ಜಿಲ್ಲೆಗೆ 5723.09 ಕೋಟಿ ರೂಪಾಯಿ ಸಾಮಥ್ರ್ಯ ಆಧಾರಿತ ಸಾಲ ಬಿಡುಗಡೆ

No comments

      TOC ಮಡಿಕೇರಿ :-ನಗರದ ಕಾರ್ಪೋರೇಷನ್ ಬ್ಯಾಂಕಿನ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ವಿವಿಧ ಬ್ಯಾಂಕರ್ಸ್‍ಗಳ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಹಾಗೂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆಯು  ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರ್ರಿಯ ಅವರು ಮಾತನಾಡಿ ಬ್ಯಾಂಕಿನ ಯೋಜನೆಗಳ ಬಗ್ಗೆ ಜನಸಂಪರ್ಕ ಸಭೆಗಳನ್ನು ಬ್ಯಾಂಕಿನ ಅಧಿಕಾರಿಗಳು ಆಯೋಜಿಸುವಂತೆ ಸಲಹೆ ನೀಡಿದರು. ಅತೀ ಹೆಚ್ಚು ಜನ ಜಿಲ್ಲೆಯಲ್ಲಿ ರೇಡಿಯೋವನ್ನು ಕೇಳುವುದರಿಂದ ನಿರ್ಧಿಷ್ಟ ಯೋಜನೆಗಳ ಬಗ್ಗೆ ರೇಡಿಯೋ ಮುಖಾಂತರ ಹೆಚ್ಚಿನ ಮಾಹಿತಿ ನೀಡುವಂತೆ ಅವರು ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಬ್ಯಾಂಕ್ ಅಧಿಕಾರಿಗಳು ಸಮನ್ವಯ ಸಾಧಿಸುವಂತೆ ತಿಳಿಸುತ್ತಾ, ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳಿದ್ದರು ಸಂಬಂಧಪಟ್ಟ ಇಲಾಖೆಯ ಸಹಕಾರದೊಂದಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ, ಮಹಿಳಾ ಮತ್ತು ಮಕ್ಕಳ ಸಂಬಂಧಿತ ಯೋಜನೆಗಳನ್ನು ಬ್ಯಾಂಕುಗಳು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಹೇಳಿದರು. ಈ ಸಂದರ್ಭ ನಬಾರ್ಡ್‍ನ ಸಾಮಥ್ರ್ಯ ಆಧಾರಿತ ಸಾಲ ಯೋಜನೆ 2020-2021 ನೇ ಸಾಲಿನ ಪುಸ್ತಕವನ್ನು ಜಿ.ಪಂ. ಸಿಇಒ ಕೆ. ಲಕ್ಷ್ಮಿಪ್ರಿಂiÀi ಅವರು ಬಿಡುಗಡೆಗೊಳಿಸಿದರು.
ಕಾರ್ಪೋರೇಷನ್ ಬ್ಯಾಂಕ್‍ನ ಮೈಸೂರು ವಲಯದ ಉಪ ಮಹಾಪ್ರಬಂಧಕರಾದ ಸಿ.ವಿ.ಮಂಜುನಾಥ್ ಅವರು ಮಾತನಾಡಿ, 2019ರ ಸೆಪ್ಟೆಂಬರ್, 30 ರಂತೆ ವಿವಿಧ ಬ್ಯಾಂಕುಗಳಿಂದ ನೀಡಿದ ಆದ್ಯತಾ ವಲಯದ ಅಂಕಿ-ಅಂಶಗಳ ಪ್ರಗತಿ ಕುರಿತು ಮಾಹಿತಿ ಪಡೆದು ಜಿಲ್ಲೆಯು ಶೇ.38 ರಷ್ಟು ಸಾಧನೆ ಮಾಡಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತಷ್ಟು ಸಾಧನೆ ಮಾಡಲಿ ಎಂದು ಸೂಚಿಸಿದರು.
