ಮಡಿಕೇರಿ ಆ.23(web@timesofcoorg):-ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕುಶಾಲನಗರ ಬಳಿಯ ಕೊಪ್ಪ, ಹಾಸನ ಜಿಲ್ಲೆಯ ಗಡಿ ಭಾಗದ ಶಿರಂಗಾಲ, ಶಾಂತಪುರ ಚೆಕ್ಪೋಸ್ಟ್ಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಹಾಗೆಯೇ ಶಿರಂಗಾಲ ಮತ್ತು ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೋವಿಡ್ ನಿರೋಧಕ ಲಸಿಕೆ ಶೇಕಡವಾರು ಪ್ರಮಾಣ ಮತ್ತಿತರ ಬಗ್ಗೆ ಮಾಹಿತಿ ಪಡೆದರು.
ಚೆಕ್ಪೋಸ್ಟ್ಗಳಲ್ಲಿನ ಕಾರ್ಯ ಚಟುವಟಿಕೆ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಕುಶಾಲನಗರದ ತಹಶೀಲ್ದಾರ್ ಪ್ರಕಾಶ್, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಇತರರು ಇದ್ದರು.
No comments
Post a Comment