300ರಷ್ಟು ತಾಲಿಬಾನಿಗಳನ್ನು ಕೊಂದು ಹಾಕಿದ ನೋರ್ತನ್ ಅಲೈನ್ಸ್
ಅಂತರಾಷ್ಟ್ರೀಯ ಡೆಸ್ಕ್ (web@timesofcoorg.in) : ಜಗತ್ತನ್ನೆ ಬೆಚ್ಚಿಬಿಳಿಸಿದ ಘಟನೆಯಾಗಿದೆ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡದ್ದು. ಒಂದು ರಾಷ್ಟವನ್ನು ಅರಾಜಕತೆಯೆಡೆಗೆ ತಳ್ಳಿದ ದಿನಗಳು. ಒಂದು ಕಡೆ ತಾಲಿಬಾನಿನ ವಿಚಿತ್ರ ಕಾನೂನುಗಳನ್ನು ಅರಗಿಸಿಕೊಳ್ಳಲಾಗದೆ, ದೇಶ ಬಿಡಲು ಹರಸಾಹಸ. ಒಂದೆಡೆ ವಿಮಾನದ ಮೇಲಿನಿಂದ ಬಿದ್ದು ಅಫ್ಘನ್ ಫುಟ್ಬಾಲ್ ಆಟಗಾರ ಸಹಿತ ಹಲವರು ಮೃತ್ಯು. ಇಂತಹ ಹೃದಯಘಾತಕ ಘಟನೆಗಳ ನಡುವೆ ಒಂದಿಷ್ಟು ಸಂಚಲನ ಮೂಡಿಸಿದೆ. ಅದುವೆ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ನ ತಾಲಿಬಾನ್ ವಿರುದ್ದ ಕಾರ್ಯಚರಣೆ.
ಅಫ್ಘನ್ ಉಪಾಧ್ಯಕ್ಷರಾದ ಅಮರುಲ್ಲಾ ಸಲೇಹಿ ಇತ್ತೀಚಿನ ದಿನಗಳಲ್ಲಿ ನೀಡಿದ ಹೇಳಿಕೆಯು " ತನ್ನ ನಾಯಕ ಅಹಮದ್ ಶಾ ಮಸೂದರ ಧೀರತೆಯನ್ನು ಒತ್ತೆಯಿಡುದಿಲ್ಲ, ತಾಲಿಬಾನಿನ ಮುಂದೆ ತಲೆತಗ್ಗಿಸುವುದಿಲ್ಲ " ಎಂದಾಗಿತ್ತು. ಇದರಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಚಳುವಳಿಯೊಂದು ಆರಂಭಗೊಂಡಿದೆ ಎಂದು ಸ್ಪಷ್ಟವಾಗಿದೆ.
ಸೋವಿಯತ್ Occupation ವಿರುಧ್ಧ, ತಾಲಿಬಾನ್ ವಿರುದ್ಧ ಜಯಿಸಿದ ಅಫ್ಘಾನಿಸ್ತಾನದ ಕಮಾಂಡರ್ ಆಗಿದ್ದರು ಅಹ್ಮದ್ ಶಾ ಮಸೂದಿ. ಅಫ್ಘಾನಿಸ್ತಾನದ ಸಿಂಹವೆಂದೇ ಖ್ಯಾತರಾದವರು. ತಾಲಿಬಾನ್ ಇಂದು ವಶಪಡಿಸಿಕೊಳ್ಳಲು ವಿಫಲವಾಗಿ ಯತ್ನಿಸುತ್ತಿರುವ ಪನ್ಜ್ಶೀರ್ ವ್ಯಾಲಿಯ ಜನತೆ ಇಂದಿಗೂ ಕೊಂಡಾಡುವ ನಾಯಕರಾಗಿದ್ದಾರೆ ಅಹಮದ್ ಷಾ ಮಸೂದಿ ನಾರ್ತನ್ ಅಲೈನ್ಸ್ ಎಂದು ಅರಿಯಲ್ಪಡುವ ಇವರ ಸೇನೆಯ ಪೂರ್ಣ ರೂಪ United Islamic National Front for the Salvation of Afghanistan ಎಂದಾಗಿದೆ. ಇವರ ಧೀರತೆಯನ್ನು ಬಿಟ್ಟುಕೊಡುವುದಿಲ್ಲ, ತಂದೆಯ ಮಾರ್ಗವನ್ನು ಅನುಸರಿಸುತ್ತೇನೆ , ತಾಲಿಬಾನಿಗೆ ಶರಣಾಗುವುದಿಲ್ಲ ಎಂದು ಅಹಮದ್ ಷಾ ಮಸೂದಿಯವರ ಮಗ ಅಹಮದ್ ಮಸೂದಿ ಹೇಳಿಕೆ ನೀಡಿದರು.
ಈಗ ಬರುತ್ತಿರುವ ಸುದ್ದಿಯ ಪ್ರಕಾರ 300ರಷ್ಟು ತಾಲಿಬಾನಿಗಳನ್ನು ನೋರ್ತನ್ ಅಲೈನ್ಸ್ ಕೊಂದುಹಾಕಿದೆ. ಅದಲ್ಲದೇ ತಜಕಿಸ್ತಾನ ನೋರ್ತನ್ ಅಲೈನ್ಸ್ ನ ಬೆಂಬಲಕ್ಕೆ ಬಂದಿದ್ದು ಅವರಿಗೆ ಬೇಕಾದ ಸೇನಾ ಸಹಾಯಗಳನ್ನು ಒದಗಿಸಿದೆ. 3ರಷ್ಟು ಜಿಲ್ಲೆಗಳನ್ನು ತಾಲಿಬಾನ್ ಉಗ್ರರಿಂದ ವಶಪಡಿಸಿಕೊಂಡಿದೆ ಎಂದು ಕೂಡ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ನೋರ್ತನ್ ಅಲೈನ್ಸ್ ಸೇನೆಯೊಂದೆಗೆ ಅಫ್ಘನ್ ಜನತೆಯು ಕೈಜೋಡಿಸುತ್ತಿದ್ದು ಚಳುವಳಿಯಾಗಿ ರೂಪುಗೊಂಡಿದೆ.

No comments
Post a Comment