ಮತ್ತೊಮ್ಮೆ ನಾಪೋಕ್ಲು ಚೆರಿಯಪರಂಬು- ಕಲ್ಲುಮೊಟ್ಟೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಕಡಿತ
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ
ಸಮೀಪದ ಕಾವೇರಿ ನದಿ ತುಂಬಿ ಹರಿಯುತಿದ್ದು ಚೆರಿಯಪರಂಬು- ಕಲ್ಲುಮೊಟ್ಟೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಮೇಲೆ ನೀರು ಹರಿಯುತಿದ್ದು, ಪರಿಣಾಮ ಚೆರಿಯಪರಂಬು- ಕಲ್ಲುಮೊಟ್ಟೆ ಸಂಪರ್ಕ ಕಡಿತಗೊಂಡಿದೆ
ಇದರಿಂದ ಚೆರಿಯ ಪರಂಬು ಪೈಸಾರಿ ನಿವಾಸಿಗಳಲ್ಲಿ
ಕಳೆದ ಬಾರಿ ಮುಳುಗಡೆ ಆದ ರೀತಿ ಆಗಬಹುದಾ ಎಂಬ ಆತಂಕ ಶುರುವಾಗಿದೆ.
ಕಳೆದ ತಿಂಗಳು ಮಳೆ ಪ್ರವಾಹದಿಂದ ಚೆರಿಯ ಪರಂಬು ಪೈಸಾರಿ ಪ್ರತಿವರ್ಷದಂತೆ ಸಂಪೂರ್ಣ ಮುಳುಗಡೆ ಆಗಿದ್ದು,
ನಾಲ್ಕು ದಿನಗಳ ಹಿಂದೆಯೇ ಹವಾಮಾನ ಇಲಾಖೆ ಆರೆಂಜ್ ಹಾಗೂ ರೆಡ್ ಅಲರ್ಟ್ ಮುನ್ಸೂಚನೆ ನೀಡಲಾಗಿದೆ.


No comments
Post a Comment