KCF ವತಿಯಿಂದ ಕೊಡಗು ಪ್ರಳಯ ಸಂತ್ರಸ್ತರಿಗೆ ನಿರ್ಮಿಸಿದ ಮನೆಗಳ ಹಸ್ತಾಂತರ

No comments

ಸುಂಟಿಕೊಪ್ಪ (web@timesofcoorg) :2018ರ ಕೊಡಗಿನ ಪ್ರಳಯದಲ್ಲಿ ಸಂತ್ರಸ್ತರಾದವರಿಗೆ ಮನೆ ನಿರ್ಮಿಸಲು ಸುಲ್ತಾನುಲ್ ಉಲಮಾ, ಭಾರತದ ಗ್ರ್ಯಾಂಡ್ ಮುಫ್ತಿ, ಕೊಡಗು ಜಿಲ್ಲೆಯ ಖಾಝಿಯೂ ಆದ ಶೈಖುನಾ ಎ.ಪಿ ಉಸ್ತಾದರು ನಿರ್ದೇನದಂತೆ 16 ಸಂತ್ರಸ್ತರಿಗೆ ಮನೆ ನಿರ್ಮಿಸಲು ತನ್ನ ಒಂದು ಎಕರೆ ಸ್ಥಳವನ್ನು ಜಿಲ್ಲಾ ಪಂಚಾಯಿತಿ ಸದಸ್ಯರು, ಕರ್ನಾಟಕ ಮುಸ್ಲಿಂ ಜಮಾಅತ್ ಕೋಶಾಧಿಕಾರಿಯೂ ಆದ ಲತೀಫ್ ಸುಂಟಿಕೊಪ್ಪ ಎಸ್.ವೈ.ಎಸ್ ರಾಜ್ಯ ಸಮಿತಿಗೆ ದಾನವಾಗಿ ನೀಡಿದ್ದರು.

ಈ ಸ್ಥಳದಲ್ಲಿ ಅನಿವಾಸಿ ಸುನ್ನಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ವತಿಯಿಂದ ನಿರ್ಮಿಸಿದ ಮೂರು ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.


ಅಸ್ಸೈಯ್ಯಿದ್ ಶಿಹಾಬುದ್ದೀನ್ ಸಖಾಫಿ ಅಲ್ ಹೈದ್ರೂಸಿ ಕಿಲ್ಲೂರು ತಂಙಳ್,  ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮನೆಗಳನ್ನು ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಸಿಎಫ್ ಇಂಟರ್ ನ್ಯಾಷನಲ್ ಸಮಿತಿಯ ನಾಯಕರಾದ  ಶೇಖ್ ಬಾವ ಹಾಜಿ ಮಂಗಳೂರು ವಹಿಸಿದ್ದರು. ಕೆಸಿಎಫ್ ಯುಎಇ ಅಧ್ಯಕ್ಷ ಜಲೀಲ್ ನಿಝಾಮಿ ಸ್ವಾಗತಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಪ್ರತಿಯೊಬ್ಬರು ಅವರವರ ಧರ್ಮಗಳನ್ನು ಸರಿಯಾಗಿ ಪಾಲಿಸಬೇಕು. ಸಮಾಜ ಸೇವೆಗಳನ್ನು ದಾನ ಧರ್ಮಗಳನ್ನು ಮಾಡಬೇಕು.   ಜಾತಿ ಮತ ಭೇದವಿಲ್ಲದೆ ಕೊಡಗು ಪ್ರಳಯ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಸಿಕೊಟ್ಟದ್ದಕ್ಕೆ ಹಾಗೂ  ಸುನ್ನಿ ಸಂಘಟನೆಗಳ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.

ಸ್ಥಳ ದಾನವಾಗಿ ನೀಡಿದ ಲತೀಫ್ ಸುಂಟಿಕೊಪ್ಪರವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಲಾಯಿತು.ಕೆಸಿಎಫ್ ನಾಯಕರು , ರಾಜಕೀಯ ಮುಖಂಡರು ಧರ್ಮಜ ಉತ್ತಪ್ಪ , ಉಲಮಾ ಉಮರಾ ನೇತಾರರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಕೆಸಿಎಫ್ ನಾಯಕರಾದ  ಶೇಖ್ ಬಾವ ಹಾಜಿ ಮಂಗಳೂರು, ಎಸ ವೈಎಸ್ ರಾಜ್ಯ ಮೀಡಿಯಾ ಕಾರ್ಯದರ್ಶಿ ಹಫೀಳ್ ಸಅದಿ ಕೊಳಕೇರಿ, ಕೆಸಿಎಫ್ ವೆಲ್ಫೇರ್ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ , ಕೆಸಿಎಫ್ ಸೌದಿ ಅರೇಬಿಯಾ ಅಧ್ಯಕ್ಷರು ಯೂಸುಫ್ ಸಖಾಫಿ ಬೈತಾರ್, ಖಲಂದರ್ ಕಬಕ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎ ಮುಹಮ್ಮದ್ ಹಾಜಿ ಕುಂಜಿಲ, ಜಂಞಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೆ.ಎಸ್ ಶಾದುಲಿ ಫೈಝಿ, ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ, ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ ಮೊಯ್ದೀನ್, SYS SSF ಮುಸ್ಲಿಂ ಜಮಾಅತಿನ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ : ಮುಹಮ್ಮದ್ ಶಿಬಿಲಿ ಕಲ್ಕಂದೂರ್















No comments

Post a Comment