ನಾಪೋಕ್ಲು : ಕುಡಿದ ಮತ್ತಿನಲ್ಲಿ ತಂದೆ ತಾಯಿಯನ್ನು ಕೊಂದ ಮಗ

No comments

ವರದಿ : ಹಾರಿಸ್ ನಾಪೋಕ್ಲು
        ನಾಪೋಕ್ಲು (Times Of Coorg) : ಸ್ವಂತ ಮಗನೇ ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಬಡಿದು ಹಲ್ಲೆ ಮಾಡಿ ತಂದೆ-ತಾಯಿಯನ್ನು ಕೊಲೆ ಮಾಡಿರುವ ದುರ್ಘಟನೆ ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದಲ್ಲಿ ನಡೆದಿದೆ.

ಕೋಕೇರಿ ಗ್ರಾಮದ ಚೇನಂಡ ಶಿವಾಜಿ ಸೋಮಯ್ಯ ಎಂಬವರ ಲೈನ್ ಮನೆಯಲ್ಲಿ ವಾಸವಾಗಿದ್ದ ಕುಟುಂಬ
ಸೋಮವಾರ ರಾತ್ರಿ ರಾಜು 70 ಗೌರಿ 65 ಎಂಬಿಬ್ಬರನ್ನು ದೊಣ್ಣೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ ಮಗ ಅಯ್ಯಪ್ಪ.

ಈದಿನ ಘಟನೆ ತಿಳಿದು ತೋಟದ ಮಾಲೀಕನಿಂದ ನಾಪೋಕ್ಲು ಪೊಲೀಸರಿಗೆ ದೂರು ನೀಡಿದ್ದು,
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ವೃತ್ತನಿರೀಕ್ಷಕರಾದ ದಿವಾಕರ್  ನಾಪೋಕ್ಲು ಠಾಣಾಧಿಕಾರಿ ಆರ್ ಕಿರಣ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ  ನೀಡಿ ಪರಿಶೀಲನೆ ನಡೆಸಿದರು

ಚೇನಂಡ ಶಿವಾಜಿ ಸೋಮಯ್ಯ ಎಂಬವರ ಲೈನ್ ಮನೆಯಲ್ಲಿ ವಾಸವಾಗಿದ್ದ ಕುಟುಂಬ
ನಾಪೋಕ್ಲು ಪೊಲೀಸರಿಂದ ಕೊಲೆ ಆರೋಪಿ ಅಯ್ಯಪ್ಪನನ್ನು ಬಂಧಿಸಿದ್ದಾರೆ.

No comments

Post a Comment