ಕೊಡವ ಹೆರಿಟೇಜ್ ಕೇಂದ್ರದ ಕಾಮಗಾರಿ ಬಗ್ಗೆ ಮಾಹಿತಿ ಪಡೆದ ವೀಣಾ ಅಚ್ಚಯ್ಯ

No comments

       ಮಡಿಕೇರಿ (Times Of Coorg):-ವಿಧಾನಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಮಡಿಕೇರಿಯಲ್ಲಿ ನಿರ್ಮಾಣವಾಗುತ್ತಿರುವ ಕೊಡವ ಹೆರಿಟೇಜ್ ಕೇಂದ್ರದ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಿಂದ ಮಾಹಿತಿ ಪಡೆದರು.

       ಪರಿಷತ್ ಸದಸ್ಯರಾದ ವೀನಾ ಅಚ್ಚಯ್ಯ ಅವರು ಜಿಲ್ಲೆಯ ಮಡಿಕೇರಿಯಲ್ಲಿ ನಿರ್ಮಾಣವಾಗುತ್ತಿರುವ ಕೊಡವ ಹೆರಿಟೇಜ್ ಕೇಂದ್ರದ ಕಾಮಗಾರಿ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಹಾಗೂ ಬಂದಿದ್ದಲ್ಲಿ ಕಾಮಗಾರಿ ಅನುಮೋದನೆಗೊಂಡ ವರ್ಷ ಮತ್ತು ಕಾಮಗಾರಿಗೆ ಇಲ್ಲಿಯವರೆಗೆ ಬಿಡುಗಡೆಯಾಗಿರುವ ಅನುದಾನದ ಸಂಪೂರ್ಣ ವಿವರ ಮತ್ತು ಕಾಮಗಾರಿಯು ಯಾವ ಹಂತದಲ್ಲಿದೆ ಹಾಗೂ ವಿಳಂಬಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರು.

        ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಸಿ.ಟಿ ರವಿ ಅವರು ಮಾಹಿತಿ ನೀಡಿ ಕೊಡವ ಹೆರಿಟೇಜ್ ಕಾಮಗಾರಿ ವಿಳಂಬವಾಗುತ್ತಿರವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾಮಗಾರಿಯು 2004-05 ನೇ ಸಾಲಿನಲ್ಲಿ ಅನುಮೋದನೆಗೊಂಡಿರುತ್ತದೆ. ಈ ಕಾಮಗಾರಿಗೆ ಈವರೆವಿಗೂ 253.54 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿ ಕೊಡಗು ಜಿಲ್ಲೆ ಇವರಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಉತ್ತರಿಸಿದರು.

         ಅಲ್ಲದೆ 2004-05ನೇ ಸಾಲಿನಲ್ಲಿ ಮಡಿಕೇರಿಯ ಕೊಡವ ಹೆರಿಟೇಜ್ ಸೆಂಟರ್ ಅಭಿವೃದ್ಧಿ ಪಡಿಸುವ 88.75 ಲಕ್ಷ ರೂ.ಗಳ ಅಂದಾಜು ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲು ಭಾರತ ಸರ್ಕಾರದ ಪ್ರವಾಸೋದ್ಯಮ ಮಂತ್ರಾಲಯ ಅನುಮೋದನೆ ನೀಡಿ, ರೂ. 33.54 ಲಕ್ಷಗಳನ್ನು ಅನುಷ್ಠಾನ ಸಂಸ್ಥೆಯಾದ ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆಗೆ ಬಿಡುಗಡೆ ಮಾಡಿದೆ. ನಿಗಧಿತ ಅವಧಿಯಲ್ಲಿ ಕಾಮಗಾರಿ ಅನುಷ್ಠಾನಗೊಳಿಸದ ಕಾರಣ 2010-11 ನೇ ಸಾಲಿನಲ್ಲಿ ಈ ಯೋಜನೆಯನ್ನು ಜಿಲ್ಲಾಧಿಕಾರಿ ಅವರ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಿ ರೂ.33.54 ಲಕ್ಷಗಳನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.

