ಕನ್ನಡವೆಂಬುವುದು ಕಣ್ಣ ಧೃಷ್ಠಿಯಷ್ಟು ಅಮೂಲ್ಯವಾದ ಭಾಷೆ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ ಕನ್ನಡ ಭಾಷೆ | ಲೇಖನ: ಕೃಷ್ಣ ಕರಡಿಗೋಡು



 ಕನ್ನಡವೆಂಬುದು ಪುರಾತನ ಕಾಲದಿಂದಲೂ ಬಳಕೆಯಲ್ಲಿ ಇರುವ ಭಾಷೆ .ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನಗಳು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನಗಳ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ  ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು.ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ.ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದುಹೊಗಳಿದ್ದಾರೆ.

ಭಾಷಿಕ ಚರಿತ್ರೆ
ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು; ಹಳಗನ್ನಡ  ನಡುಗನ್ನಡ  ಹೊಸಗನ್ನಡ  ಕೃಷ್ಣದೇವರಾಯನಿಂದಿಡಿದು ಮೈಸೂರು ಒಡೆಯರವರೆಗೂ ಕನಕದಾಸ,ಬಸವೇಶ್ವರು,ಪುರಂದರ ದಾಸ ಶರಣರು ಪಂಪ,ರನ್ನ , ಸರ್ವಜ್ಞ,ಕುವೇಂಪು, ಬೇಂದ್ರೆಯಂತವರಿಂದ ಶ್ರೀಮಂತ ಗೊಳಿಸಿದ ನಮ್ಮ ನಾಡು ಇಂದು ಹೇಗಿದೆ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿ ಯಾಗಿ ಆಚರಿಸುವ ನಾವುಗಳು ಕನ್ನಡಿಗರ ಸ್ಥಿತಿ ಗತಿಗಳ ಚಿಂತೆಗೆ ಹೋಗುವುದಿಲ್ಲ. ಗಲ್ಲಿ -ಗಲ್ಲಿಗಳಲ್ಲಿ ಕನ್ನಡದ ಹೆಸರಿನಲ್ಲಿ ಕನ್ನಡ ಸಂಘಟನೆಗಳು,ವಿವಿಧ ಬಣಗಳ ಸಂಘಟನೆಗಳು ತಮ್ಮದೇ ರೀತಿಯ ಹೋರಟಗಳನ್ನು(ರಾಜಕೀಯ)ವನ್ನು ಮಾಡುತ್ತಿವೇಯಾದರು ಕನ್ನಡದ-ಕನ್ನಡಿಗರ ಒಗ್ಗಟ್ಟು ಮೂಡಿಸುವಲ್ಲಿ ವಿಫಲವಾಗಿದೆ .ತಮ್ಮ ರಾಜಕೀಯ ಪಕ್ಷಗಳ ಬೇಳೆ ಬೇಯಿಸಿಕೊಳ್ಳಲು ಕನ್ನಡಾಂಬೆಗೆ ದ್ರೋಹ ಬಗೆಯುವ ಇವರ ಈ ಧ್ವಂಧ್ವ ನಿಲುವಿನಿಂದ ಅಕ್ಕ ಪಕ್ಕದ ರಾಜ್ಯಗಳು ವ್ಯಾಪಾರ, ವಹಿವಾಟು, ಬಡ್ಡಿದಂಧೆಯ ಮೂಲಕ ರಾಜ್ಯದ ಸಂಪತ್ತನ್ನು ಲೂಟಿ ಹೊಡೆದು ತಮ್ಮ ರಾಜ್ಯಕ್ಕೆ ಕೊಂಡೊಯ್ಯುತ್ತಿದ್ದರು , ನನ್ನನ್ನು ಸೇರಿಸಿ ಯಾವೊಬ್ಬ ಕನ್ನಡಿಗನು ಧ್ವನಿಯೆತ್ತದಿರುವುದು ಬೇಸರ ವಲ್ಲವೇ? ಈ ರೀತಿ ಲೂಟೀ ಹೊಡೆಯುವ ಅ ವ್ಯಾಪಾರಿಯೂ ತನ್ನ ಮಳಿಗೆಗೆ ಪರ ಭಾಷೇ ನಾಮಫಲಕ ಅಳವಡಿಸಿ ಈ ಮಣ್ಣಿನ ಕಾನೂನನ್ನು ಅವಮಾನಿಸಿದರು ನಾವುಗಳು ಮೌನವಾಗಿದ್ದೇವೆ , ನಾವು ಶಾಂತಿ ಪ್ರೀಯರೇ ಹೊರತು ಹೇಡಿಗಳಲ್ಲ.ಎಂಬುದನ್ನು ವ್ಯಾಪರಸ್ಥರುಅರ್ಥ ಮಾಡಿಕೊಳ್ಳ ಬೇಕು.

