TOC ಸೋಮವಾರಪೇಟೆ:- ದೇಶ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಕೊಡಬೇಕು ಎನ್ನುವುದು ಮುಖ್ಯ. ಮೂಲ ಬೇರನ್ನು ಇಟ್ಟುಕೊಂಡು ದೇಶ ಕಟ್ಟಬೇಕು ಎಂದು ಸಂತೋಷ್ ತಮ್ಮಯ್ಯ ತಿಳಿಸಿದರು.
ಗೋಣಿಕೊಪ್ಪದ ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರಾಷ್ಟ್ರ ಸೇವೆಯಲ್ಲಿ ಯುವಜನತೆ ಎಂಬ ವಿಷಯದಲ್ಲಿ ಮಾತನಾಡಿದ ಇವರು ಗ್ರೀಕ್ ನಾಗರಿಕತೆ ಉತ್ತಮವಾಗಿ ಬದಲಾವಣೆಯಾದ್ದರಿಂದ ಸುಖ ಜೀವನ ಸಾಧಿಸಲು ಸಾಧ್ಯವಾಯಿತು. ಟರ್ಕಿ ಯುವಜನರು ವಿಲಾಸಿ ಬದುಕು ಯುವಜನರ ದಾರಿ ತಪ್ಪಿಸುತ್ತಿದೆ.ಅದರೇ ಜಪಾನ್ ಬಾಂಬ್ ದಾಳಿಯಿಂದ ನಾಶವಾದರು ಯುವಜನರ ಇಚ್ಛಾಶಕ್ತಿ ಜಪಾನನ್ನು ಬೆಳಸಿದೆ.ಇಸ್ರೇಲ್ ಬೆಳವಣಿಗೆಗೆ ಅಲ್ಲಿನ ಯುವಜನರೇ ಕಾರಣ ಅದ್ದರಿಂದ ಭಾರತದಲ್ಲಿ ಯುವಜನರು ಕ್ರಿಯಾಶೀಲರಾಗಬೇಕಾಗಿದೆ. ಭಾರತಕ್ಕೆ ಉತ್ತಮ ಸಂಸ್ಕೃತಿ ಸಂಬಂಧ ಇದೆ ಒಂದು ಕಾಲದಲ್ಲಿ ಆಳುವ ವರ್ಗದ ಸಮಸ್ಯೆ ಇತ್ತು ಅದರೂ ಕೊಡಗಿನಲ್ಲಿ ಸೈನಿಕ ಕ್ಕೆ ಸೇರುವ ಯುವಜನರಿದ್ದರು.ಇಂದು ಯುವಜನರು ಶಾರೀರಿಕ ಹಾಗೂ ಮಾನಸಿಕ ಗಟ್ಟಿಯಾಗಿ ಆರೋಗ್ಯವಂತ ಯುವಜನರಾಗಬೇಕಾಗಿದೆ. ಭಾರತ ವಿಶ್ವಗುರು ಅಗಬೇಕಾದರೆ ಉತ್ತಮ ನಾಗರಿಕರು ಅವಶ್ಯಕ. ಉತ್ತಮವಾಗಿ ಯೋಜನಾಶಕ್ತಿ ಇರುವ ಯುವಜನರು ನಮ್ಮದೇಶಕ್ಕೆ ಶಕ್ತಿಯಾಗಬಲ್ಲರು ಎಂದು ತಿಳಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಇಟ್ಟಿರ ಬಿದ್ದಪ್ಪ ಮಾತನಾಡಿ ಭಾರತ ಹಿಂದೂಳಿಯಲು ಮನವ ಸಂಪನ್ಮೂಲ ಸರಿಯಾಗಿ ಬಳಕೆಯಾಗದಿರುವುದೇ ಕಾರಣ.ಭಾರತದಲ್ಲಿ ನೈಸರ್ಗಿಕ ಸಂಪನ್ಮೂಲ ಇದೆ ಅದರೇ ಅದನ್ನು ಸರಿಯಾಗಿ ಬಳಕೆ ಮಾಡುವ ಯುವಜನರು ಅವಶ್ಯಕ ಅದ್ದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಇಂತಹ ಶಿಬಿರ ಸಹಕಾರಿ ಎಂದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೆ.ಟಿ.ಗಣೇಶ್, ಚೆಪ್ಪುಡೀರ ಜ್ಯೋತಿ ದೇವಯ್ಯ,ವಿಶ್ವನಾಥ್, ಕೆ.ಜಿ.ಬೋಜಮ್ಮಯೋಜನಾಧಿಕಾರಿ ಮಂದೆಯಂಡ ವನಿತ್ ಕುಮಾರ್ ಮತ್ತು ಮಚ್ಚಮಡ ರೀತಾ ಉಪಸ್ಥಿತರಿದ್ದರು.

No comments
Post a Comment