ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಕಾರ್ಯಕರ್ತರಿಂದ ಗುಂಡಿ ಬಿದ್ದ ಹದಗೆಟ್ಟ ನಾಪೋಕ್ಲು -ವಿರಾಜಪೇಟೆ ರಸ್ತೆ ದುರಸ್ತಿ

No comments

 


ವರದಿ :ಝಕರಿಯ ನಾಪೋಕ್ಲು (Achru)

ನಾಪೋಕ್ಲು (web@timesofcoorg) : ನಾಪೋಕ್ಲು ವಿನಿಂದ ವಿರಾಜಪೇಟೆಗೆ ಹೋಗುವ ಮುಖ್ಯರಸ್ತೆಯ ಕೊಳಕೇರಿ ಗ್ರಾಮದ ಕೋಟೇರಿ ಬಳಿಯಲ್ಲಿ ರಸ್ತೆಯು ಗುಂಡಿ ಬಿದ್ದು ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾದ ಬಗ್ಗೆ ಇಲ್ಲಿನ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಪತ್ರಿಕೆಯ ಮುಖಾಂತರ ರಸ್ತೆಯನ್ನು ದುರಸ್ತಿ ಪಡಿಸಲು ಲೋಕೋಪಯೋಗಿ ಇಲಾಖೆಯವರ ಗಮನ ಸೆಳೆದರೂ ಯಾವುದೇ ಪ್ರಯೋಜನ ಇಲ್ಲದ್ದನ್ನು ಮನಗಂಡ ಇಲ್ಲಿನ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಘಟನೆಯ ಕಾರ್ಯಕರ್ತರು ಹದಗೆಟ್ಟಿದ್ದ ರಸ್ತೆಯ ಗುಂಡಿಗಳನ್ನು ಮುಚ್ಚಿ ದುರಸ್ತಿ ಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡಿದ್ದಾರೆ.


ಸರ್ಕಾರದ ಲೋಕೋಪಯೋಗಿ ಇಲಾಖೆಯು ಮಾಡಬೇಕಾದ ಕೆಲಸವನ್ನು ಈ ಸಂಘಟನೆಯವರು ಮಾಡಿರುವುದಕ್ಕೆ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಇವರ ಉತ್ತಮ ಕಾರ್ಯಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಈ ಕಾರ್ಯದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕೆ. ವೈ. ಅಶ್ರಫ್ ಕೊಳಕೇರಿ , ಪಿ ಎಫ್ ಐ ನ ವಲಯಾಧ್ಯಕ್ಷ ಅಶ್ರಫ್ ಕುಂಜಿಲ, ಕಾರ್ಯದರ್ಶಿ ರಿಯಾಜ್ ವಯಕೋಲ್, ಎಸ್ ಡಿ ಪಿ ಐ ಕಾರ್ಯಕರ್ತರಾದ ರಜಾಕ್ ಕೊಳಕೇರಿ,ಅಹಮದ್ ಕೊಳಕೇರಿ ಮತ್ತಿತರರು  ಪಾಲ್ಗೊಂಡಿದ್ದರು.





No comments

Post a Comment