ಸುವರ್ಣ ಸಮುಚ್ಚಯ ಭವನ ನಿರ್ಮಾಣ ಬಗ್ಗೆ ಮಾಹಿತಿ ಪಡೆದ ಸುನೀಲ್ ಸುಬ್ರಮಣಿ
ಮಡಿಕೇರಿ (Times Of Coorg):-ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ ಅವರು ವಿಧಾನ ಪರಿಷತ್ ಅಧಿವೇಶದಲ್ಲಿ ಭಾಗಿಯಾಗಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಿರ್ಮಿಸಲಾಗಿರುವ ಕನ್ನಡ ಭವನಗಳ ಸಂಖ್ಯೆ ಎಷ್ಟು ಹಾಗೂ ಅವುಗಳಿಗೆ 03 ವರ್ಷಗಳಲ್ಲಿ ಬಿಡುಗಡೆಯಾದ ಅನುದಾನ ಮತ್ತು ಖರ್ಚಿನ ವಿವರ ನೀಡುವಂತೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರಾದ ಸಿ.ಟಿ ರವಿ ಅವರಿಂದ ಮಾಹಿತಿ ಪಡೆದರು.
ಕೊಡಗು ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಒಳಪಟ್ಟಿರುವ ಕಟ್ಟಡ, ಆಸ್ತಿಗಳು 03 ಇದೆ. ಕಳೆದ 03 ವರ್ಷಗಳಲ್ಲಿ ಸುವರ್ಣ ಸಮುಚ್ಛಯ ಭವನ ಮಡಿಕೇರಿಗೆ 807 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 307 ಲಕ್ಷ ರೂ. ಖರ್ಚಾಗಿದೆ. ಜನರಲ್ ತಿಮ್ಮಯ್ಯ ಸ್ಮಾರಕ ಭವನ ಮಡಿಕೇರಿ ಇಲ್ಲಿಗೆ 275 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 275 ಲಕ್ಷ ರೂ. ಖರ್ಚಾಗಿದೆ. ಕಲಾಭವನ ಕುಶಾಲನಗರ ಇಲ್ಲಿಗೆ 399.43 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 388.43 ಲಕ್ಷ ರೂ. ಖರ್ಚಾಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕøತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರಾದ ಸಿ.ಟಿ.ರವಿ ಅವರು ಮಾಹಿತಿ ನೀಡಿದರು.

No comments
Post a Comment