ಕರ್ಣಾಟಕ ಬ್ಯಾಂಕ್ ನಿಂದ ವೈದ್ಯಕೀಯ ಸಿಬ್ಬಂದಿಗಳಿಗೆ 1 ಸಾವಿರ ಪಿಪಿಇ ಕಿಟ್ ಕೊಡುಗೆ

No comments

       ಮಡಿಕೇರಿ (Times Of Coorg):-ಕೊಡಗು ಜಿಲ್ಲಾ ಕೋವಿಡ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಿಗೆ ಕರ್ಣಾಟಕ ಬ್ಯಾಂಕ್ ನಿಂದ 1 ಸಾವಿರ ಪಿಪಿಇ ಕಿಟ್‍ಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಮೂಲಕ ಸಾಂಕೇತಿಕವಾಗಿ  ನೀಡಲಾಯಿತು.

      ಕರ್ಣಾಟಕ ಬ್ಯಾಂಕ್‍ನ ಮೈಸೂರು ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಬಿ.ಚಂದ್ರಶೇಖರ ಅವರು ಈ ಸಂದರ್ಭ ಮಾತನಾಡಿ, ಕರ್ಣಾಟಕ ಬ್ಯಾಂಕ್ ತನ್ನ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅನ್ವಯ ಕೊಡಗಿನ ವೈದ್ಯಕೀಯ  ಆರೋಗ್ಯ ಸಿಬ್ಬಂದಿಗಳಿಗೆ 3.60 ಲಕ್ಷ ರೂ. ಮೌಲ್ಯದ  1 ಸಾವಿರ ಪಿಪಿಇ ಕಿಟ್‍ಗಳನ್ನು  ನೀಡುತ್ತಿದೆ ಎಂದರು.

     ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ಆರೋಗ್ಯ ರಕ್ಷಣೆಯಲ್ಲಿ ಕೊರೊನಾ ಸಮರ ಸೈನಿಕರಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಮಹತ್ವದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಕರ್ಣಾಟಕ ಬ್ಯಾಂಕ್ ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪಿಪಿಇ ಕಿಟ್‍ಗಳನ್ನು ನೀಡಿದ್ದು ಕೊಡಗು ಜಿಲ್ಲೆಯ ಆರೋಗ್ಯ ಕಾರ್ಯಕರ್ತರಿಗೂ ಇದೀಗ ನೆರವು ನೀಡಲು ಮುಂದಾಗಿದ್ದೇವೆ ಎಂದರು. ಸಾಮಾಜಿಕ ನೆರವಿನೊಂದಿಗೆ ಸಾಮಾಜಿಕ ಹೊಣೆಗಾರಿಕೆಗೆ  ಕರ್ಣಾಟಕ ಬ್ಯಾಂಕ್ ಸದಾ ಬದ್ಧ್ದವಾಗಿದೆ ಎಂದು ಸಹ ಚಂದ್ರಶೇಖರ್ ಅವರು ಹೇಳಿದರು.

      ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರ್ಣಾಟಕ ಬ್ಯಾಂಕ್‍ನ ನೆರವನ್ನು ಪ್ರಶಂಶಿಸಿದರು. ಕರ್ಣಾಟಕ ಬ್ಯಾಂಕ್‍ನ ಮೈಸೂರು ಪ್ರಾದೇಶಿಕ ಕಚೇರಿಯ ಮುಖ್ಯಪ್ರಬಂಧಕರಾದ  ಶ್ರೀಶ, ಮಡಿಕೇರಿ  ಕರ್ಣಾಟಕ  ಬ್ಯಾಂಕ್ ಶಾಖಾ ಪ್ರಬಂಧಕರಾದ ಎ.ರಮೇಶ್, ಪತ್ರಕರ್ತರಾದ ಅನಿಲ್ ಎಚ್.ಟಿ ಇತರರು ಇದ್ದರು.

No comments

Post a Comment