ತಲಸ್ಸೇಮಿಯ ಮೇಜರ್ ಎಂಬ ಮಾರಕ ಕಾಯಿಲೆಗೆ ತುತ್ತಾದ ಕೊಡಗಿನ 8 ವರ್ಷದ ಮಗು ಸಿನಾನ್ : ಚಿಕಿತ್ಸೆಗೆ ಬೇಕು 40 ಲಕ್ಷ...!

No comments

ಚಿಕಿತ್ಸೆಗೆ ಬೇಕಾದ 40 ಲಕ್ಷ ಹೊಂದಿಸಲು ಕೈ ಜೋಡಿಸಿದೆ ಎಂ ಎನ್ ಜಿ ಫೌಂಡೇಶನ್...

𝗗𝗔𝗧𝗘 : 09|08|2021

ಮಡಿಕೇರಿ (web@timesofcoorg.in): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವಿದ್ಯಾನಗರ ಎಂಬಲ್ಲಿನ ನಿವಾಸಿಯಾದ  ಪಿ.ಎಸ್. ಸಾಹಿರಾ ಎಂಬವರ ಎಂಟು ವರ್ಷದ ಸಿನಾನ್ ಎಂಬ ಮಗುವಿನ ಚಿಂತಾಜನಕ ಅಸಹನೀಯ ಕಣ್ಣೀರ ವಿಷಯವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಆರ್ಥಿಕವಾಗಿ ತೀರಾ  ಸಂಕಷ್ಟದಲ್ಲಿರುವ ಈ ತಾಯಿಯು ಮೂಟೆ ಹೊತ್ತುಕೊಂಡು ಮನೆಮನೆ ತೆರಳಿ ದಿನ ಬಳಕೆಯ ಬಟ್ಟೆ ವ್ಯಾಪಾರ ಮಾಡಿ ತನ್ನ ಜೀವನವನ್ನು ಸಾಗಿಸುತ್ತಾ ಮಗುವಿಗೆ ಔಷಧಿಯನ್ನು ತರುತ್ತಿದ್ದರು.ಆ ತಾಯಿಯು ತಂದಂತಹ ಔಷಧಿಗಳನ್ನು ವಿಡಿಯೋ ಮೂಲಕ ನೀವು ನೋಡಿದರೆ ಬೆಚ್ಚಿ ಬೀಳುವಿರಿ. ಅಷ್ಟೊಂದು ಖರ್ಚು ಮಾಡುತ್ತಿರುವ ಆ ಮಗುವಿಗೆ ನಾವೂ ಸ್ವಲ ಕೈ ಜೋಡಿಸಲೇಬೇಕು.ಮಾತ್ರವಲ್ಲದೆ ಒಂದೊಂದು ಸಲ ಮಗು ಸಿನಾನ್ ಮೂರ್ಚೆಹೋದಂತೆ ಮಲಗಿದರೆ ಅದೆಷ್ಟು ಹೊತ್ತು ಅಮ್ಮ ಅತ್ತು ಗೋಳಾಡಿದರೂ ಎದ್ದು ಕಣ್ಣುಬಿಡಲೂ ಆಗದ ಸ್ಥಿತಿಯನ್ನು ಕಂಡ ತಾಯಿಯು ನನ್ನ ಮಗುವಿಗೇನಾಯಿತು ಎಂದು ಎದೆಬಡಿದುಕೊಳ್ಳುತ್ತಾರೆ‌.

