ಗ್ರೀನ್ ಝೋನ್ ಆಗಿ ಕೊಡಗು; ಜಿಲ್ಲಾಡಳಿತಕ್ಕೆ ಎಸ್ಸೆಸ್ಸೆಫ್ ಶ್ಲಾಘನೆ

No comments
ಸೋಮವಾರಪೇಟೆ (TIMES OF COORG): ಕೋವಿಡ್-19 ಮಾರಕ ವ್ಯಾಧಿಯು ಕರ್ನಾಟಕವನ್ನು ಕೂಡ ವ್ಯಾಪಿಸಿರುವ ನಡುವೆಯೂ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಅದರ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಕೊಡಗು ಜಿಲ್ಲಾಡಳಿತ ಯಶಸ್ವಿಯಾಗಿರುವುದಕ್ಕೆ  ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಜಿಲ್ಲಾಡಳಿತವನ್ನು ಶ್ಲಾಘಿಸಿದೆ. ಕೊರೋನಾ ಮುಕ್ತ ಜಿಲ್ಲೆಗಳನ್ನು ಗುರುತಿಸುವ ಗ್ರೀನ್ ಝೋನ್ ಪಟ್ಟಿಯಲ್ಲಿ ನಮ್ಮ ಜಿಲ್ಲೆಯು ಸ್ಥಾನ ಪಡೆಯಲು ಜಿಲ್ಲಾಡಳಿತವು ಕೈಗೊಂಡ ಸಕಾಲಿಕವಾದ ಎಚ್ಚರಿಕೆ ಕ್ರಮಗಳೇ ಕಾರಣ. ಇದಕ್ಕಾಗಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಂಬಂಧಪಟ್ಟವರನ್ನು ಮತ್ತು ಉತ್ತಮವಾಗಿ ಸ್ಪಂದಿಸಿದ ನಾಗರಿಕರನ್ನು ಅಭಿನಂದಿಸುವುದಾಗಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ತಿಳಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಕಾರ್ಯಕರ್ತರನ್ನು ಮನೆಯಿಂದ ಹೊರಗಿಳಿಯದಂತೆ ಮಾಡಲು ಮತ್ತು ಮನೆಯಲ್ಲೇ ಉಳಿಯುವಂತೆ ಮಾಡಲು ಪ್ರಚೋದಿಸುವ 'ನಾನು ಮನೆಯಲ್ಲಿದ್ದೇನೆ' ಎಂಬ ಅಭಿಯಾನವನ್ನು ಎಸ್ಸೆಸ್ಸೆಫ್ ಹಮ್ಮಿಕೊಂಡಿತ್ತು.

No comments

Post a Comment