         ಈ ಕಾಮಗಾರಿ ನಿರ್ಮಾಣಕ್ಕೆ ರೂ.145 ಲಕ್ಷ ಗಳ ಮೊತ್ತದ ಅಂದಾಜುಪಟ್ಟಿಗೆ 2010ರ ಆಗಸ್ಟ್ 18 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇ-ಟೆಂಡರ್ ಮೂಲಕ ಗುತ್ತಿಗೆದಾರರಾದ ಎಂ.ಬಿ ಹೇಮಾಶಂಕರ್ ಕ್ಲಾಸ್ 1, ಕಂಟ್ರಾಕ್ಟರ್, ಮೈಸೂರು ಇವರಿಗೆ ರೂ.1,44,10,825.81 ಮೊತ್ತಕ್ಕೆ 2010 ರ ಸೆಪ್ಟಂಬರ್ 12 ರಂದು ಕಾರ್ಯಾದೇಶವನ್ನು ನೀಡಿ 12 ತಿಂಗಳ ಕಾಲಾವಕಾಶದೊಂದಿಗೆ ವಹಿಸಲಾಗಿರುತ್ತದೆ ಎಂದು ಸಚಿವರು ಉತ್ತರಿಸಿದರು.

         ಈ ಕಾಮಗಾರಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಲ್ಯಾಟರೇಟ್ ಮೇಸನರಿ ಅಳವಡಿಸುವ ಪ್ರಸ್ತಾವನೆ ಮಾಡಲಾಗಿತ್ತು. ಕಾಮಗಾರಿಯ ನಿರ್ಮಾಣಕ್ಕೆ ವಹಿಸಿದ ಸ್ಥಳವು ಗುಡ್ಡದ ಮೇಲಿದ್ದರಿಂದ ಹಾಗೂ ಇಳಿಜಾರು ಪ್ರದೇಶದಲ್ಲಿ ಲ್ಯಾಟರೇಟ್ ತಳಪಾಯ ಹಾಕಿದಲ್ಲಿ ಜಾರುವ ಸಾಧ್ಯತೆ ಇದ್ದುದರಿಂದ ಈ ಕಾಮಗಾರಿಗೆ ಮರು ವಿನ್ಯಾಸದ ಅನುಮೋದನೆ ಕೋರಿ 2011 ರಲ್ಲಿ ಡಿಸೆಂಬರ್ 23 ರಂದು ಪ್ರಸ್ತಾವನೆ ಸಲ್ಲಿಸಿದ್ದು, ತಡೆಗೋಡೆಗಳನ್ನು ಕಾಂಕ್ರೀಟ್‍ನಲ್ಲಿ ಅಳವಡಿಸುವಂತೆ ಮುಖ್ಯ ಎಂಜಿನಿಯರ್ ಅವರು 2012 ರ ಏಪ್ರಿಲ್ 26 ರಂದು ಈ ಬದಲಾವಣೆಯಿಂದಾದ ವಿನ್ಯಾಸದಿಂದ ಕೆಲವು ಹೆಚ್ಚುವರಿ ಐಟಂಗಳು ಉದ್ಭವಿಸಿದ್ದು ಈ ಕಾಮಗಾರಿಗಳ ನಿರ್ವಹಣೆಗಾಗಿ ಹೆಚ್ಚುವರಿಯಾಗಿ ರೂ. 1,24,72,050.40 ಗಳ ಅನುದಾನದ ಅವಶ್ಯಕತೆ ಉಂಟಾಗಿ ನಿರ್ಮಾಣಕ್ಕೆ ತಗಲುವ ಒಟ್ಟಾರೆ ರೂ.2,68,04,000 ಗಳಿಗೆ ಪರಿಷ್ಕøತ ಅಂದಾಜು ವೆಚ್ಚದ ಪಟ್ಟಿಗೆ ಸರ್ಕಾರದ ಅನುಮೋದನೆ ನೀಡಲಾಗಿದೆ.

        ಕಾಮಗಾರಿಯ ಪರಿಷ್ಕøತ ಅಂದಾಜು ಪಟ್ಟಿಯ ಅನುಸಾರ ಕೆಲಸವನ್ನು ಗುತ್ತಿಗೆದಾರರು ಪ್ರಾರಂಭಿಸಿ ಮಂದಗತಿಯಲ್ಲಿ ನಿರ್ವಹಿಸುತ್ತಿದ್ದುದರಿಂದ ಗುತ್ತಿಗೆದಾರರಿಗೆ ಹಲವಾರು ತಿಳುವಳಿಕೆ ನೋಟಿಸ್ ನೀಡಿದರೂ ಕಾಮಗಾರಿಯ ನಿರ್ಮಾಣ ಚುರುಕುಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಆಸಕ್ತಿ ವಹಿಸದ ಕಾರಣ ಗುತ್ತಿಗೆದಾರರ ಕರಾರನ್ನು 2016 ರ ಜನವರಿ 4 ರಂತೆ ರದ್ದುಗೊಳಿಸಲು ಕ್ರಮ ಕೈಗೊಂಡಿರುತ್ತಾರೆ.

