ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯೋಧ ಸೇರಿದಂತೆ ಇಬ್ಬರ ಸಾವು


ಕೊಡ್ಲಿಪೇಟೆ (Times Of Coorg) ಮೇ 1: ಲಾಕ್‌ಡೌನ್‌ ಸಮಯದಲ್ಲಿ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯೋಧ ಸೇರಿದಂತೆ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಕೊಡ್ಲಿಪೇಟೆ ಹೋಬಳಿಯ ಬೆಸೂರುನಿ ಲುವಾಗಿಲಿನಲ್ಲಿ ಇಂದು ಸಂಭವಿಸಿದೆ.

ಬೆಸೂರು ನಿಲುವಾಗಿಲು ಗ್ರಾಮದ ಲತೇಶ್ ಹಾಗೂ ಸೈನಿಕನಾಗಿರುವ ಲೋಕೇಶ್ (28) ಮೃತಪಟ್ಟವರು.
ಲೋಕೇಶ್ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದು  ಅರಕಲಗೂಡು ಅರೆಹಳ್ಳಿಯಿಂದ ತಮ್ಮ ಸಂಬಂಧಿ ನಿಲುವಾಗಿಲುವಿನ ಲತೇಶ್ ಮನೆಗೆ ಬಂದಿದ್ದರು. ಇಂದು ಹೇಮಾವತಿ ಹಿನ್ನೀರಿಗೆಈಜಲು ತೆರಳಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ ಸಾವಿಗಿಡಾಗಿದ್ದಾರೆ.

ಕಳೆದ ವಾರವಷ್ಟೆ ಲೋಕೇಶ್ ಅವರಿಎ ವಿವಾಹ ನಿಶ್ಚಿತಾರ್ಥ ಆಗಿತ್ತು.ವಿಷಯ ತಿಳಿಯುತ್ತಿದ್ದಂತೆ ಶನಿವಾರ ಸಂತೆ ಪೊಲೀಸರು ಮತ್ತು ಸೋಮವಾರ ಪೇಟೆ ಆಗ್ನಿಶಾಮಕ
ದಳದ ಸಿಬ್ಬಂದಿ ನೀರಿನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರ  ಮೃತದೇಹಗಳನ್ನು ನದಿಯಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.