ಮಡಿಕೇರಿ (TOC ನ್ಯೂಸ್) : ಭಾರತದಲ್ಲಿ ಜಾರಿಯಲ್ಲಿರುವ ಹಿತಕಾಗಿ ಸಿವಿಲ್ ಮತ್ತು ಕ್ರಿಮಿನಲ್ ಶಾಸನಗಳಿಗೆ ಸಂಬಂಧಿಸಿದಂತೆ ಹಿರಿಯ ವಕೀಲರಾದ ದಿವಂಗತ ಕೆ.ಎಂ.ಪೊನ್ನಪ್ಪ ಅವರ ಸ್ಮರಣಾರ್ಥ ಕಾನೂನು ಉಪನ್ಯಾಸ ಕಾರ್ಯಕ್ರಮವು ಸೆಪ್ಟೆಂಬರ್, 25 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಎಫ್.ಎಂ.ಕೆ.ಎಂ.ಸಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೆಕರ್, ಎಫ್.ಎಂ.ಕೆ.ಎಂ.ಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗತ್ ತಿಮ್ಮಯ್ಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ, ವಕೀಲರಾದ ಕೆ.ಎಂ.ಮೀನಾ ಕುಮಾರಿ, ಎಂ.ಎ.ನಿರಂಜನ್, ಬಾರ್ ಅಸೋಸಿಯೇಷನ್‍ನ ಅಧ್ಯಕ್ಷರಾದ ಕೆ.ಸ್.ಕವನ್, ಕಾರ್ಯದರ್ಶಿ ಡಿ.ಜಿ.ಕಿಶೋರ್, ಕೋಶಾಧಿಕಾರಿ ಬಿ.ಸಿ.ದೇವಿಪ್ರಸಾದ್ ಇತರರು ಪಾಲ್ಗೊಳಲ್ಲಿದ್ದಾರೆ.