        ಗುತ್ತಿಗೆದಾರರು ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಗುತ್ತಿಗೆ ಕರಾರರನ್ನು 2018 ರ ನವೆಂಬರ್ 27 ರಲ್ಲಿ ರದ್ದುಗೊಳಿಸಲಾಗಿದೆ. ಗುತ್ತಿಗೆದಾರರು ಗೋಡೆ ಕಟ್ಟಡ ಹಾಗೂ ಮಂಗಳೂರು ಹೆಂಚಿನ ಛಾವಣಿ ಕಾಮಗಾರಿಯನ್ನು ಭಾಹಶಃ ನಿರ್ವಹಿಸಿರುತ್ತಾರೆ.

         ಮುಖ್ಯ ಅಭಿಯಂತರರು, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ), ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಬೆಂಗಳೂರು ಇವರು ಸಲ್ಲಿಸಿರುವ ರೂ. 3,30,45,110 ಲಕ್ಷಗಳ ಪರಿಷ್ಕøತ ಅಂದಾಜು ಪಟ್ಟಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಿ 2020 ರ ಮೇ 27 ರಂದು ಆದೇಶ ಹೊರಡಿಸಲಾಗಿದೆ. ಈ ಕಾರಣಗಳಿಂದಾಗಿ ಕಾಮಗಾರಿಯ ಅನುಷ್ಠಾನ ಸಂಸ್ಥೆಗಳು, ಕಾಮಗಾರಿಯ ವಿನ್ಯಾಸ ಹಾಗೂ ಅಂದಾಜು ಪಟ್ಟಿಗಳಲ್ಲಿ ಅನೇಕ ಬಾರಿ ಬದಲಾವಣೆಗಳಾಗಿರುವುದು ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಸಚಿವರು ತಿಳಿಸಿದರು.

        ಈ ಸಂದರ್ಭ ವೀಣಾ ಅಚ್ಚಯ್ಯ ಅವರು ಯಾವ ಕಾಲ ಮಿತಿಯೊಳಗೆ ಈ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ಅವರು ಪ್ರಶ್ನಿಸಿದರು.

         ಉಳಿಕೆ ಕಾಮಗಾರಿಯನ್ನು ರೂ.97 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲು ಗುತ್ತಿಗೆದಾರರಿಗೆ ಒಪ್ಪಿಗೆ ಪತ್ರ ನೀಡಿ 10 ತಿಂಗಳ ಅವಧಿಗೆ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಸಿ.ಟಿ ರವಿ ಅವರು ಮಾಹಿತಿ ನೀಡಿದರು.

ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರಿಂದ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪ್ರಸ್ತಾಪ
***********************************************************
      ವಿಧಾನ ಪರಿಷತ್ತಿನ ಸದಸ್ಯರಾದ ವೀಣಾ ಅಚ್ಚಯ್ಯ ಅವರು ವಿಧಾನ ಪರಿಷತ್‍ನಲ್ಲಿ ಗಮನ ಸೆಳೆಯುವ ಸೂಚನಾ ಸಂದರ್ಭದಲ್ಲಿ ಮಳೆಗಾಲದಲ್ಲಿ ಸಂಭವಿಸುವ ಭೂಕುಸಿತ ಸಂಬಂಧಿಸಿದಂತೆ ಪ್ರಸ್ತಾಪ ಮಾಡಿದ್ದಾರೆ.

     ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಭಾರಿ ಮಳೆ ಬಂಧಿದ್ದು ಗಜಗಿರಿಯೆಂಬ ಬೆಟ್ಟದ ಭಾಗವೇ ಕುಸಿದಿದ್ದು ಇದರಿಂದ ಅರ್ಚಕ ಕುಟುಂಬದ ಐವರು ವಾಸಿಸುತ್ತಿದ್ದ ಮನೆ ಸಹಿತ ಜೀವಂತ ಸಮಾಧಿಯಾಗಿ ಹೋದರು. ಮುಂದೆಯೂ ಈ ವಿಭಾಗದಲ್ಲಿ ಇನ್ನೂ ಭಾರೀ ಅನಾಹುತವಾಗುವ ಮುನ್ಸೂಚನೆ ಇದೆ. ಈ ವಿಭಾಗದ ಗಜಗಿರಿ, ಮೊದಲಾದ ಬೆಟ್ಟಗಳು ನಿಧಾನವಾಗಿ ಕುಸಿಯುವ ಅಪಾಯ ಕಂಡು ಬರುತ್ತಿವೆ.