ಆರ್‍ಬಿಐ ಅಧಿಕಾರಿ ಮತ್ತು ಸಹಾಯಕ ಮಹಾ ಪ್ರಬಂಧಕರಾದ ದತ್ತಾತ್ರೆಯ ಅವರು ಮಾತನಾಡಿ, ಆದ್ಯತಾ ವಲಯದಲ್ಲಿ ತ್ರೈಮಾಸಿಕ ವರದಿಯನ್ನು ಸಮಯಕ್ಕೆ ಸರಿಯಾಗಿ ಲೀಡ್ ಬ್ಯಾಂಕ್‍ಗೆ ಸಲ್ಲಿಸಬೇಕು. ಇದರಿಂದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ಇನ್ನಷ್ಟು ಉಪಯುಕ್ತ ಮಾಹಿತಿಗಳೊಂದಿಗೆ ಚರ್ಚಿಸಲು ಸಹಾಯವಾಗುತ್ತದೆ ಎಂದರು. ರಿಸರ್ವ್ ಬ್ಯಾಂಕ್‍ನ ನೂತನ ನಿಯಮಾವಳಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಲೀಡ್ ಬ್ಯಾಂಕ್‍ನ ಜಿಲ್ಲಾ ಪ್ರಬಂಧಕರಾದ ಆರ್.ಕೆ.ಬಾಲಚಂದ್ರ ಅವರು ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಪ್ರಗತಿ ಪರಿಶೀಲನೆ ಮಾಡುತ್ತಾ, ಬ್ಯಾಂಕ್ ಅಧಿಕಾರಿಗಳಿಗೆ ಯಾವುದೇ ರೀತಿಯ ಹಿಂಬಾಕಿ ಉಳಿಸಿಕೊಳ್ಳದೆ ಶೀಘ್ರದಲ್ಲೇ ವಿಲೇವಾರಿ ಮಾಡಬೇಕೆಂದು ತಿಳಿಸಿದರು.
ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಪಿ.ವಿ.ಶ್ರೀನಿವಾಸ್ ಅವರು ಮಾತನಾಡಿ, ಕೊಡಗು ಜಿಲ್ಲೆಗೆ 5723.09 ಕೋಟಿ ರೂಪಾಯಿ ಸಾಮಥ್ರ್ಯ ಆಧಾರಿತ ಸಾಲವನ್ನು 2020-21ಕ್ಕೆ ಮೀಸಲಿರಿಸಿದ್ದೇವೆ ಎಂದು ತಿಳಿಸಿದರು.
ಇದರಲ್ಲಿ ಕೃಷಿ ವಲಯಕ್ಕೆ 4134.64 ಕೋಟಿ ರೂ. ಗಳು, ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ 522.53 ಕೋಟಿ ರೂ. ಗಳು, ರಫ್ತು ಸಾಲ 444.32 ಕೋಟಿ ರೂ. ಶಿಕ್ಷಣ ವಲಯಕ್ಕೆ 238.50 ಕೋಟಿ ರೂ., ಗೃಹ ನಿರ್ಮಾಣಕ್ಕೆ 360 ಕೋಟಿ ರೂ. ನವೀಕರಿಸಬಲ್ಲ ಶಕ್ತಿ ವಲಯಕ್ಕೆ 7.4 ಕೋಟಿ ರೂ. ಮೂಲ ಸೌಕರ್ಯಕ್ಕಾಗಿ 15.69 ಕೋಟಿ ರೂ. ಗಳಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಆದ್ಯತಾ ವಲಯದ ಸಾಧನೆಯು 1705.90 ಕೋಟಿ ರೂ.ಗಳು ಮತ್ತು ಶೇ.38 ಆಗಿರುತ್ತದೆ. ಬ್ಯಾಂಕ್‍ಗಳು 2020ನೇ ಮಾರ್ಚ್ ವೇಳೆಗೆ ಆದ್ಯತಾ ವಲಯದ ಗುರಿ 4500 ಕೋಟಿ ರೂ. ಸಾಧಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್, ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ವಿವಿಧ ಬ್ಯಾಂಕಿನ ಮುಖ್ಯಾಧಿಕಾರಿಗಳು ಮತ್ತು ಇತರರು ಪಾಲ್ಗೊಂಡಿದ್ದರು. ಲೀಡ್ ಬ್ಯಾಂಕ್ ಜಿಲ್ಲಾ ಮ್ಯಾನೇಜರ್ ಆರ್.ಕೆ. ಬಾಲಚಂದ್ರ ಅವರು ಸ್ವಾಗತಿಸಿದರು. ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಪಿ.ವಿ. ಶ್ರೀನಿವಾಸ್ ವಂದಿಸಿದರು.

No comments

Post a Comment