ಪಾಲಿಬೆಟ್ಟ (Times Of Coorg) : ತೆರದ (ಮೈದಾನ) ಪ್ರದೇಶದಲ್ಲಿ ಆಟವಾಡದಂತೆ ಬುದ್ಧಿ ಹೇಳಿದ ಪೊಲೀಸ್ ಸಿಬ್ಬಂದಿಯವರ ಹಲ್ಲೆ ನಡೆಸಿರುವ ಪ್ರಕರಣ ಸಿದ್ದಾಪುರ ಸಮೀಪ ಮಾಲ್ದಾರೆಯ ಹುಂಡಿ ಗ್ರಾಮದಲ್ಲಿ ನಡೆದಿದೆ. ಮಾಲ್ದಾರೆ ಹುಂಡಿ ಗ್ರಾಮದಲ್ಲಿ ಕೆಲವರು ತೆರೆದ ಪ್ರದೇಶದಲ್ಲಿ ಆಟವಾಡುತ್ತಿದ್ದರೆನ್ನಲಾಗಿದ್ದು, ಮಾಹಿತಿ ದೊರೆತು ಸ್ಥಳಕ್ಕೆ ತೆರಳಿದ್ದ ಪೊಲೀಸರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೊರಗೆ ಆಟವಾಡದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಇದರಿಂದ ಆಕ್ರೋಶಗೊಂಡ ಕೆಲವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸ್ಥಳೀಯ ಜನರೇ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದಾಗಿ ಹೇಳಲಾಗಿದ್ದು, ಸ್ಥಳಕ್ಕೆ ಉಪ ಠಾಣಾಧಿಕಾರಿ ಹಾಗೂ ಹೆಚ್ಚಿನ ಸಿಬ್ಬಂದಿ ತೆರಳಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
No comments
Post a Comment