 ರಾಜ್ಯದಲ್ಲಿ ಲೇವಾದೇವಿ ನಡೆಸುವ ಯಾವುದೇ ಬಡ್ಡಿ (ಮಗ)ದಾರನು ಇಲ್ಲಿನ ಹೋಟೇಲ್ ನಲ್ಲಿ ಒಂದು ಟೀ ಸಹ ಕುಡಿಯುವುದಿಲ್ಲ ,ಅ ಹಣವನ್ನು ತಮ್ಮ ರಾಜ್ಯದಲ್ಲಿ ಖರ್ಚು ಮಾಡುತ್ತಾರೆ. ಇಲ್ಲಿನ ನೆಲದಲ್ಲಿ ತೋಟಗಳನ್ನು ಮಾಡಿ ಬೆಳೆ ತೆಗಿಯುವ ಇವರು ಅಲ್ಲಿ ಕೆಲಸ ಮಾಡಲು ಹೊರ ರಾಜ್ಯ ದಿಂದ ಕಾರ್ಮಿಕರನ್ನು ತಂದು ಇಲ್ಲಿನ ಕಾರ್ಮಿಕರೀಗೆ ಕೆಲಸವಿಲ್ಲದೆ ಮಾಡುವ ಇವರು ನಮ್ಮ ರಾಜ್ಯ ವನ್ನು ಲೂಟೀ ಹೊಡೆಯುತ್ತಿದ್ದರು, ನಾವು ಗಾಂಧಿ ಪ್ರೀಯರು -ಉದ್ದಾರ ವಾದಿಗಳು. ಕನ್ನಡ ಸಿನಿಮಾಗಳನ್ನು ಹೊರ ರಾಜ್ಯಗಳಲ್ಲಿ ಪ್ರದರ್ಶನ ಮಾಡದಿದ್ದರು ಪರವಾಗಿಲ್ಲ ,ನಮ್ಮ ಸಿನಿಮಾಗಳನ್ನು ಯಾವಗಳು ದೂಷಿಸುವ ನಾವುಗಳು ಪರ ಭಾಷಾ ಸಿನಿಮಾಗಳಿಗೆ ನಟ ನಟಿಯರೀಗೆ ಹಾಲು ಅಭಿಷೇಕ ಮಾಡುವ ಮಹಾಹೃದಯವಂತರು. ರಾಹುಲ್ ದ್ರಾವಿಡ್, ಅರ್ಜುನ್ ಹಾಲಪ್ಪ,ಅನಿಲ್ ಕುಂಬ್ಳೆ,ಅರ್ಜುನ್ ದೇವಯ್ಯ,ಅಶ್ವಿನಿ ಪೊನ್ನಪ್ಪ,ಜೂಲನ್ ಗೋಸ್ವಾಮಿ ಯಂತವರು ಕರ್ನಾಟಕದ ಹೆಸರನ್ನು ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ್ದರು.

