ಕೊಡಗು ದಲಿತ ಸಂಘರ್ಷ ಸಮಿತಿಯಿಂದ ಮೇಕೇರಿಯ ಶಕ್ತಿನಗರದ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ

No comments
ವರದಿ; ರಂಜಿತ್ ಕವಲಪಾರ.

ಮಡಿಕೇರಿ (TIMES OF COORG) :- ಇಂದು ಮಡಿಕೇರಿಯ  ಸಮೀಪದ ಮೇಕೇರಿಯ ಶಕ್ತಿನಗರದ ದಲಿತ ಹಾಗು ಬಡಕುಟುಂಬಗಳಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಆಹಾರ ಕಿಟ್ ವಿತರಿಸಲಾಯಿತು. ಕಿಟ್ ವಿತರಣ ಕಾರ್ಯಕ್ರಮಕ್ಕೂ ಮುನ್ನ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ದಿವಾಕರ್ ರವರು ಕಿಟ್ ವಿತರಣಾ ಕಾರ್ಯಕ್ರಮದ ಕುರಿತು ಮಾತನಾಡಿ "ಕೊರೋನಾ ವೈರಾಣುವಿನ ಕುರಿತು ನಾಗರಿಕರಿಗೆ ಮಾಹಿತಿ ನೀಡಿ, ಸರಕಾರದ ಆದೇಶವನ್ನು ಪಾಲಿಸುವಂತೆ ಕೋರಿಕೊಂಡು, ದಲಿತ ಸಂಘರ್ಷ ಸಮಿತಿಯ ಜನಪರ ಕಾರ್ಯದ ಕುರಿತು  ಶ್ಲಾಘನೆ ವ್ಯಕ್ತಪಡಿಸಿದರು.
 
ಈ ಸಂದರ್ಭ   ಕೊರೋನಾ ವೈರಸ್ ಭಾರತದಾದ್ಯಂತ ಉಂಟುಮಾಡಿರುವ ಪ್ರತಿಕೂಲ ಪರಿಣಾಮ ಹಾಗು ಅದರಿಂದ ಬಡವರ್ಗದ ಜನತೆಗೆ ಉಂಟಾಗುತ್ತಿರುವ ತೊಂದರೆಯಿಂದ ಅಗತ್ಯ ಆಹಾರ ಹಾಗು ದಿನಸಿ ಸಾಮಾಗ್ರಿಗಳ ಕೊರತೆ ಬಡವರ್ಗದವರಿಗೆ ಉಂಟಾಗಿದ್ದು. ಅಂತವರಿಗೆ ನೆರವಾಗುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿಯೂ ಕೊಡಗಿನ ಹಲವೆಡೆ ಬಡ ಹಾಗು ಕಾರ್ಮಿಕ ವರ್ಗದ ಜನತೆಯನ್ನು ಗುರುತಿಸಿ ಕಿಟ್ ವಿತರಿಸುತ್ತಿರುವ ಕುರಿತು ಫಲಾನುಭವಿಗಳು ಕೂಡ  ಶ್ಲಾಘನೆ ವ್ಯಕ್ತಪಡಿಸಿದ್ದರು. 

