ನಮ್ಮ ಕೊಡಗು ತಂಡದ ವತಿಯಿಂದ ಕೊರೋನಾ ವಾರಿಯರ್ಸ್ ಗೆ ಮಾಸ್ಕ್ ವಿತರಣೆ



     ಕುಶಾಲನಗರ (TIMES OF COORG):-  ಕೋವಿಡ್ -19 ಎಂಬ ಮಹಾಮಾರಿ ಸೋಂಕಿನಿಂದಾಗಿ ಪ್ರಪಂಚದ ಹಲವು ರಾಷ್ಟ್ರಗಳು ಸೇರಿದಂತೆ ನಮ್ಮ ದೇಶಕ್ಕೆ ದೇಶವೇ ತತ್ತರಿಸಿ ಹೋಗಿರುವಂತಹ ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಎನಿಸಿಕೊಂಡ ಆರಕ್ಷಕ ಸಿಬ್ಬಂದಿಗಳು, ವೈದ್ಯ ಸಿಬ್ಬಂದಿಗಳು, ಹಾಗೂ ಆಶಾಕಾರ್ಯಕರ್ತರು ಮನೆ ಮಠ ಬಿಟ್ಟು ಹಗಲಿರುಳೆನ್ನದೇ ಜನಸಾಮಾನ್ಯರ ರಕ್ಷಣೆಗಾಗಿ ಮತ್ತು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವಾಗ ಅವರಿಗೆ ಸಹಕರಿಸುವುದು ಮತ್ತು ಅವರನ್ನು ಅಭಿನಂದಿಸಬೇಕಾಗಿರುವುದು ನಮ್ಮ ಕರ್ತವ್ಯ.
    ಜೊತೆಗೆ ಅವರು ಬೀದಿಯಲ್ಲಿ ನಿಂತು ಕಾರ್ಯ ನಿರ್ವಹಿಸುವಾಗ ಅವರಿಗೂ ಕೂಡ ಈ ಮಹಾಮಾರಿ ಸೋಂಕು ತಗುಲುವ ಸಾಧ್ಯತೆಯಿದ್ದು, ಅವರು ಕೂಡ ಉಳಿದವರನ್ನು ರಕ್ಷಿಸುವ ಜೊತೆಗೆ ತಮ್ಮನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ ಇದೆ.  ಇದನ್ನು ಮನಗಂಡು ಕೊಡಗಿನ ಗಡಿ ಭಾಗದಲ್ಲಿ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್ ಗೆ ನಮ್ಮ ಕೊಡಗು ತಂಡದ ವತಿಯಿಂದ ಮಾಸ್ಕ್ ಅನ್ನು ವಿತರಿಸಲಾಯಿತು.

      ಕಾರ್ಯಕ್ರಮದಲ್ಲಿ ತಂಡದ ಅಧ್ಯಕ್ಷ ನೌಶಾದ್ ಜನ್ನತ್ತ್, ಪದಾಧಿಕಾರಿಗಳಾದ ಲೋಹಿತ್. ಬಿ. ಬಿ., ಬಶೀರ್, ಗಿರೀಶ್, ರೋಷನ್ ಭಾಗವಹಿಸಿದ್ದರು.