ಕೊಡಗು: ಸೊಸೆಯ ಕಿರುಕುಳಕ್ಕೆ ಮಗನ ಸ್ಥಿತಿ ನೆನೆದು ಹೆತ್ತಮ್ಮ ನೇಣಿಗೆ ಕೊರಳೊಡ್ಡಿದ್ದಾರೆ.ಅಮ್ಮ..ಅಮ್ಮ ಅಂತಿದ್ದ ಮಗನೂ ಕೂಡ ತಾಯಿಗೆ ನನ್ನಿಂದ ಈ ಸ್ಥಿತಿ ಬಂತಲ್ಲ ಎಂದು ಮರುಗಿ ಆತನೂ ಸಾವಿನ ಕದ ತಟ್ಟಿದ್ದಾನೆ.ಇನ್ನೂ ಮಳ್ಳಿ..ಮಳ್ಳಿ ಮಂಚಕ್ಕೆಷ್ಟು ಕಾಲು ಅನ್ನೊ ಗಾದೆ ಮಾತಿನಂತೆ ಜನ ಮೆಚ್ಚಿಸಲಿಕ್ಕೊ ಏನೊ ತನಗೇನೂ ತಿಳಿಯದಂತೆ ಮೃತ ಗಂಡ ಮತ್ತು ಅತ್ತೆಯನ್ನು ಎಷ್ಡೋ ಹೊತ್ತಿನ ನಂತರ ಅಲ್ಲಿಗೆ ಬಂದ ಸೊಸೆಗೆ ಸಂಬಂಧಿಕರು ಎಲ್ಲವೂ ನಿನ್ನಿಂದಲೇ ಆಗಿದ್ದು ಎಂದು ಗೂಸ ಕೊಟ್ಟು ಚೆನ್ನಾಗಿಯೇ ಮರ್ಯಾದೆ ಮಾಡಿದ್ದಾರೆ.
ನಿನ್ನಿಂದಲೇ ಅಲ್ವಾ ಹೀಗೆ ಅವರಿಬ್ಬರು ಸತ್ತಿದ್ದು ಅಂತಾ ಸಂಬಂಧಿಕರು ಸೊಸೆಯ ಜಡೆ ಹಿಡಿದು ಬಡಿತಿದ್ದಾರೆ.
ಮತ್ತೊಂದು ಕಡೆ ತಾಯಿಯ ಶವದ ಪಕ್ಕದಲ್ಲಿಯೇ ತಾನು ಶವವಾಗಿಯೇ ಮಲಗಿರುವ ಒಬ್ಬನೇ ಮಗ, ಇಬ್ಬರನ್ನೂ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಇಬ್ಬರು ಹೆಣ್ಣು ಮಕ್ಕಳು...ತಾಯಿ ಮತ್ತು ಮಗನ ಶವ ನೋಡಿದರೆ ಎಂತಹವರಿಗೂ ಕರುಳು ಕಿತ್ತು ಬರುತ್ತೆ. ಶವವಾಗಿ ಮಲಗಿರುವ ಮಹಿಳೆ ತಂಗಮ್ಮ. ತಾಯಿ ಪಕ್ಕದಲ್ಲಿಯೇ ಶವವಾಗಿ ಮಲಗಿರೋ ಮಗನ ಹೆಸರು ಹರೀಶ್.ವೃತ್ತಿಯಲ್ಲಿ ಆಟೋ ಚಾಲಕನಾದರೂ ಅಮ್ಮನ ಮೇಲೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದ. ಹೀಗಾಗಿಯೇ ಅಮ್ಮನ ಜೊತೆ ಜೊತೆಯಲ್ಲಿಯೇ ತಾನು ಸಾವಿನ ಮನೆಯ ಕದ ತಟ್ಟಿದ್ದಾರೆ.
ಇಬ್ಬರ ಸಾವಿಗೆ ಕಾರಣ ಸೊಸೆ ನಳಿನಿ. ಈಕೆಯ ಜೊತೆ ಒಬ್ಬಂತ್ತು ತಿಂಗಳ ಹಿಂದೆ ಹರೀಶ್‌ಗೆ ಮದುವೆ ಆಗಿತ್ತು. ಆದರೆ ನಳಿನಿ ಸಂಸಾರ ಮಾಡಿದ್ದು ಮಾತ್ರ ಕೇವಲ 15 ದಿನ ಮಾತ್ರ. ಬಳಿಕ ತಂದೆಯ ಮನೆ ಸೇರಿಕೊಂಡ ನಳಿನಿ ಡಿವೋರ್ಸ್‌ಗೆ
ಅಪ್ಲೆ ಮಾಡಿ ಜೀವನಾಂಶ ಕೇಳಲು ಶುರು ಮಾಡಿ ಪೀಡಿಸುತ್ತಿದ್ದಳು. ನನಗೆ ಜೀವನಾಂಶ ಕೊಟ್ಟಿಲ್ಲ ಅಂದ್ರೆ ನಿಮ್ಮಿಬ್ಬರನ್ನೂ ಜೈಲಿಗೆ ಕಳುಹಿಸುತ್ತೇನೆ ಎಂದು ಸೊಸೆ ಪದೇ,ಪದೇ ಗಂಡ ಹಾಗೂ ಅತ್ತೆಗೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಳು. ಒಂದೆರಡು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಹತ್ತಿಸಿದ್ದ ಕಿಲಾಡಿ ನಳಿನಿಗೆ ಹೆದರಿ ಮರ್ಯಾದೆಗೆ ಅಂಜಿದ ತಾಯಿ ಹಾಗೂ ಮಗ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ.