ನಂತರ ಮಾತನಾಡಿನ ಪಿ ಡಿ ಓ ಪ್ರಕಾಶ್'ರವರು  ತಮ್ಮ ಪಂಚಾಯತಿಯಲ್ಲಿರುವ ಬಡ ಹಾಗು ಕಾರ್ಮಿಕ ವರ್ಗದ ಜನತೆಗೆ ನೆರವಾಗುತ್ತಿರುವ ಕುರಿತು ದಲಿತ ಸಂಘರ್ಷ ಸಮಿತಿಗೆ ಧನ್ಯವಾದಗಳನ್ನು ಅರ್ಪಿಸಿ, ಪಂಚಾಯತಿ ಮೂಲಕ ನಾಗರಿಕರಿಗೆ ಏನಾದರು ಸಹಾಯ ವಾಗಬೇಕಿದ್ದಲ್ಲಿ ಪಂಚಾಯತಿಯೂ ಸದಾ ಜನಪರವಾಗಿರುತ್ತದೆ. ಹಾಗು ಏನಾದರು ಕುಂದುಕೊರತೆ ಉಂಟಾದಲ್ಲಿ ತಿಳಿಸುವಂತೆ ದಲಿತ ಸಂಘರ್ಷ ಸಮಿತಿಯನ್ನು ಕೇಳಿಕೊಂಡು ತಮ್ಮ ಸಂಪೂರ್ಣ ಬೆಂಬಲವು ಸಮಾಜ ಸೇವೆಯಲ್ಲಿ ತೊಡಗಿರುವ  ಸಂಘಟನೆಗೆ ಇರುತ್ತದೆ ಎಂದು ಭರವಸೆ ನೀಡಿದರು.
  ಸಭಾಧ್ಯಕ್ಷರು ಹಾಗು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಹೆಚ್ ಎಲ್ ದಿವಾಕರ್‌ರವರು ಮಾತನಾಡಿ ಈ ಕೊರೋನ ಮಾರಿಯು ಪ್ರಪಂಚದಾದ್ಯಂತ ಬಡ, ಮಧ್ಯಮ ವರ್ಗದ ಜನತೆಯನ್ನು ಆಹಾರ ಕೊರತೆಯಿಂದ ಕಂಗಾಲಾಗಿಸಿದ್ದು. ಈ ಸಂದರ್ಭದಲ್ಲಿ ಸ್ಥಿತಿವಂತರು ಬಡವರ ಬೆಂಬಲಕ್ಕೆ ನಿಂತು ಅವರ ಕಷ್ಟಪಾಡುಗಳಿಗೆ ಸ್ಪಂದಿಸಿ ಮಾನವೀಯತೆ ಮರೆಯುವಂತೆ ಮಾದ್ಯಮದ ಮೂಲಕ ಕೋರಿಕೊಂಡರು ಹಾಗು  ಸ್ಥಳೀಯ ಪಂಚಾಯತಿಯಿಂದಲು ಬಡವರ್ಗದ ನಾಗರಿಕರಿಗೆ ಅಕ್ಕಿಯೊಂದಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ಕಲ್ಪಿಸಿಕೊಡುವಂತೆ ತಮ್ಮ ಬೇಡಿಕೆಯನ್ನು ಇಟ್ಟರು. ನಂತರ ಸಭಾಕಾರ್ಯಕ್ರಮದಲ್ಲಿ ಅಗತ್ಯ ಮುಂಜಾಗ್ರತ ಕ್ರಮದೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಾಗವಹಿಸಿದ್ದ ಶಕ್ತಿನಗರದ ನಿವಾಸಿಗಳಿಗೆ ಅಗತ್ಯ ದಿನಸಿ ಪದಾರ್ಥಗಳನ್ನು ಒಳಗೊಂಡಿದ್ದ ಆಹಾರ ಕಿಟ್ಟನ್ನು ವಿತರಿಸಿದರು. 
    ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ದೀಪಕ್ ಏ ಪಿ, ಮಡಿಕೇರಿ ನಗರದ ಲೋಕೋಪಯೋಗಿ ಗುತ್ತಿಗೆದಾರರಾದ ವಿಜಯ ಕುಮಾರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ರವಿ,  ಉದ್ಯಮಿ ರವಿಕುಮಾರ್, ಮೇಕೇರಿ ಪಂಚಾಯಿತಿ ಪಿ ಡಿ ಓ ಪ್ರಕಾಶ್, ಮೇಕೇರಿ ಗ್ರಾಮ ಪಂಚಾಯತಿ ಸದಸ್ಯೆ ಅರ್ಪಿತ ಸಂಧ್ಯಾ ಹಾಜರಿದ್ದರು.
 

No comments

Post a Comment