ಸುಳ್ಳು ಧ್ವನಿ ಸಂದೇಶ ಕಳುಹಿಸಿದ ವ್ಯಕ್ತಿ ಪೊಲೀಸರ ಕ್ಷಮೆ ಯಾಚಿಸಿದ!

No comments
 " ಎರಡುವರೆ ತಿಂಗಳ ಮಗು ಚಿಕಿತ್ಸೆ ಲಭಿಸಿದೆ ಸಾವಿಗಿಡಾಗಿರುವುದಕ್ಕೆ ಪೋಲಿಸ್ ಇಲಾಖೆಯೆ ಕಾರಣ ಎಂದು ಧ್ವನಿ ಸಂದೇಶ ರವಾನಿಸಿದ್ದ ವ್ಯಕ್ತಿ"

ಕುಶಾಲನಗರ (Times Of Coorg) : ಹುದುಗೂರು ಗ್ರಾಮದಲ್ಲಿ ಎರಡೂವರೆ ತಿಂಗಳ ಮಗುವಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೆ ಸಾವಿಗೀಡಾಗಿರುವುದಕ್ಕೆ ಪೊಲೀಸ್ ಇಲಾಖೆಯೇ ಕಾರಣ ಎಂದು ಸಾಮಾಜಿಕ ಜಾಲ ತಾಣಗಳನ್ನು ಧ್ವನಿ ಸಂದೇಶ ರವಾನಿಸಿದ್ದ ವ್ಯಕ್ತಿ ಇದೀಗ ಪೊಲೀಸರ ಕ್ಷಮೆ ಯಾಚಿಸಿದ ಘಟನೆ ನಡೆದಿದೆ.

ಹುದುಗೂರು ಗ್ರಾಮದ ಸಜನ್ ಎಂಬವರೇ ಪೊಲೀಸ್ ಇಲಾಖೆಯ ಕ್ಷಮೆ ಯಾಚಿಸಿದವರಾಗಿದ್ದಾರೆ.
ಹುದುಗೂರು ಗ್ರಾಮದಲ್ಲಿ ಭಾನುವಾರ ಎರಡೂವರೆ ತಿಂಗಳ ಮಗುವೊಂದು ಸಾವಿಗೀಡಾಗಿತ್ತು. ಮಗುವಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸದಿರುವುದಕ್ಕೆ ಮತ್ತು ಮಗುವಿನ ಸಾವಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಕಾರಣ ಎಂದು ಸಜನ್ ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಧ್ವನಿ ಸಂದೇಶ ರವಾನಿಸುವ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದರು.    ಇದು ಎಲ್ಲೆಡೆ ವೈರಲ್ ಆಗುವ ಮೂಲಕ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕುಶಾಲನಗರದ ವೃತ್ತ ನಿರೀಕ್ಷಕ ಮಹೇಶ್ ಅವರ ವಿರುದ್ಧವೂ  ಸಜನ್ ಹರಿಹಾಯ್ದಿದ್ದರು.

ಈ ಬಗ್ಗೆ ಮೃತ ಮಗುವಿನ ಪೋಷಕರಿಂದ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಪಡೆದ ಬಳಿಕ ಮಗುವಿನ ಸಾವಿಗೂ ಪೊಲೀಸ್ ಇಲಾಖೆ ಮೇಲಿನ ಆರೋಪಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದರು.
ಈ ಸಂಬಂಧ ಕುಶಾಲನಗರ ಪೊಲೀಸರು ಸಜನ್‌ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಜನ್ ಬಹಿರಂಗವಾಗಿ ವೃತ್ತ ನಿರೀಕ್ಷಕ ಮತ್ತು ಪೊಲೀಸರಲ್ಲಿ ಕ್ಷಮೆಯಾಚಿಸಿದ್ದಾರೆ.

No comments

Post a Comment