ಉಸ್ಮಾನ್ ಹಾಜಿ ನಿಧನ: ಎಸ್.ಕೆ ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಂತಾಪ
ಮಡಿಕೇರಿ (Times Of Coorg) :ಕೊಡಗಿನ ಸಮಸ್ತ ಹಾಗೂ ಹಲವಾರು ಸಂಘಟನೆಗಳಿಗೆ ಎಲ್ಲಾ ರೀತಿಯಲ್ಲಿ ಸಹಾಯ, ಸಹಕಾರದೊಂದಿಗೆ ನೇತೃತ್ವವನ್ನು ನೀಡುತ್ತಿದ್ದ ಮುಂಚೂಣಿಯಲ್ಲಿದ್ದ ನಾಯಕ
ಉಸ್ಮಾನ್ ಹಾಜಿ ಸಿದ್ದಾಪುರ ಅವರ ಮರಣ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ, ಎಂದು ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಂತಾಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಸಮಿತಿಯ ವತಿಯಿಂದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಸಮಸ್ತ ಕೊಡಗು ಜಿಲ್ಲಾ ಮಾನೇಜ್ಮೆಂಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾಗಿ, ಸಿದ್ದಾಪುರ ಮುಸ್ಲಿಮ್ ಜಮಾಅತ್ ಅಧ್ಯಕ್ಷರಾಗಿ 36 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಹಾಗೂ ಅನಾಥ ಮಕ್ಕಳಿಗಾಗಿ ಇರುವ ಸಿದ್ದಾಪುರ ಮುಸ್ಲಿಂ ಅನಾಥಾಲಯ(ಎಸ್.ಎಂ.ಓ) ಇದರ ಪ್ರಮುಖ ರೂವಾರಿಯಾಗಿದ್ದರು. ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಅಲ್ಪಸಂಖ್ಯಾತ ನಾಯಕರಾದ ಉಸ್ಮಾನ್ ಹಾಜಿ ಅಲ್ಲಾಹನ ವಿಧಿಗೆ ವಿಧೇಯರಾಗಿ ನಮ್ಮನ್ನಗಲಿದ್ದಾರೆ. ಅವರ ಅಗಲಿಕೆ ಅತ್ಯಂತ ದುಃಖ ತಂದಿದೆ.ಅವರ ಪರಲೋಕ ಸುಖಕರವಾಗಿರಲಿ ಹಾಗೂ
ಅವರ ಅಗಲುವಿಕೆಯಿಂದ ನೊಂದ ಕುಟುಂಬಕ್ಕೆ ದೇವರು ಸಮಾಧಾನ ನೀಡಿ ಅನುಗ್ರಹಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.
ಮೃತರ ಹೆಸರಿನಲ್ಲಿ ಮಯ್ಯತ್ ನಮಾಝ್ ಹಾಗೂ ವಿಶೇಷ ಪ್ರಾರ್ಥನೆ ನಡೆಸಬೇಕಾಗಿ ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಮನವಿ ಮಾಡಿದ್ದಾರೆ.

No comments
Post a Comment