ಉಸ್ಮಾನ್ ಹಾಜಿ ನಿಧನ: ವಿಶೇಷ ಪ್ರಾರ್ಥನೆ ನೆರವೇರಿಸಿ: ಸಮಸ್ತ ನಾಯಿಬ್ ಖಾಝಿ ಎಂ.ಎಂ ಅಬ್ದುಲ್ಲ ಫೈಝಿ
ಮಡಿಕೇರಿ (Times Of Coorg): ಸೋಮವಾರದಂದು ನಮ್ಮನ್ನಗಲಿದ ಕೊಡಗು ಸಮಸ್ತ ನೇತಾರ ,ಸಮಸ್ತ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಹಾಗೂ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷರು ಆದ ಕೆ,ಯು, ಉಸ್ಮಾನ್ ಹಾಜಿ ಸಿದ್ದಾಪುರರವರ ನಿಧನ ಸಮುದಾಯಕ್ಕೂ ಸಮಾಜಕ್ಕೂ ತೀವ್ರ ನಷ್ಟವನ್ನು ಉಂಟುಮಾಡಿದೆ. ಮೃತರಿಗಾಗಿ ಜಿಲ್ಲೆಯ ಎಲ್ಲಾ ಮಸೀದಿ ಮದರಸಾಗಳಲ್ಲಿ ಪ್ರತ್ಯೇಕ ಪ್ರಾರ್ಥನೆ ನಡೆಸಬೇಕಾಗಿಯೂ ಮತ್ತು ಶುಕ್ರವಾರ ಜುಮಾ ನಮಾಝ್ ಬಳಿಕ ಮೃತರ ಮೇಲೆ ಮಯ್ಯತ್ ನಮಾಜ್ ನಿರ್ವಹಿಸಬೇಕಾಗಿಯೂ ಸಮಸ್ತ ಕೊಡಗು ಜಿಲ್ಲಾ ನಾಯಿಬ್ ಖಾಜಿ ಎಂ ಎಂ ಅಬ್ದುಲ್ಲ ಫೈಝಿ ಯವರು ತಿಳಿಸಿದ್ದಾರೆ.

No comments
Post a Comment