸ್‌ನಲ್ಲಿರುವ ಸುನ್ನೀ ಸೆಂಟರ್‌ನಲ್ಲಿ ಎಸ್‌ವೈಎಸ್ ಬನ್ನೂರು ಬ್ರಾಂಚ್ ಉಪಾಧ್ಯಕ್ಷ ಅಸ್ಸಯ್ಯದ್ ಉಮರ್ ತಂಙಳ್ ಬನ್ನೂರು ದುಆ ಮೂಲಕ ಜಾಥಾಕ್ಕೆ ಚಾಲನೆ ನೀಡಿ ಆರಂಭಗೊಂಡ ಜಾಥಾವು ಪುತ್ತೂರು ರಾಜಬೀದಿಗಳಲ್ಲಿ ಸಾಗಿ ಮಾಧಕದ್ರವ್ಯದ ವಿರೋಧದ ಘೋಷವಾಕ್ಯಗಳೊಂದಿಗೆ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಬಳಿ ಕೊನೆಗೊಂಡ ಜಾಥಾವು ಬಳಿಕ ಸಾರ್ವಜನಿಕ ಬೀದಿ ಭಾಷಣ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಿದ್ದ ಕೆ.ಜಿ.ಎನ್. ಪ್ರಧಾನ ಮುದರೀಸ್ ಹುಸೈನ್ ಮುಹೀನಿ ಮಾರ್ನಾಡ್ ಅವರು ಮಾತನಾಡಿ, ೨೧ನೇ ಶತಮಾನದಲ್ಲಿ ಎದುರಿಸುತ್ತಿರುವ ಅತ್ಯಂತ ದೊಡ್ಡ ಪಿಡುಗು ಮಾಧಕವಸ್ತುಗಳ ಬಳಕೆ ಮತ್ತು ಈ ವರ್ತಮಾನದಲ್ಲಿ ಕ್ಯಾಂಪಸ್‌ಗಳು ಕೂಡ ಮಾಧಕದ್ರವ್ಯಕ್ಕೆ ಬಲಿಯಾಗುತ್ತಿರುವುದು ಖೇದಕರ ಸಂಗಾತಿ, ಪವಿತ್ರ ಇಸ್ಲಾಂ ೧೪೦೦ ವರ್ಷಗಳ ಹಿಂದೆಯೇ ಈ ಪಿಡುಕಗಳ ವಿರುದ್ಧವಾಗಿ ಧ್ವನಿ ಎತ್ತಿದ ಸಂದೇಶವನ್ನು ನೀಡಿದೆ, ಮಾಧಕವಸ್ತುಗಳ ವಿರುದ್ಧವಾಗಿ ಸಮಾಜಕ್ಕೆ ಸ್ಪಷ್ಟ ಸಂದೇಶದೊಂದಿಗೆ ಎಸ್ಸೆಸ್ಸೆಫ್ ಕಳೆದ ೩ ದಶಕಗಳಿಂದ ಕರ್ನಾಟಕದಲ್ಲಿ ಧ್ವನಿ ಎತ್ತುತ ಬಂದಿದೆ ಮುಂದೆಯು ಧ್ವನಿ ಎತ್ತಲಿದೆ ಎಂದು ಅವರು ತಿಳಿಸಿದರು.
ಎಸ್ಸೆಸ್ಸೆಫ್ ಪುತ್ತೂರು ಟೌನ್ ಯುನಿಟ್ ಪ್ರಧಾನ ಕಾರ್ಯದರ್ಶಿ ರಾಫೀ ನಗರ ಮಾತನಾಡಿ, ಮಾಧಕ ವಸ್ತುಗಳ ವಿರುದ್ಧ ಧ್ವನಿ ಎತ್ತಿ ಜಾಗೃತಿ ಮೂಡಿಸಬೇಕಾದದ್ದು ಅನಿವಾರ್ಯವಾಗಿದ್ದು ೨೫೦ ಮಿಲಿಯನ್ ಜನರು ಜಗತ್ತಿನಾದ್ಯಂತ ಈ ಪಿಡುಗಿಗೆ ಬಲಿಯಾಗಿರುವ ಅಂಕಿ ಅಂಶಗಳ ವ್ಯಾಪ್ತಿಯನ್ನು ಬುಡ ಸಮೇತ ಕಿತ್ತೋಗೆಯಲು ಪ್ರತಿಯೊಬ್ಬರು ಮುಂದೆ ಬರಬೇಕೆಂದು ಎಂದು ಅವರು ಹೇಳಿದರು.
