ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ : ಕೊಡಗು ಜಿಲ್ಲೆಗೆ 14 ನೇ ಸ್ಥಾನ..!

No comments

ಮಡಿಕೇರಿ ಆ.10(Times Of Coorg):-ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಕೊಡಗು ಜಿಲ್ಲೆಯಲ್ಲಿ ಒಟ್ಟು 6,483 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ ಎ+ ಗ್ರೇಡ್‍ನಲ್ಲಿ 499 ವಿದ್ಯಾರ್ಥಿಗಳು, ‘ಎ’ ಗ್ರೇಡ್‍ನಲ್ಲಿ 1151 ವಿದ್ಯಾರ್ಥಿಗಳು, ‘ಬಿ’ ಗ್ರೇಡ್‍ನಲ್ಲಿ 2969 ವಿದ್ಯಾರ್ಥಿಗಳು ಹಾಗೂ ‘ಸಿ’ ಗ್ರೇಡ್‍ನಲ್ಲಿ 1864 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.   

ಸರ್ಕಾರಿ ಶಾಲೆಯ 952 ವಿದ್ಯಾರ್ಥಿಗಳು ಮತ್ತು 1000 ವಿದ್ಯಾರ್ಥಿನೀಯರು ಉತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಯ 998 ವಿದ್ಯಾರ್ಥಿಗಳು ಮತ್ತು 942 ವಿದ್ಯಾರ್ಥೀನೀಯರು ಉತ್ತೀರ್ಣರಾಗಿದ್ದಾರೆ. ಅನುದಾನರಹಿತ ಶಾಲೆಗಳಿಂದ 1284 ವಿದ್ಯಾರ್ಥಿಗಳು ಮತ್ತು 1307 ವಿದ್ಯಾರ್ಥಿನೀಯರು ಉತ್ತೀರ್ಣರಾಗಿದ್ದಾರೆ.  

ಕೊಡಗು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರ: ಮಡಿಕೇರಿ ತಾಲ್ಲೂಕಿನ ಸಂತ ಜೋಸೆಫರ್ ಶಾಲೆಯ ರೊಲೆನ್ಸಿಯಾ ಬೆನ್ (623), ಅನನ್ಯ ಎಂ.ಎಚ್(621), ಮೂರ್ನಾಡು ಶ್ರೀ ಮಾರುತಿ ಶಾಲೆಯ(ಇಂಗ್ಲೀಷ್) ಡಬ್ಲ್ಯು.ಪಿ.ವೈಶಾಲಿ(619), ಚೇರಂಬಾಣೆ ಕೊತೂರು ಶ್ರೀ ರಾಜರಾಜೇಶ್ವರಿ ಇಎಂ ಶಾಲೆಯ ಕೆ.ಟಿ.ಹರ್ಷಿಯ(619).

ವಿರಾಜಪೇಟೆ ತಾಲ್ಲೂಕಿನ ಕಳತ್ಮಾಡು ಲಯನ್ಸ್ ಪ್ರೌಢ ಶಾಲೆಯ ಲಾಸ್ಯ ಕಾವೇರಮ್ಮ ಕೆ.ಎಂ(623), ಬಿಪಿನ್ ಚಂಗಪ್ಪ ಪಿ.ಎಸ್.(623), ಆರ್ಯನ್ ಕಾರ್ಯಪ್ಪ(621) ಅಂಕ ಪಡೆದಿದ್ದಾರೆ. 

ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯ ಜೆನಿತಾ ಎ.ಎಂ.(625), ಕುಶಾಲನಗರದ ಫಾತಿಮಾ ಕಾನ್ವೆಂಟ್‍ನ ಮಯೂರಿ ಯು.ಎಂ.(621), ಸೋಮವಾರಪೇಟೆ ಒಎಲ್‍ವಿ ಕಾನ್ವೆಂಟ್‍ನ ಅಪೂರ್ವ (621), ಸುಂಟಿಕೊಪ್ಪ ಸಂತ ಮೇರಿ ಪ್ರೌಢ ಶಾಲೆಯ ಗ್ಲೇನಿಯ ಡಿ ಸೋಜಾ (621) ಮತ್ತು ಕುಶಾಲನಗರದ ಫಾತಿಮಾ ಕಾನ್ವೆಂಟ್‍ನ ಮುಸ್ಕಾನ್ (619) ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರನ್ ಅವರು ತಿಳಿಸಿದ್ದಾರೆ.

No comments

Post a Comment