ದಿನಾಂಕ 13-09-2019 ರಂದು, ಕತಾರ್ ನ ಇಂಡಸ್ಟ್ರಿಯಲ್ ಏರಿಯಾದ. 41 ನೇ ಸ್ಟ್ರೀಟ್ ನಲ್ಲಿರುವ, Combined Group ಎಂಬ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ 60 ವರ್ಷದ, ಕೇರಳದ ಮಾವೆಲಿಕೆರೆ ನಿವಾಸಿ, ಆಂಟೋನಿ ಪೌಲೋಸ್ ಎಂಬುವರು ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಕ್ಯಾಂಪ್ ನಲ್ಲಿ ಹೃದಯಾಘಾತ ದಿಂದ ಮರಣ ಹೊಂದಿದ್ದರು ಮತ್ತು ಅವರ ಮೃತದೇಹವನ್ನು ಹಮದ್ ಆಸ್ಪತ್ರೆಯ ಶವಾಗಾರಾದಲ್ಲಿ ಇಡಲಾಗಿತ್ತು.
ಕತಾರ್ ನಲ್ಲಿ, ಮೃತ ವ್ಯಕ್ತಿಯ ಸಂಬಂಧಿಕರು ಯಾರೂ ಇಲ್ಲದ ಕಾರಣ, ಅವರ ಸ್ನೇಹಿತರು, QISF ನ ದೆಹಲಿ ಘಟಕದ ಅಬ್ದುಲ್ ಖಾದರ್ ರವರನ್ನು ಭೇಟಿಯಾಗಿ, ಮೃತದೇಹವನ್ನು ಊರಿಗೆ ಸಾಗಿಸಲು ನೆರವಾಗಬೇಕೆಂದು ಕೇಳಿದರು.
ಅಬ್ದುಲ್ ಖಾದರ್ ರವರು ಈ ವಿಷಯವನ್ನು QISF ಕೇಂದ್ರೀಯ ಸಮೀತಿಯ ಪ್ರಧಾನ ಕಾರ್ಯದರ್ಶಿ ಬಶೀರ್ ಮತ್ತು QISF ಕೇಂದ್ರೀಯ ಸಮೀತಿಯ ಕಾರ್ಯದರ್ಶಿ ಅಬ್ದುಲ್ ಲತೀಫ್ ಮಡಿಕೇರಿ ಯವರೊಂದಿಗೆ ಚರ್ಚಿಸಿ, ತಕ್ಷಣ ಈ ಮೂವರ ತಂಡವು, ಮೃತವ್ಯಕ್ತಿಯ ಸ್ನೇಹಿತರಾದ ಬಿಫಿನ್ ಮತ್ತು ವರ್ಗೀಸ್ ರವರ ಸಹಕಾರದೊಂದಿಗೆ ಕಾರ್ಯಪ್ರವುಕ್ತವಾಯಿತು.
ಆಂಟೋನಿ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮುಖ್ಯಸ್ಥರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು ಭೇಟಿಯಾಗಿ, ಮೃತವ್ಯಕ್ತಿಯ ವಿವರಗಳನ್ನು ಪಡೆದರು.
ನಂತರ, ಪೊಲೀಸ್ ಠಾಣೆ, ರಾಯಭಾರಿ ಕಛೇರಿ, ಮಾನವೀಯ ಹಕ್ಕುಗಳ ಕಛೇರಿ ಮತ್ತು ಆರೋಗ್ಯ ಕೇಂದ್ರದಿಂದ ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸಿ, ದಿನಾಂಕ 22-09-2019 ರಂದು ಮೃತದೇಹವನ್ನು ದೊಹಾದಿಂದ
ತಿರುವನಂತಪುರಂ ಮಾರ್ಗವಾಗಿ, ಅವರ ಊರಾದ ಮಾವಲಿಕೆರೆಗೆ ಕಳುಹಿಸಲು ಯಶಸ್ವಿಯಾದರು.
ಅದೇ ರೀತಿ, ಸಂಸ್ಥೆಯಿಂದ ಮೃತವ್ಯಕ್ತಿಗೆ ಸಿಗಬೇಕಾದ ಹಣ ವನ್ನು ಸಹ ಪಡೆದು, ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.


