ಪಾಲಿಬೆಟ್ಟದಲ್ಲಿ ಮೂರನೇ ವರ್ಷದ ಸಾಮೂಹಿಕ ಸುನ್ನತ್ ಕಾರ್ಯಕ್ರಮ

No comments
ಪಾಲಿಬೆಟ್ಟ : ಎಸ್ ಎಸ್ ಎಫ್ ಹಾಗೂ ಎಸ್ ವೈ ಎಸ್ ಸಂಘಟನೆ  ವತಿಯಿಂದ   ಮೂರನೇ ವರ್ಷದ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮವು  ಪಾಲಿಬೆಟ್ಟ ಜುಮಾ ಮಸ್ಜಿದ್ ಅವರಣದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ   45 ಮಕ್ಕಳಿಗೆ ಉಚಿತವಾಗಿ ನಡೆಸಲಾಯಿತು.ಪಾಲಿಬೆಟ್ಟ ವಲಯದ  ಎಸ್ ಎಸ್ ಎಫ್ ಸಂಘಟನೆಯ  ಅಧ್ಯಕ್ಷ ಶಿಹಾಬುದ್ದೀನ್ ಅಹ್ಸನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಸ್ಲಿಂ ಸಮುದಾಯದ ಕಡ್ಡಾಯ ಕರ್ಮಗಳಲ್ಲಿ    ಒಂದಾದ ಸುನ್ನತ್ ಕಾರ್ಯದಲ್ಲಿ  ಸುತ್ತಮುತ್ತಲಿನ  ಜನರ ಸಹಕಾರದಿಂದ ಮೂರನೇ ವರ್ಷವೂ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದ ಅವರು ಸಂಘಟನೆ ನಿರಂತರವಾಗಿ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದು ಸಮಾಜ ಸೇವಾ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು  ಕಾರ್ಯಕರ್ಮದ ಅಂಗವಾಗಿ  ಪಾಲಿಬೆಟ್ಟದ ಅರ್ಕಾಡ್ ಪಟ್ಟಾಣ್ ಬಾಬಾ ಶಾಹ್ ವಲಿರವರ ದರ್ಗ ಜಿಯಾರತ್ ಮಾಡಲಾಯಿತು.ಸುನ್ನತ್ ಕಾರ್ಯದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಸಿಹಿ ಹಂಚುವುದರ ಮೂಲಕ  ಔಷದಿ ಹಾಗೂ ಹಣ್ಣು ಹಂಪಲು ಕಿಟ್ ಗಳನ್ನು  ನೀಡಲಾಯಿತು.ಈ ಸಂದರ್ಭ ಪಾಲಿಬೆಟ್ಟ ಜುಮಾ ಮಸೀದಿಯ ಖತೀಬ್  ಅಲಿ ಸಖಾಫಿ  ಪ್ರಾರ್ಥನೆ ನೆರವೇರಿಸಿ ಶಾಂತಿ ಸಹಬಾಳ್ವೆಯ ನೆಮ್ಮದಿಯ ಜೀವನ ನಡೆಸುವಂತೆ ಶುಭ ಕೋರಿದರು. ಪಾಲಿಬೆಟ್ಟ ಜುಮಾ ಮಸೀದಿ ಅಧ್ಯಕ್ಷ ಡಿ. ಎ ಹಾರಿಸ್ ಹಾಜಿ,  ಉಪಾಧ್ಯಕ್ಷ  ಸೈನುದ್ದೀನ್, ಕಾರ್ಯದರ್ಶಿ ಪಿ. ಎನ್ ಹನೀಫಾ, ಕೋಶಾಧಿಕಾರಿ ಟಿ.ಕೆ ಮುಸ್ತಫಾ, ಎಸ್ ವೈ ಎಸ್ ಅಧ್ಯಕ್ಷ ಡಿ. ಎ ಅಲಿ ಅಕ್ಬರ್ ಸೇರಿದಂತೆ ಸಂಘಟನೆಗಳ ಪ್ರಮುಖರು ಹಾಗೂ ಜುಮಾ ಮಸೀದಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು .

No comments

Post a Comment