ಮಡಿಕೇರಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾ ಕೂಟ

   
      TOC ಮಡಿಕೇರಿ:- ಭಾರತ ಸರ್ಕಾರ, ನೆಹರೂ ಯುವ ಕೇಂದ್ರ ಮಡಿಕೇರಿ, ನೇತಾಜಿ ಗೆಳೆಯರ ಬಳಗ ಚೆಡಾವು ಸಂಪಾಜೆ ಇವರ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾ ಕೂಟ ದಿನಾಂಕ 24/11/2019 ರಂದು ಸಂಪಾಜೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅನಂತೇಶ್ವರ ಎನ್. ಸಿ, ಅಧ್ಯಕ್ಷರು ಪಯಸ್ವನಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ  ಸಂಘ ಸಂಪಾಜೆ, ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಶ್ರೀ ಕೆ. ಕೆ ದೇವಪ್ಪ, ಎ.ಪಿ.ಎಂ.ಸಿ ಸದಸ್ಯರು ಮಡಿಕೇರಿ, ಶ್ರೀ ಕೃಷ್ಣಪ್ಪ ಪಡ್ಪು,ನಿವೃತ್ತ ಅಧಿಕಾರಿ  ಪೊಲೀಸ್ ಇಲಾಖೆ, ಶ್ರೀ ಪಿ. ಕೆ. ಇಸ್ಮಾಯಿಲ್ ಚೆಡಾವು, ಶ್ರೀ ಚೇತನ್ ಶಿಕ್ಷಕರು, ದಯಾನಂದ ಶಿಕ್ಷಕರು, ಶ್ರೀ ಚರಣ್ ಬಿ. ಜೆ, ಹಾಗೂ ಅಧ್ಯಕ್ಷತೆಯನ್ನು ಶ್ರೀ ಶಶಿಕುಮಾರ್ ಹೆಚ್. ಬಿ ಅಧ್ಯಕ್ಷರು ನೇತಾಜಿ ಗೆಳೆಯರ ಬಳಗ ಚೆಡಾವು ವಹಿಸಿದ್ದರು. ಸ್ವಾಗತವನ್ನು ಶ್ರೀಮತಿ ಸರೋಜ ಸುಂದರ ಮಾಡಿ, ವಂದನಾರ್ಪಣೆಯನ್ನುಕು. ಸುಮಿತ್ರಾ ಪಿ. ಆರ್ ಮಾಡಿದರು, ನಿರೂಪಣೆ ಶ್ರೀ ಸಂತೋಷ್ ಕುಮಾರ್ ಹೆಚ್. ಬಿ ಮಾಡಿದರು.                                   
   ಸಂಜೆ ಸಮಾರೋಪ ಸಮಾರಂಭದಲ್ಲಿ  ಶ್ರೀ ವಾಸು ಕೊಯನಾಡು, ನಿವೃತ್ತ ಅಧಿಕಾರಿ ತೆರಿಗೆ ಇಲಾಖೆ ಇವರು ಪ್ರಶಸ್ತಿ ವಿತರಿಸಿದರು.ಶ್ರೀಮತಿ ಸೆಲೆಸ್ಟಿನಾ ಲೋಬೊ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಇವರನ್ನು  ಶ್ರೀಮತಿ ಶಾಂತಕುಮಾರಿ ಸನ್ಮಾನಿಸಿದರು.