ಅಜ್ಜನ ಮೇಲೆ ಪೊಲೀಸ್ ದರ್ಪ ಆರೋಪ ಪೊಲೀಸರ ಮೇಲೆಯ ಹಲ್ಲೆ ನಡೆಸಿದ ಹುಡುಗರ ಮೇಲೆಯೂ ಕ್ರಮ ಕೈಗೊಳ್ಳಿ: ಹುಂಡಿ ಗ್ರಾಮಸ್ಥರ ಆಗ್ರಹ

No comments


ಪಾಲಿಬೆಟ್ಟ (Times Of Coorg) : ಲಾಕ್ ಡೌನ್ ಉಲ್ಲಂಘಿಸಿ ಮಾಲ್ದಾರೆ ಪಕ್ಕದ ಹುಂಡಿಯಲ್ಲಿ ದ್ದೆಯಲ್ಲಿ ಗ್ರಾಮದ ಹುಡುಗರು ವಾಲಿಬಾಲ್ ಆಟವಾಡುತ್ತಿದ್ದ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಹುಡುಗರನ್ನು ಚದುರಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಹುಡುಗರು ಮನೆಯ ಒಳಗಡೆ ಓಡಿ ಹೋಗಿದ್ದರು. ಅವರ ಹಿಂದೆ ಹೋದ ಪೊಲೀಸರು ಮನೆಯ ಒಳಗೆ ಇದ್ದ ಹುಡುಗರಿಗೆ ಲಾಟಿ ರುಚಿ ತೋರಿಸಿದ್ದಾರೆ. ಇದರಿಂದಾಗಿ ಅಕ್ಕಪಕ್ಕದ ಮನೆಯ ಮಹಿಳೆಯರು ಮಕ್ಕಳು ಹೆದರಿಕೊಂಡರು.

ಅಲ್ಲದೇ ಮನೆಯ ಹೊರಗಡೆ ಕೂತಿದ್ದ ಹಿರಿಯ ಅಜ್ಜನ ಮೇಲೆ‌ ಪೊಲೀಸರು ಲಾಟಿ ಬೀಸಿದ್ದಾರೆ. ಇದರಿಂದ ಸಿಟ್ಟಾದ *ಹುಡುಗರು* ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಪರಸ್ಪರ ತಳ್ಳಾಟ ನುಗ್ಗಾಟ ಉಂಟಾಗಿ ಕೈ ಕೈ ಮಿಸಲಾಯಿಸಿದ ಸಂಭವ ನಡೆಯಿತು ಎಂದು ತಿಳಿದು ಬಂದಿದೆ.

ಲಾಕ್ ಡೌನ್ ಉಲ್ಲಂಘಿಸಿ ಗುಂಪು ಸೇರಿದ ಹುಡುಗರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಮನೆಯ ಒಳಗೆ ಪ್ರವೇಸಿಸಿ ಮಕ್ಕಳು ಮಹಿಳೆಯರಿಗೆ ಹೆದರಿಕೆ ಉಂಟು ಮಾಡಿದ ಹಾಗೂ ಅಜ್ಜನ‌ ಮೇಲೆ ಹಲ್ಲೆ ಮಾಡಿದ ಪೊಲೀಸರ ಮೇಲೆಯೂ ಮತ್ತು ಪೊಲೀಸರ ಮದ್ಯೆ ಕೈ ಕೈ ಮಿ‌ಸಲಾಯಿಸಿದ ಹುಡುಗರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

No comments

Post a Comment