SKSSF ಸಂಘಟನೆಯಿಂದ ಸೆ 28 ರಂದು ಆಂಬ್ಯುಲೆನ್ಸ್ ಲೋಕಾರ್ಪಣೆ

No comments
*ವರದಿ:ಎಸ್.ಎಂ ಮುಬಾರಕ್* 
Newsline Media 
ಸಿದ್ದಾಪುರ:-  ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿದ್ದಾಪುರದ  ಎಸ್ ಕೆ ಎಸ್ ಎಸ್ ಎಫ್  ಸಂಘಟನೆ ಸಾರ್ವಜನಿಕ ಸೇವೆಗೆ ಆಂಬ್ಯುಲೆನ್ಸ್  ಸೇವೆ ಒದಗಿಸಲು ಮುಂದಾಗಿದೆ.
ದಿವಂಗತ ಉಸ್ಮಾನ್ ಹಾಜಿ  ಅವರ ಜ್ಞಾಪಕಾರ್ಥವಾಗಿ  ದಾನಿಗಳ ಸಹಕಾರದೊಂದಿಗೆ ಎಲ್ಲಾ ವ್ಯವಸ್ಥೆ ಗಳನ್ನೊಳಗೊಂಡ ಅತ್ಯಾಧುನಿಕ ಮಾದರಿಯ ಆ್ಯಂಬ್ಯುಲೆನ್ಸ್ ವಾಹನ ಸಾರ್ವಜನಿಕ ಸೇವೆಗೆ  (ಸೆ 28)ರಂದು ಸಂಜೆ ಗಂಟೆಗೆ  ಲೋಕಾರ್ಪಣೆಗೊಳ್ಳಲಿದೆ ಎಂದು ಎಸ್ ಕೆ ಎಫ್ ಎಸ್ ಎಸ್  ವಲಯ ಸಮಿತಿ ಅಧ್ಯಕ್ಷ ಸರ್ಫುದ್ದೀನ್ ತಿಳಿಸಿದ್ದಾರೆ.
ಕಳೆದ 24ವರ್ಷಗಳಿಂದ ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿದ್ದು  ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ಕೆ ನೆರವು,ಬಡ ಕುಟುಂಬಗಳ ಮನೆ ನಿರ್ಮಾಣಕ್ಕೆ ಹಾಗೂ ರೋಗಿಗಳಿಗೆ ಧನಸಹಾಯ,ಅನಾರೋಗ್ಯಕ್ಕೊಳಗಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಉಚಿತ ಆಕ್ಸಿಜನ್ ವ್ಯವಸ್ಥೆ, ವೈದ್ಯಕೀಯ ಸೇವೆ,ರಕ್ತದಾನ,ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ಕಿಟ್ ವಿತರಣೆ ಕೋವಿಡ್ ಸಂದರ್ಭದಲ್ಲಿ ಪರಿಣಾಮಕಾರಿ ಸೇವೆ ಸೇರಿದಂತೆ ಹಲವಾರು ಸೇವಾ ಮನೋಭಾವದಿಂದ ಸಮಾಜ ಸೇವೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಸಿದ್ದಾಪುರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ಕೊರತೆ ಇರುವುದನ್ನು ಅರಿತು ದಾನಿಗಳ ಸಹಕಾರದೊಂದಿಗೆ ಐಸಿಯು, ಆಕ್ಸಿಜನ್, ವೆಂಟಿಲೇಟರ್,ಇಸಿಜಿ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳಿರುವ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳ್ಳಲಿದೆ.
ಅತ್ಯಂತ ಕಡು ಬಡ ನಿರ್ಗತಿಕರಿಗೆ ಉಚಿತ  ಸೇವೆಯೂ ನೀಡಲು ಸಂಘಟನೆ ಮುಂದಾಗಿದೆ.
ಕೇಂದ್ರ ಮುಶಾವರ ಸದಸ್ಯ ಹಾಗೂ ಜಿಲ್ಲಾ ಉಪ ಖಾಝಿ ಎಂ. ಎಂ ಅಬ್ದುಲ್ಲಾ ಫೈಝಿ ಆಂಬ್ಯುಲೆನ್ಸ್ ಕೀ ಹಸ್ತಾಂತರ ಮಾಡುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ .ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ,ಕೆಪಿಸಿಸಿ ಯುವ ಮುಖಂಡ ಡಾ. ಮಂಥರ್ ಗೌಡ,ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್,ಸಮುದಾಯ ಆರೋಗ್ಯ ಕೇಂದ್ರದ ಡಾ.ರಾಘವೇಂದ್ರ,ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ. ಕೆ ಹಕೀಂ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗಿಸ್,ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್,
ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ,ವಕೀಲರಾದ ಎಂ. ಎಸ್ ವೆಂಕಟೇಶ್, ಅಜರುದ್ದೀನ್, 
ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಮುಸ್ತಫಾ ಹಾಜಿ,ಕಾರ್ಯದರ್ಶಿ ರವೂಫ್ ಹಾಜಿ,ಮಸೀದಿಯ ಖತೀಬ್ ನೌಫಲ್ ಹುದವಿ, ಎಸ್ ಕೆ ಎಸ್ ಎಸ್ ಎಫ್  ಜಿಲ್ಲಾ ಸಮಿತಿ ಅಧ್ಯಕ್ಷ ತಮ್ಲಿಕ್ ದಾರಿಮಿ,
ಬೆಂಗಳೂರು ಎಸ್ ವೈಎಸ್ ಪ್ರಧಾನ ಕಾರ್ಯದರ್ಶಿ ಲತೀಫ್ ಹಾಜಿ, ಟ್ರಸ್ಟ್ ಕಾಫಿ ಮುಖ್ಯಸ್ಥ ಅಹ್ಮದ್ ಕುಟ್ಟಿ ಹಾಜಿ, 
ಕೆಎಂಸಿಸಿ ಚಾಲಕ ಹನೀಫ್, ಪ್ರಮುಖರಾದ ಉಸ್ಮಾನ್ ಫೈಝಿ,ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಸಿಪಿಎಂ ಬಶೀರ್ ಹಾಜಿ, ಉಮ್ಮರ್ ಫೈಝಿ,ಆರಿಫ್ ಫೈಝಿ, ನೆಲ್ಯಹುದಿಕೇರಿ ಉದ್ಯಮಿ  ಸಬಾಸ್ಟಿನ್, ಸಮಾಜಸೇವಕ ಕೆ. ಎಂ ಬಶೀರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

No comments

Post a Comment