ಸುಂಟಿಕೊಪ್ಪದಲ್ಲಿ SSF ಇಂತಿಬಾಹ್ ದಅವಾ ಕಾನ್ಫರೆನ್ಸ್ ಹಾಗೂ ಅನುಸ್ಮರಣೆ

No comments

ಸೋಮವಾರಪೇಟೆ (Times Of Coorg) : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ SSF ಸೋಮವಾರಪೇಟೆ ಡಿವಿಷನ್ ವತಿಯಿಂದ ರಾಜ್ಯದ ವಿವಿಧ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮುತಅಲ್ಲಿಂ  ದಅವಾ ಸಂಗಮವನ್ನು ಸುಂಟಿಕೊಪ್ಪ ಇಹ್ಸಾನಿಯ್ಯ ಮಹಿಳಾ ಶರೀಅತ್ ಕಾಲೇಜಿನಲ್ಲಿ  ನಡೆಯಿತು. ಡಿವಿಷನ್ ಅಧ್ಯಕ್ಷರಾದ ಕಮರುದ್ದೀನ್ ಅನ್ವಾರಿ ಅಸ್ಸಖಾಫಿರವರ ಅದ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮವು ಸೋಮವಾರಪೇಟೆ ತಾಲ್ಲೂಕು ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಉಸ್ತಾದ್ ರಫೀಕ್ ಸಅದಿ ಉದ್ಘಾಟಿಸಿದರು.

 ನಂತರ ವಿದ್ಯಾರ್ಥಿಗಳಿಗೆ ತರಗತಿ ನಡೆಯಿತು. ಮುತಅಲ್ಲಿಮರಲ್ಲಿ ಆಧ್ಯಾತ್ಮಿಕತೆ ಎಂಬ ವಿಷಯದಲ್ಲಿ ಮೌಲಾನಾ ಉಸಾಮ ಸಖಾಫಿ ಅಲ್ ಅಫ್ಳಲಿ ಉಸ್ತಾದರು ತರಗತಿ ನಡೆಸಿದರು. ಎರಡನೇ ತರಗತಿ ಮೌಲಾನಾ ಮಹಮ್ಮದ್ ಫಾಳಿಲಿ ಅಲ್ ಕಾಮಿಲ್ ಸಖಾಫಿ ಕೊಡ್ಲಿಪೇಟೆ  ಮುತಅಲ್ಲಿಮರ ಸಂಘಟನಾ ಕಾರ್ಯಾಚರಣೆ ಹೇಗೆ ಎಂಬ ವಿಷಯದ ಕುರಿತು  ಆಳವಾದ ರೀತಿಯಲ್ಲಿ ವಿಷಯವನ್ನು ಮಂಡಿಸಿದರು . ಇತ್ತೀಚೆಗೆ ನಮ್ಮನ್ನಗಲಿದ ತಾಜುಲ್ ಫುಖಹಾಅ್ ಶೈಖುನಾ ಬೇಕಲ್ ಉಸ್ತಾದರ ಅನುಸ್ಮರಣೆ ಹಾಗೂ ದುಆ ಮಜ್ಲಿಸ್ ಫಾಳಿಲಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು. ಲಾಕ್ಡೌನ್ ಕಾಲದಲ್ಲಿ ಕರ್ನಾಟಕ ರಾಜ್ಯ SSF ಹಮ್ಮಿಕೊಂಡ ತನಾಫುಸ್ ಒನ್ಲೈನ್  ಸ್ಪರ್ಧೆಯಲ್ಲಿ ಎರಡು ಬಾರಿ ಜಿಲ್ಲಾ ಕಲಾ ಪ್ರತಿಭೆಯಾಗಿ ಹೊರ ಚಿಮ್ಮಿದ ಅನ್ವಾರುಲ್ ಹುದಾ ವಿದ್ಯಾಥಿ೯ ಶರೀಫ್ ಎ ಪಿ ಹೊಸತೋಟರವರನ್ನು ನಾಯಕರ ಸಮ್ಮುಖದಲ್ಲಿ SSF ಸೋಮವಾರಪೇಟೆ ಡಿವಿಷನ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮಲ್ಲಿ ಡಿವಿಷನ್ ನಾಯಕರಾದ ಹನೀಫ್ ಅಶ್ರಫಿ ಆರಿಫ್ ಸಖಾಫಿ, ಅಶ್ರಫ್ ಅಹ್ಸನಿ ನಜ್ಮುದ್ದೀನ್ ಝುಹ್ರಿ, ಸ್ವಾಧಿಕ್ ಹಾಗೂ ಅಬೂಬಕ್ಕರ್ ಉಪಸ್ಥಿತರಿದ್ದರು
ಸುಂಟಿಕೊಪ್ಪ ಸೆಕ್ಟರ್ ಅಧ್ಯಕ್ಷರಾದ ಮುಹಮ್ಮದ್ ಶಾಫಿ ಅನ್ವಾರಿ ಅಸ್ಸಖಾಫಿ ಕೊಡಗರಹಳ್ಳಿ ಸ್ವಾಗತಿಸಿ ಸ್ವಾಲಿಹ್ ರಹ್ಮಾನಿ ವಂದಿಸಿದರು.



No comments

Post a Comment