TOC ಮಡಿಕೇರಿ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ,ಸಾರ್ವಜನಿಕ ಶಿಕ್ಷಣ ಇಲಾಖೆ , ಉಪನಿರ್ದೇಶರ ಕಛೇರಿ ಮಂಗಳೂರು, ಹಾಗೂ ಅನುದಾನಿತ ಭಾರತ್ ಪ್ರೌಢ ಶಾಲೆ ಉಳ್ಳಾಲ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ಗೋಣಿಕೊಪ್ಪ ಸಮೀಪದ ಲಯನ್ಸ್ ಕಳತ್ಮಾಡು ಪ್ರೌಢ ಶಾಲೆಯ ಬಾಲಕಿಯರು ತಂಡವು ಫೈನಲ್ ಪಂದ್ಯದಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಲಯನ್ಸ್ ಶಾಲಾ ದೈಹಿಕ ಶಿಕ್ಷಕ ಹಾಗೂ ತರಬೇತುದಾರ ಈಶ್ವರ್ ಇದ್ದರು.
