ಸಂತ್ರಸ್ತ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಕೆಎಂಸಿಸಿ. ಕೊಂಡಂಗೇರಿಯಲ್ಲಿ ಇಂದು ಕೀ ಹಸ್ತಾಂತರ

No comments
ಸಿದ್ದಾಪುರ :ಕೊಂಡಂಗೇರಿ  ಗ್ರಾಮದಲ್ಲಿ  ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದ ಕೆಎಂಸಿಸಿ ವಿರಾಜಪೇಟೆ ವಲಯದ ಸಂಘಟನೆ. ಆ 18 ರಂದು (ಇಂದು) ಮಧ್ಯಾಹ್ನ 2 ಗಂಟೆಗೆ  ಮನೆ ಕೀ ಹಸ್ತಾಂತರ ಮಾಡಲಿದ್ದಾರೆ . ಕೊಡಗು ಜಿಲ್ಲಾ ನಾಯಿಬ್ ಖಾಜಿ ಎಂ.ಎಂ ಅಬ್ದುಲ್ಲಾ ಪೈಝಿ ಪ್ರಾರ್ಥನೆ ನೆರವೇರಿಸಲಿದ್ದು ಎಐಕೆಎಂಸಿಸಿ  ಅಧ್ಯಕ್ಷ ಎಂ.ಕೆ ನೌಷಾದ್ ಮನೆ ಕೀ ಹಸ್ತಾಂತರ ಮಾಡಲಿದ್ದುಕೊಂಡಂಗೇರಿ ಮೈೂದು ಕುಂಇೆ  ಫೈಝಿ ಅಧ್ಯಕ್ಷತೆ ವಹಿಸಲಿದ್ದಾರೆ .  ಸಂಶುಲ್ ಉಲಮಾ   ಎಜುಕೇಷನ್ನಲ್ಲ್  ಅಕಾಡೆಮಿ ಟ್ರಸ್ಟ್ ಅಧ್ಯಕ್ಷ  ಸಿಪಿಎಂ ಬಶೀರ್ ಹಾಜಿ ಸರಳ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.  ಮುಖ್ಯ ಅತಿಥಿಗಳಾಗಿ  ಕೆ.ಎಂ ನಸೀರ್ , ಕುಂಞಿ ಮೊಹಮ್ಮದ್ ಪೈಝಿ, ಷರೀಫ್, ಇಸ್ಮಾಯಿಲ್ ಮುಸ್ಲಿಯಾರ್, ಕೊಂಡಂಗೇರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ ಯೂಸೂಫ್ ಹಾಜಿ,ಮಸೀದಿಯ ಖತೀಬ್ ,ನಾಸಿರ್ ಸಖಾಫಿ,ಕೆಎಂಸಿಸಿ ಜಿಲ್ಲಾ ಸಂಚಾಲಕ ಸಂಶುದ್ದೀನ್ ,ಪ್ರಮುಖರಾದ  ಎ .ಎ ಅಬು,ಕೆ.ಎಂ ಸಾದಲಿ,ಸಿ.ಎಚ್ ಅಲಿ, ಅಬ್ದುಲ್ ರಹ್ಮಾನ್  ,ಪಿ.ಇ ಸಾದಲಿ, ಸಂಶುದ್ದೀನ್ ,ಪಿ.ಎಂ ಅಫ್ಸಲ್  ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕೆ ಎಂ ಸಿ ಸಿ ವಿರಾಜಪೇಟೆ ತಾಲೂಕು ಸಂಚಾಲಕ ಸಿ.ಎಚ್ ರಫೀಕ್ ತಿಳಿಸಿದ್ದಾರೆ

No comments

Post a Comment