ಕಿರುಗೂರಿನಲ್ಲಿ ಅರೋಗ್ಯ ಮತ್ತು ದಂತ ತಪಾಸಣಾ ಶಿಬಿರ

No comments
   
TOCಸೋಮವಾರಪೇಟೆ:-ಗೋಣಿಕೊಪ್ಪದ ಕಾವೇರಿ ಕಾಲೇಜಜಿನ(ಎನ್ ಎಸ್ ಎಸ್) ರಾಷ್ಟ್ರೀಯ ಸೇವಾ ಯೋಜನೆಯ ವಾಷಿಕ ಶಿಬಿರದಲ್ಲಿ ಗೋಣಿಕೊಪ್ಪ ಸಮೀಪದ ಕಿರುಗೂರು ಜನರ ಅರೋಗ್ಯ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.ಅರೋಗ್ಯ ಇಲಾಖೆ ಮತ್ತು ಕೊಡಗು ದಂತ ಮಾಹವಿದ್ಯಾಲಯದ ಸಹಯೋಗದಲ್ಲಿ ನಡೆದ ಈ ಶಿಬಿರವನ್ನು ತಾಲೋಕು ವೈದ್ಯಾಧಿಕಾರಿಗಳಾದ ಡಾ.ಯಾತಿರಾಜ್ ಉದ್ಘಾಟಿಸಿದರು.ನಂತರ ಮಾತನಾಡಿದ ಇವರು ಅರೋಗ್ಯ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ ನೀರಿನಿಂದ ಅನೇಕ ಕಾಯಿಲೆ ಬರುತ್ತಿದ್ದು ನೀರನ್ನು ಕಾಯಿಸಿ ಕುಡಿಯಬೇಕು ಎಂದರು,ಸಾಂಕ್ರಾಮಿಕ ರೋಗ ಹರಡದಂತೆ ಹೆಚ್ಚರಿಕೆ ವಹಿಸಬೇಕು.ದೇಹ ಮತ್ತು ಮನೆಗಳನ್ನು ಶುಚ್ಚಿಯಾಗಿ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ಕಾಲರ,ಟೈಪಾಟ್,ಜ್ವರ ಕೆಮ್ಮು ಮುಂತಾದ ಕಾಯಿಲೆಗಳು ಬರುತ್ತವೆ ಎಂದು ತಿಳಸಿದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿ ವನಿತ್ ಕುಮಾರ್ ಮತ್ತು ರೀತಾ ಅಲ್ಲದೇ ವಿವಿಧ ವೈದ್ಯಾಧಿಕಾರಿಗಳು,ದಂತ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು. ಸುಮಾರು 200 ಕ್ಕೂ ಹೆಚ್ಚು ಸಾರ್ವಜನಿಕರು ಬಿ.ಪಿ.,ಸುಗರ್ ಇತರೆ ಕಾಯಿಲೆ ಪರೀಕ್ಷೆ ಮಾಡಿಸುವ ಜೊತೆಗೆ ದಂತ ಪರೀಕ್ಷೆ ಮತ್ತು ದಂತ ಚಿಕಿತ್ಸೆ ಮಾಡಿಸಿಕೊಂಡರು.

No comments

Post a Comment