      ದೇಶದ ಜೀವನಾಡಿಯಾದ ಕಾವೇರಿಯ ಉದ್ಭವ ಸ್ಥಳವಾದ ಬ್ರಹ್ಮ ಕುಂಡಿಕೆ ಭಾಗಕ್ಕೂ ಮುಂದಿನ ಮಳೆಗಾಲದಲ್ಲಿ ಅಪಾಯ, ಎಚ್ಚರಿಕೆಯ ಗಂಟೆ ಈಗಾಗಲೇ ಬಾರಿಸಲ್ಪಟ್ಟಿದೆ. ಈ ಕೂಡಲೆ ಎಚ್ಚೆತ್ತುಕೊಂಡು, ನುರಿತ ಇಂಜಿನಿಯರ್ ಗಳು, ತಂತ್ರಜ್ಞರುಗಳು ಹಾಗೂ ಪರಿಸರ ಯೋಜನೆಗಳನ್ನು ಬಲ್ಲವರನ್ನು ಕರೆಸಿ, ಸ್ಥಳ ಪರಿಶೀಲನೆ ನಡೆಸಿ ಮುಂದಿನ ವರ್ಷಗಳಲ್ಲಿ ಅನಾಹುತ ಸಂಭವಿಸದಂತೆ ತಕ್ಷಣವೇ ಕಾರ್ಯ ಯೋಜನೆಯನ್ನು ಪ್ರಾರಂಭಿಸಬೇಕು. ಅದು ಬೃಹತ್ತಾದ, ಅತ್ಯಂತ ಶಕ್ತಿಯುತ ತಡೆಗೋಡೆ ಇರುಬಹುದು ಅಥವಾ ಬೆಟ್ಟ ಕುಸಿಯದಂತೆ ಇನ್ನಿತರ ಯಾವುದೇ ಬದಲಿ ಕ್ರಮ ಇರಬಹುದು, ಪರಿಣಿತರ ಪ್ರತ್ಯಕ್ಷ  ನೇತ್ರತ್ವದಲ್ಲಿಯೇ ಈ ಕಾರ್ಯ ಯೋಜನೆಯನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ವೀಣಾ ಅಚ್ಚಯ್ಯ ಅವರು ಗಮನ ಸೆಳೆದರು. 

      ಈ ಕುರಿತು ಕಂದಾಯ ಸಚಿವರಾದ ಆರ್.ಅಶೋಕ್ ಅವರು ಮಾಹಿತಿ ನೀಡಿ ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕುಸಿತಗಳ ಬಗ್ಗೆ ಸರ್ಕಾರದ ಗಮನ ಹರಿಸಿದೆ. ಈಗಾಗಲೇ ಜಿಐಎಸ್ (ಭಾರತೀಯ ಭೂ ವೈಜ್ಞಾನಿಕ ಸಮೀಕ್ಷ) ಕೊಡಗು ಜಿಲ್ಲೆಯ ಭೂಕುಸಿತ ಪ್ರದೇಶಗಳ ಅಧ್ಯಯನವನ್ನು ನಡೆಸುತ್ತಿದೆ. ಆದರೂ ವಿಪತ್ತು ನಿರ್ವಹಣೆಯ ಭಾಗವಾಗಿ ಬರುವ ದಿನಗಳಲ್ಲಿ ನುರಿತ ಎಂಜಿನಿಯರ್‍ಗಳು ಹಾಗೂ ಭೂ ವಿಜ್ಞಾನಿಗಳನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಿ ಅಧ್ಯಯನ ನಡೆಸಿ ಸೂಕ್ತ ಶಿಫಾರಸ್ಸು ಗಳನ್ನು ನೀಡಲು ಸೂಚಿಸಲಾಗುವುದು. ಶಿಫಾರಸ್ಸುಗಳನ್ವಯ ಸಂಬಂದಪಟ್ಟ ಇಲಾಖೆಯಿಂದ ವಿವಾರವಾದ ಯೋಜನೆಯ ಪ್ರಸ್ತಾವನೆಯನ್ನು ತಯಾರಿಸಿ ಸರ್ಕಾರಕ್ಕೆ ನೀಡಲು ಹಾಗೂ ತದನಂತರ ಅನುμÁ್ಠನಗೊಳಿಸಲು ಸೂಚಿಸಲಾಗುವುದು ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ಮಾಹಿತಿ ನೀಡಿದ್ದಾರೆ.

No comments

Post a Comment