ಗಂಡ ಬಿಟ್ಟು ಹೋಗಿ ಮೂರು ವರ್ಷ ಕಳೆದಿದ್ದು, ತನ್ನ ಎಂಟು ವರ್ಷದ ಮಗುವಿಗೆ ಸಾಧಾರಣ ರೋಗ ಉಲ್ಬಣಗೊಂಡು ತಲಸ್ಸೇಮಿಯ ಮೇಜರ್ ಎಂಬ ಮಾರಕ ಕಾಯಿಲೆಗೆ ಪರಿವರ್ತನೆಯಾಗಿದೆ. ಈ ಕಾಯಿಲೆಗೆ ಬೋನ್ ಮ್ಯಾರೊ ಟ್ರಾನ್ಸ್‌ಪ್ಲೇಂಟ್ ಎಂಬ ಚಿಕಿತ್ಸೆ ನಡೆಸಲು ಬರೋಬ್ಬರಿ 40 ಲಕ್ಷಗಳು ಬೇಕಾಗಿದೆ ಎಂದು ವೈದ್ಯರು ತಿಳಿಸುತ್ತಾರೆ. ಈ ಶಸ್ತ್ರಚಿಕಿತ್ಸೆಯನ್ನು ಮಗುವಿಗೆ ಎಂಟು ವರ್ಷ ತುಂಬುವುದರ ಒಳಗಾಗಿ ಮಾಡಬೇಕಾಗಿದೆ.

ಮಗುವಿಗೆ ಎಂಟು ವರ್ಷ ತುಂಬಲು ಇನ್ನು ಕೇವಲ 13 ದಿನಗಳಷ್ಟೇ ಬಾಕಿ ಉಳಿದಿದೆ. ಈ 13 ದಿನಗಳ ಒಳಗೆ ಬರೋಬ್ಬರಿ 40 ಲಕ್ಷವನ್ನು ಹೊಂದಿಸಬೇಕಾಗಿದೆ.ಆತ್ಮೀಯ ಸಹೃದಯಿ ದಾನಿಗಳೇ ನಿಮ್ಮ ಕೈಯಲ್ಲಿ ಆಗುವಂತಹ  ಸಹಾಯಧನವನ್ನು ಮಗುವಿನ ಚಿಕಿತ್ಸೆಗಾಗಿ ನೀಡಿ ಸಹಕರಿಸಿ. ಖಂಡಿತವಾಗಿಯೂ ನೀವು ನೀಡಿದಂತಹ ದಾನಕ್ಕೆ ದೇವರು ತಕ್ಕದಾದ ಪ್ರತಿಫಲ ನೀಡುತ್ತಾನೆ. ಈ ಮಗುವಿನ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಹಾಗೂ ಮಗುವಿನ ಜೀವವನ್ನು ಉಳಿಸಲು ನಿಮ್ಮ ಕೈಯಲ್ಲಾಗುವ ಸಹಾಯವನ್ನು ಮಾಡಬೇಕಾಗಿ 𝐌𝐍𝐆 𝐅𝐎𝐔𝐍𝐃𝐀𝐓𝐈𝐎𝐍(𝐑) ಸಂಸ್ಥೆಯು ನಿಮ್ಮ ಮುಂದೆ ಕೇಳಿಕೊಳ್ಳುತ್ತಿದೆ.


𝗕𝗮𝗻𝗸 𝗔𝗰𝗰𝗼𝘂𝗻𝘁 𝗗𝗲𝘁𝗮𝗶𝗹𝘀 :

𝗚𝗼𝗼𝗴𝗹𝗲 𝗣𝗮𝘆 | 𝗣𝗵𝗼𝗻𝗲𝗣𝗲

9008785245 - 𝗔𝘆𝗶𝘀𝗵𝗮 | 𝗦𝗔𝗛𝗜𝗥𝗔

𝗔𝗰𝗰𝗼𝘂𝗻𝘁 𝗡𝗮𝗺𝗲 : P S SAHIRA

𝗔𝗰𝗰𝗼𝘂𝗻𝘁 𝗡𝗼 : 19610100039796

𝗜𝗙𝗦𝗖 𝗖𝗼𝗱𝗲 : 𝗙𝗗𝗥𝗟0001961

𝗕𝗿𝗮𝗻𝗰𝗵 : GONIKOPAL

𝗕𝗮𝗻𝗸 : FEDERAL BANK


𝗙𝗼𝗿 𝗠𝗼𝗿𝗲 𝗜𝗻𝗳𝗼𝗿𝗺𝗮𝘁𝗶𝗼𝗻 :

+916366198373 - PATIENT PARTY

+919740904631 - ILYAS 𝗠𝗡𝗚

+9176192 33322 - 𝗪𝗵𝘁𝘀𝗽 𝗠𝗡𝗚

No comments

Post a Comment