ಮಡಿಕೇರಿ ಆ.16(web@timesofcoorg):-1964 ಕರ್ನಾಟಕ ಮುನಿಸಿಪಾಲಿಟಿಗಳ ಕೌನ್ಸಿಲರುಗಳ ಉಪಬಂಧಗಳ ಅಡಿಯಲ್ಲಿ ಸ್ಥಾಪಿತವಾದ ಕೊಡಗು ಜಿಲ್ಲೆಯ ಸೋಮವಾರಪೇಟೆ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿ ಕೌನ್ಸಿಲರುಗಳ ಖಾಲಿ ಇರುವ ಸ್ಥಾನಗಳನ್ನು ತುಂಬಲು ಚುನಾವಣೆಯ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಹೊರಡಿಸಿದ್ದಾರೆ.
ಈಗ 1977 ಕರ್ನಾಟಕ ಮುನಿಸಿಪಾಲಿಟಿಗಳ ಕೌನ್ಸಿಲರುಗಳ(ಚುನಾವಣೆ) ನಿಯಮಗಳ 8 ನೇ ನಿಯಮದ ಅನುಸಾರವಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೋಮವಾರಪೇಟೆ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಚುನಾವಣೆ ಸಂಬಂಧ ವೇಳಾಪಟ್ಟಿಯನ್ನು ನಿಗಧಿಪಡಿಸಿ ಪ್ರಕಟಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಆಗಸ್ಟ್, 23 ಕೊನೆಯ ದಿನವಾಗಿದೆ. ಆಗಸ್ಟ್, 24 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಆಗಸ್ಟ್, 26 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ. ಸೆಪ್ಟೆಂಬರ್, 03 ರಂದು ಮತದಾನ ಅವಶ್ಯವಿದ್ದರೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.
ಚುನಾವಣೆ ನಡೆಯುವ ವಾರ್ಡಿನ ಹೆಸರು ಮತ್ತು ಪ್ರವರ್ಗ/ ಮೀಸಲಾತಿ ವಿವರ: ಸೋಮವಾರಪೇಟೆ ತಾಲ್ಲೂಕು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸೋಮವಾರಪೇಟೆ-1(ಬಸವೇಶ್ವರ ರಸ್ತೆ) ಹಿಂದುಳಿದ ವರ್ಗ(ಬಿ), ಸೋಮವಾರಪೇಟೆ-3(ವೆಂಕಟೇಶ್ವರ ಬ್ಲಾಕ್) ಸಾಮಾನ್ಯ ಮಹಿಳೆ. ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿರಾಜಪೇಟೆ-13(ಮೀನುಪೇಟೆ-2) ಸಾಮಾನ್ಯ.
No comments
Post a Comment