ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಕೆ.ಎಂ ಇಕ್ಬಾಲ್ ಬಾಳಿಲ

No comments

ಮಡಿಕೇರಿ (web@timesofcoorg) :ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಸಂರಕ್ಷಣೆ, ನಮ್ಮೆಲ್ಲರ ಕರ್ತ್ಯವಾಗಿದೆ ಎಂದು ಟ್ರೆಂಡ್ ಕೇಂದ್ರ ಸಮಿತಿ ಸದಸ್ಯ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್  ಕಾರ್ಯದರ್ಶಿಯಾದ ಕೆ.ಎಂ ಇಕ್ಬಾಲ್ ಬಾಳಿಲ ಅಭಿಪ್ರಾಯಪಟ್ಟರು.

ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ವತಿಯಿಂದ "ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಿರಲಿ" ಎಂಬ ಧ್ಯೇಯ ವಾಕ್ಯದಡಿಯಲ್ಲಿ ಆನ್ಲೈನ್ ಕಾರ್ಯಕ್ರಮದ ಮೂಲಕ 75ನೇ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡು‌ ಮಾತನಾಡಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರ ಕೊಡುಗೆಗಳು,ವೀರಸೇನಾನಿಗಳ ತ್ಯಾಗ-ಬಲಿದಾನಗಳ ಚರಿತ್ರೆಗಳು, ಇತಿಹಾಸದ ಪುಟಗಳು ತಿರುವಿದಾಗ ನಮಗೆ ಕಾಣಸಿಗುತ್ತದೆ. ದುರಾದೃಷ್ಟವಶಾತ್ ಈ ಚರಿತ್ರೆಗಳು ಇತಿಹಾಸದ ಪುಟಗಳಿಂದ ಕಣ್ಮರೆಯಾಗುತ್ತಿವೆ ಎಂದು  ಇಕ್ಬಾಲ್ ಬಾಳಿಲ‌ ಬೇಸರ ವ್ಯಕ್ತಪಡಿಸಿದರು. ಭಾರತೀಯರಾದ ನಮ್ಮ ಮೇಲೆ, ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸಗಳನ್ನು  ಉಳಿಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ಇದೆ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಎಸ್.ಕೆ.ಎಸ್.ಎಸ್.ಎಫ್.,ಜಿಸಿಸಿ ಕೊಡಗು ಅಧ್ಯಕ್ಷರಾದ, ಹುಸೈನ್ ಫೈಝಿ,75ನೇ ಸ್ವಾತಂತ್ರ್ಯದ  ಸಂಭ್ರಮದಲ್ಲಿದ್ದೇವೆ.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ನಾವು ಪ್ರತಿನಿತ್ಯ ನೆನಪಿಸಿಕೊಳ್ಳಬೇಕಾಗಿದೆ.ನಾವಿಂದು ಅನುಭವಿಸುತ್ತಿರುವ ಭಯಮಿಶ್ರಿತ ಸ್ವಾತಂತ್ರ್ಯ ,ಪ್ರತಿಯೊಂದು ವಿಷಯದಲ್ಲೂ ದೇಶ ಏಕಾದಿಪತ್ಯದೆಡೆಗೆ ಸಾಗುತ್ತಿದೆ ಎಂದು ನೋವು ವ್ಯಕ್ತಪಡಿಸಿದರು.ಪ್ರತಿಭಟನೆಗಳನ್ನ ದಮನಿಸಲ್ಪಡುತ್ತಿದೆ.

ಪ್ರಜಾಪ್ರಭುತ್ವ ,ಜಾತ್ಯಾತೀತೆ, ಸಾರ್ವಭೌಮತ್ವ  ಹಾಗೂ ಸಾಮಾಜಿಕ ನ್ಯಾಯ ಎಲ್ಲವೂ ಅಪಾಯದಲ್ಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಅಧ್ಯಕ್ಷರಾದ ಹುಸೈನ್ ಫೈಝಿ ಹೇಳಿದರು.ಕಾರ್ಯಕ್ರಮವನ್ನು ಎಸ್‌.ಕೆ.ಎಸ್ ಎಸ್.ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ಉದ್ಘಾಟಿಸಿದರು. 

 ಎಸ್.ಕೆ‌.ಎಸ್.ಎಸ್‌‌.ಎಫ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಹೈಬ್ ಫೈಝಿ  ಎಸ್‌‌‌.ಕೆ ಎಸ್‌.ಎಸ್.ಎಫ್  ಕೊಡಗು ಜಿಲ್ಲಾ ಕೋಶಾಧಿಕಾರಿ ಸಿದ್ದೀಕ್ ಹಾಜಿ, ಮಾಧ್ಯಮ ವಿಭಾಗ ಅಧ್ಯಕ್ಷರಾದ ಶಫೀಕ್ ನೆಲ್ಲಿಹುದಿಕೇರಿ,ಹಾಗೂ ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಸಮಿತಿಯ ನಾಯಕರುಗಳು, ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಝೈನುದ್ದೀನ್ ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು.ಅಶ್ಫಾಕ್ ಕೊಡ್ಲಿಪೇಟೆ ಸ್ವಾಗತಿಸಿ, ಅಬ್ದುಲ್ ಗಫೂರ್ ವಂದಿಸಿ, ಯಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿದರು.

No comments

Post a Comment