ನಾಪೋಕ್ಲು ಗೋಮಾಂಸ ದಂಧೆಯ ಅಡ್ಡೆ - ಕಾವೇರಿ ಟೈಮ್ಸ್ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಪ್ರಕಟ : ಎಸ್ ಡಿ ಪಿ ಐ ಆರೋಪ

No comments

ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg): ನಾಪೋಕ್ಲು ಠಾಣೆಯಲ್ಲಿ ಗೋಮಾಂಸ ಮಾರಾಟ ಸಂಬಂಧ ನೆನ್ನೆ ದಿನ ಪ್ರಕರಣ ದಾಖಲಾಗಿದ್ದು,ಇದರ ಸಂಬಂಧ ಈ ದಿನದ ಕಾವೇರಿ ಟೈಮ್ಸ್  ದಿನಪತ್ರಿಕೆಯಲ್ಲಿ ಆರೋಪಿ ಸಾದಲಿ SDPI ಕಾರ್ಯಕರ್ತ ಎಂಬುದಾಗಿ ವರದಿಯಾಗಿದೆ.
ಹಾಗೂ ನಾಪೋಕ್ಲು ಗೋಮಾಂಸ ದಂಧೆಯ ಅಡ್ಡೆ ಎಂದು ಕೂಡ ಸುಳ್ಳು ಆರೋಪ ಮಾಡಲಾಗಿದೆ.

ಇದರ ಸಂಬಂಧ  PFI ನಾಪೋಕ್ಲು ವಲಯಾಧ್ಯಕ್ಷ K Y  ಆಶ್ರಫ್, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ  ದೂರು ಸಲ್ಲಿಸಲಾಗಿದೆ.
ಅದಲ್ಲದೆ ಆರೋಪಿ ಸಾದಲಿ ಎಂಬವರು SDPI ಪಕ್ಷದ ಸದಸ್ಯರಲ್ಲ, ಈ ಪ್ರಕರಣಕ್ಕೂ ಎಸ್ಡಿಪಿಐಗೆ ಯಾವುದೇ ಸಂಬಂಧವಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಪತ್ರಿಕೆಯು ಒಂದು  ಕೋಮನ್ನು ಗುರಿಯಾಗಿಸಿಕೊಂಡು ಸಣ್ಣ ಸಣ್ಣ ಪ್ರಕರಣಗಳು ದಾಖಲಾಗುವಾಗ  ದೇಶದ್ರೋಹಿ ಕೃತ್ಯ  ಎಂದು ಬಿಂಬಿಸಿ ನಿರಂತರ ಅವಹೇಳನ ಮಾಡುತ್ತಿದ್ದು,
ಇದರ ಸಂಬಂಧ ಹಲವು ಬಾರಿ ಈ ಪತ್ರಿಕೆ ವಿರುದ್ಧ ಪ್ರತಿಭಟನೆ, ಪ್ರಕರಣ ದಾಖಲಾದರು, ಅದೇ ಚಾಳಿ ಮುಂದುವರಿಸಿಕೊಂಡು ಹೋಗುತ್ತಿದ್ದು,
ಈ ರೀತಿ ಮುಂದುವರೆದರೆ ಪತ್ರಿಕೆಯ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ವಲಯ ಕಾರ್ಯದರ್ಶಿ ಸಾದಿಕ್, ಜಿಲ್ಲಾ ಸಮಿತಿ ಸದಸ್ಯ ಉಸ್ಮಾನ್, ಸದಸ್ಯ ಜಮಾಲ್ ಎಮ್ಮೆಮಾಡು ಇದ್ದರು.

No comments

Post a Comment