ಬಸ್ಸು-ಬೈಕ್ ಡಿಕ್ಕಿ -- ಇಬ್ಬರ ದುರ್ಮರಣ

No comments
        ಮಡಿಕೇರಿ TOC :- ಬೈಕ್ - ಬಸ್ಸು ನಡುವೆ ಭೀಕರ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿರುವ ಘಟನೆ ಮಡಿಕೇರಿ ಮಂಗಳೂರು ಹೆದ್ದಾರಿಯ ಕೊಯನಾಡು ದೇವರಕೊಲ್ಲಿ ಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮುಂಜಾನೆ ಘಟನೆ ನಡೆದಿದೆ.

   ಇಂದು ಮುಂಜಾನೆ ಸರ್ಕಾರಿ ಬಸ್ಸಿನ ಮುಂಭಾಗಕ್ಕೆ ಪ್ರವಾಸಿಗರ ಬೈಕ್ ಡಿಕ್ಕಿಯಾಗಿದೆ , ಇದರ ಪರಿಣಾಮ ಬೈಕ್‌ ನಲ್ಲಿದ್ದ ಇಬ್ಬರು ಪ್ರವಾಸಿಗರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.


ಪಶ್ಚಿಮ‌ ಬಂಗಾಳ‌ ಮೂಲದ ನೋಂದಣಿಯ ಬೈಕ್ (WB 38 -AK 1196)  ನಲ್ಲಿ ಪ್ರವಾಸಿಗರು ಸಂಚರಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ,
ಸ್ಥಳಕ್ಕೆ ಕೊಡಗು ಎಸ್ಪಿ ಸುಮನ್ ಪೆನ್ನೆಕರ್ ಹಾಗು ಮಡಿಕೇರಿ‌ ಗ್ರಾಮಾಂತರ ಪೊಲೀಸರು ಭೇಟಿ ನೀಡಿದರು.

No comments

Post a Comment