 ಇನ್ನೂ ಅಲವು ಕನ್ನಡದ ಬಡ ಪ್ರತಿಭಾವಂತ ಕ್ರೀಡಾಪಟುಗಳು ಇಂದಿಗೂ ಸೂಕ್ತ ವೇದಿಕೆ ಇಲ್ಲದೆ ಎಲೆ ಮರೆಯಲ್ಲೇ ಹರಳಿ ಉದುರಿ ಹೋಗುತ್ತಿವೆ ಇವರ ಬಗ್ಗೆ ಧ್ವನಿ ಎತ್ತ ಬೇಕಾದ ಕನ್ನಡಪರ ಸಂಘಟನೆಗಳು ತಮಗೂ ಇದಕ್ಕು ಸಂಭಂಧ ಇಲ್ಲವೆಂಬಂತೆ ಕುರುಡಾಗಿರುವುದು ಇವರಿಗೆ ಮಾಡುವ ಅನ್ಯಾಯ ಅವಮಾನವೇ ಸರಿ. ನಾಥೂರಾಮ್ ಗೋಡ್ಸೆ,ಸಾವರ್ಕರ್ ಗೆ ಭಾರತ ರತ್ನ ನೀಡಿ ಎನ್ನುವಾಗ ಚಪ್ಪಾಳೆ ತಟ್ಟುವ ಕನ್ನಡಿಗರು . ಅಕ್ಷರ ದಾಸೋಹ, ಅನ್ನ ದಾಸೋಹಿಯಾಗಿ ಲಕ್ಷಾಂತರ ಮಂದಿಗೆ ವಿಧ್ಯೇ, ಹಸಿವನ್ನು ನೀಗಿಸಿದ ಮಹಾ ಯೋಗಿ ಸಿದ್ದಗಂಗಾ ಮಠದ ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತರತ್ನ ನೀಡಬೇಕು ಅಂತ ಯಾರು ಕೂಡ ಒತ್ತಾಯ ಮಾಡುತ್ತಿಲ್ಲ, ಇರುವಷ್ಟು ಕಾಲ ಶ್ರೀಗಳ ಋಣವನ್ನು ಉಂಡ ಕರ್ನಾಟಕದ ಜನತೆ .ಅವರನ್ನು ಕಡೆಗಣಿಸಿ ಉತ್ತರ ಭಾರತೀಯರ ರಾಜಕೀಯ ದಾಳಕ್ಕೆ ಬಕೆಟ್ ಹಿಡಿಯುತ್ತಿರುವುದು ನಿಜಕ್ಕೂ ಕನ್ನಡಪರ ಸಂಘಗಳೂ ರಾಜಕೀಯ ಪ್ರೇರಿತ ಎಂಬುದಕ್ಕೆ ಪುಷ್ಠಿಕೊಡುತ್ತದೆ. ಉತ್ತರ ಭಾರತೀಯರು ದಕ್ಷಿಣ ಭಾರತೀಯರ ಮೇಲೆ ಬಲವಂತವಾಗಿ ಹಿಂದಿಯನ್ನು ಹೇರಲು ಮುಂದಾದಾಗ ಇಲ್ಲಿನ 25 ಜನ ಸಂಸದರಾಗಲಿ ಹೊರರಾಜ್ಯದ ಮಾಲೀಕತ್ವದ ಮಾಧ್ಯಮಗಳಾಗಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಧಕ್ಕೆಯಾಗುತ್ತಿದೆ ಎಂದು ಅನ್ಯಾಯದ ವಿರುದ್ದ ಹೋರಾಟ ನಡೆಸಲಿಲ್ಲ. ಇದರ ಬಗ್ಗೆ ಒಂದು ಚರ್ಚೆಯನ್ನು ಕೂಡ ಮಾಧ್ಯಮಗಳು ನಡೆಸುತ್ತಿಲ್ಲ . ರಾಜ್ಯದ ಬಹುತೇಕ ಮಾಧ್ಯಮಗಳು ಹೊರ ರಾಜ್ಯದವರ ಮಾಲಿಕತ್ವದಲ್ಲಿದೆ ಅವರು ನಮ್ಮ ರಾಜ್ಯದ ನೈಜ ಸಮಸ್ಯೆಗಳನ್ನು ಇಲ್ಲಿನ ಸಂಕಷ್ಟಗಳನ್ನು ಬಿತ್ತರಿಸದೆ ವಿನಾಕಾರಣ ಉತ್ತರ ಭಾರತೀಯ ರಾಜಕೀಯ ವ್ಯಕ್ತಿಗಳಿಗೆ ಸಹಕಾರ ನೀಡುವ ಒಂದು ಪಕ್ಷವನ್ನು ಬೆಳೆಸುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 

ಶೋಭಕ್ಕ ದೆಹಲಿಯಲ್ಲಿ ಹಿಂದಿ ಮಾತಾಡಲು ಚಡಪಡಿಸು ವಾಗ ಕರ್ನಾಟಕದಲ್ಲಿ ಕನ್ನಡಿಗರು ಅವರನ್ನು ತಮಾಷೆ ಮಾಡುತ್ತಿದ್ದರು. ಆದರೆ ಇಲ್ಲಿ ಕನ್ನಡಾಂಬೆಗೆ ಅವಮಾನ ವಾಗುತ್ತಿರುವುದು ಎಂದು ಯಾರು ಕೂಡ ಇದರ ಬಗ್ಗೆ ಚಿಂತನೆ ಮಾಡುತ್ತಿಲ್ಲ ಕನ್ನಡ ಮಣ್ಣಿನಲ್ಲಿರುವ ಪ್ರತಿಯೊಬ್ಬರು ಕನ್ನಡ ನಾಡು-ನುಡಿ ರಕ್ಷಣೆಯೊಂದಿಗೆ ಪಣ ತೊಡುವ ಕೆಲಸಕ್ಕೆ ಮುಂದಾಗಬೇಕಾಗಿದೆ.