ಮಡಿಕೇರಿ : ಕೊಡಗು ಜಿಲ್ಲೆಯನ್ನು ಉಗ್ರರ ಕೆಲವು ತಂಡಗಳು ತರಬೇತಿಗೆ ಆಯ್ಕೆ ಮಾಡಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳದ ಮಾಹಿತಿ ಸಂಬಂಧಿಸಿದಂತೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಪ್ರತಿಕ್ರಿಯಿಸಿದ್ದಾರೆ.
ಭಾರತವನ್ನು ಉಗ್ರರು ತಮ್ಮ ತಾಣವಾಗಿಸಿಕೊಂಡು ಧಾಳಿಗೆ ಸಂಚು ಹೂಡಿದ್ದರು. ಕೊಡಗಿನಲ್ಲಿಯೂ ತರಬೇತಿ ತಾಣ ಹೊಂದಲು ಉಗ್ರರು ಸಂಚು ರೂಪಿಸಿದ್ದರು. ರಾಷ್ಟ್ರೀಯ ತನಿಖಾ ದಳ ಕೂಡ ಇದನ್ನು ಖಚಿತಪಡಿಸಿದೆ.
ಕೆಲವು ವಷ೯ಗಳ ಹಿಂದೆಯೇ ಗರಗಂದೂರು ಬಳಿ ಮದನಿ ಎಂಬ ಉಗ್ರವಾದಿ ಉಗ್ರರಿಗೆ ತರಬೇತಿ ನಡೆಸಲು ಮುಂದಾಗಿದ್ದರು. ಹೀಗಾಗಿ ಕೊಡಗು ಜಿಲ್ಲೆ ಉಗ್ರ ಚಟುವಟಿಕೆಗಳಿಗೆ ಈ ಮೊದಲಿನಿಂದಲೇ ಗುರಿಯಾಗಿತ್ತು. ಪಶ್ಚಿಮಘಟ್ಟ ಅಮೂಲ್ಯ ವನ, ವನ್ಯಜೀವಿಗಳಿಗೆ ತಾಣವಾಗಬೇಕಿತ್ತು. ಆದರೆ ಇತ್ತೀಚಿಗೆ ಕೊಡಗಿನ ಕಾಡುಗಳು ಉಗ್ರ ತರಬೇತಿ ಚಟುವಟಿಕೆಗಳಿಗೆ ಗುರಿಯಾಗುತ್ತಿರುವುದು ಆತಂಕಕಾರಿ ಎಂದು ಬೋಪಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಕಾಫಿ ತೋಟಗಳಿಗೆ ಅಸ್ಸಾಂ ಮೂಲಕ ಕಾಮಿ೯ಕರು ಕೂಡಲೇ ಪೊಲೀಸ್ ಠಾಣೆಗಳಲ್ಲಿ ಪರರಾಜ್ಯಗಳ ಕಾಮಿ೯ಕರ ಹೆಸರು, ಫೋಟೋ ಆಧಾರ್ ಕಾರ್ಡ್ ಸಹಿತ ಮಾಹಿತಿ ನೋಂದಣಿಯಾಗಲೇ ಬೇಕು. ಆದರೆ ಅನೇಕರು ಈ ನಿಯಮ ಪಾಲಿಸುತ್ತಿಲ್ಲ.ಮುಂದೆ ಅಪಾಯ ಎದುರಾದಾಗ ಎಚ್ಚತ್ತುಕೊಂಡರೆ ಪ್ರಯೋಜನವಿಲ್ಲ. ಕೂಡಲೇ ತೋಟ ಮಾಲೀಕರು ಅಸ್ಸಾಂ ಸೇರಿದಂತೆ ಪರರಾಜ್ಯದ ಕಾಮಿ೯ಕರ ಮಾಹಿತಿ ದಾಖಲಿಸುವಂತೆ ಕೆ.ಜಿ.ಬೋಪಯ್ಯ ಸಲಹೆ ನೀಡಿದ್ದಾರೆ.
ಕಾಶ್ಮೀರದ ಸಮಸ್ಯೆ ಕೊಡಗಿನಲ್ಲಿಯೂ ಸಂಭವಿಸುವ ಸಾಧ್ಯತೆಯನ್ನು ಈಗಲೇ ತಡೆಗಟ್ಟುವುದು ಅಗತ್ಯ. ಕೊಡಗಿಗೆ ಪ್ರವಾಸಿಗರು ಸೇರಿದಂತೆ ಯಾರು ಯಾರೋ ಬರುತ್ತಿದ್ದಾರೆ. ಹೀಗಾಗಿ ಕೊಡಗಿನ ಮಾಕುಟ್ಟ, ಕುಟ್ಟ, ಕರಿಕೆ, ಸಂಪಾಜೆ ಚೆಕ್ ಪೋಸ್ಟ್ ಸೇರಿದಂತೆ ಜಿಲ್ಲೆಯ ಎಲ್ಲಾ ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಲೇಬೇಕು. ಕೊಡಗಿಗೆ ಬರುವವರ ಮೇಲೆ ಪೊಲೀಸರು ಹದ್ದಿನಗಣ್ಣಿಡಬೇಕು.
ಕೊಡಗು ಮತ್ತೊಂದು ಉಗ್ರರ ತಾಣ ಆಗದಂತೆ ಜಿಲ್ಲೆಯ ಜನತೆ ಎಚ್ಚರಿಕೆ ವಹಿಸಲೇಬೇಕಾದ ದಿನಗಳು ಬಂದಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.

No comments
Post a Comment