ಅಸ್ಸಯ್ಯದ್ ಸಾಬೀತ್ ಮುಹೀನಿ ಪಾಟ್ರಕೋಡಿ , ಎಸ್‌ವೈಎಸ್ ಟೀಂ ಇಸಬಾ ಝೋನಲ್ ಅಮೀರ್ ಇಕ್ಬಾಲ್ ಬಪ್ಪಳಿಗೆ, ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಖಾಸಿಮಿ, ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಅಧ್ಯಕ್ಷ ಝುಬೈರ್ ಸಖಾಫಿ ಗಟ್ಟಮನೆ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಈಸ್ಟ್ ಝೋನ್ ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ,ಎಸ್ಸೆಸ್ಸೆಫ್ ಜಿಲ್ಲಾ ಸದಸ್ಯ ರಝಾಕ್ ಸಹದಿ ಕೊಡಿಪ್ಪಾಡಿ, ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ, ಎಸ್‌ವೈಎಸ್ ಬನ್ನೂರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು, ಎಸ್‌ವೈಎಸ್ ಕಬಕ ಬ್ರಾಂಚ್ ಅಧ್ಯಕ್ಷ ಸಿದ್ದೀಕ್ ಹಾಜಿ ಕಬಕ , ಎಸ್‌ವೈಎಸ್ ಕಬಕ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಹಾಜಿ ಕಬಕ, ಪುತ್ತೂರು ಡಿವಿಷನ್ ಕೋಶಾಧಿಕಾರಿ ಮಜೀದ್ ಕಬಕ, ಪುತ್ತೂರು ಡಿವಿಷನ್ ಉಪಾಧ್ಯಕ್ಷ ಸಮೀರ್ ಬನ್ನೂರು,ಜತೆ ಕಾರ್ಯದರ್ಶಿ ಹಾರೀಶ್ ಅಡ್ಕ , ಕ್ಯೂ ಟೀಂ ಡಿವಿಷನ್ ಕಂಟ್ರೋಲರ್ ಹಮೀದ್ ಸಖಾಫಿ ರೆಂಜ, ಕ್ಯೂ ಟೀಂ ಅಮೀರ್ ಹೈದರ್ ಅಲಿ ಸಹದಿ, ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ನಾಯಕರಾದ ಸೈಫುಲ್ಲಾ ಸಹದಿ ಬನ್ನೂರು ,ಸಿದ್ದೀಕ್ ಹಾಜಿ ಕಬಕ, ಉವೈಸ್ ಬೀಟಿಗೆ, ಸಫ್ವಾನ್ ಕಬಕ, ಎಸ್ಸೆಸ್ಸೆಫ್ ಬನ್ನೂರು ಶಾಖೆ ಪ್ರಧಾನ ಕಾರ್ಯದರ್ಶಿ ಬಾತೀಶ್ ಬನ್ನೂರು, ಹಾರೀಸ್ ಕೋಣಿಮಾರ್, ರಾಷೀದ್ ಮುಕ್ವೆ ಸಹಿತ ಹಲವಾರು ನಾಯಕರು ಉಪಸ್ಥಿತರಿದರು.
ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಅಧ್ಯಕ್ಷ ಸಲಾಂ ಹನೀಫಿ ಕಬಕ ಸ್ವಾಗತಿಸಿ , ಪ್ರಧಾನ ಕಾರ್ಯದರ್ಶಿ ಶಿಹಾಬು ರೆಹಮಾನ್ ಹಸನ್ ನಗರ ವಂದಿಸಿದರು.



No comments
Post a Comment