ಕೊಡಗು ಜಿಲ್ಲೆಯಲ್ಲಿ ಈ ದಿನ ಪುನ: ಹೊಸದಾಗಿ 13 ಕೋವಿಡ್ ಸೋಂಕು ಪ್ರಕರಣಗಳು ಧೃಢ : ಸೋಂಕಿತರ ಸಂಖ್ಯೆ 169ಕ್ಕೆ ಏರಿಕೆ

No comments


ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು 169ಕ್ಕೇ ಏರಿಕೆಯಾಗಿದೆ. ಇತ್ತೀಚೆಗೆ  ಕೋವಿಡ್ ಸೋಂಕಿನಿಂದ ಮೃತಪಟ್ಟ ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ದಂಡಿನಪೇಟೆಯ ವ್ಯಕ್ತಿಯ ಪ್ರಾಥಮಿಕ ಸಂಪರ್ಕಗಳಾದ 25 ವರ್ಷದ ಮಹಿಳೆ, 45 ವರ್ಷದ ಮಹಿಳೆ, 49 ವರ್ಷದ ಪುರುಷ, 40 ವರ್ಷದ ಮಹಿಳೆ, 22 ವರ್ಷದ ಮಹಿಳೆ, 20 ವರ್ಷದ ಹುಡುಗ, 17 ವರ್ಷದ ಹುಡುಗಿ, 24 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.  ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆಯ ಊರುಗುತ್ತಿ ನಿವಾಸಿ, ಮಹಾರಾಷ್ಟ್ರದಿಂದ ಹಿಂದಿರುಗಿರುವ ಜ್ವರ ಲಕ್ಷಣಗಳಿದ್ದ 63 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ಅಂಬೇಡ್ಕರ್ ಬ್ಲಾಕ್ ನ ಜ್ವರ ಲಕ್ಷಣಗಳಿದ್ದ 45 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.  ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪದ ಜ್ವರ ಲಕ್ಷಣಗಳಿದ್ದ 11 ವರ್ಷದ ಹುಡುಗಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ಪಟ್ಟಣದ ಪುಟಾಣಿ ನಗರದ, ಚಾಮರಾಜ ಬಂಗಲೆ ಬಳಿಯ ಆರೋಗ್ಯ ಕಾರ್ಯಕರ್ತ 53 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ ನಿವಾಸಿ ಜ್ವರ ಲಕ್ಷಣಗಳಿದ್ದ 63 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಹೊಸದಾಗಿ 05 ನಿಯಂತ್ರಿತ ವಲಯಗಳನ್ನು ತೆರೆಯಲಾಗಿದೆ.

. ಊರುಗುತ್ತಿ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು
. ಅಂಬೇಡ್ಕರ್ ಬ್ಲಾಕ್, ಹೆಬ್ಬಾಲೆ, ಸೋಮವಾರಪೇಟೆ ತಾಲ್ಲೂಕು
. ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗ, ಸುಂಟಿಕೊಪ್ಪ
. ಚಾಮರಾಜ ಬಂಗ್ಲೆ, ಪುಟಾಣಿ ನಗರ, ಮಡಿಕೇರಿ ತಾಲ್ಲೂಕು
. ಅಯ್ಯಪ್ಪ ದೇವಸ್ಥಾನ ರಸ್ತೆ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು

*ಘೋಷ್ವಾರೆ*
ಜಿಲ್ಲೆಯಲ್ಲಿ ವರದಿಯಾದ ಸೋಂಕಿತ ಪ್ರಕರಣಗಳು : 169
ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳು: 62
ಸಕ್ರಿಯ ಪ್ರಕರಣಗಳು: 105
ಮೃತ ಪಟ್ಟ ಪ್ರಕರಣಗಳು: 02
ಒಟ್ಟು ನಿಯಂತ್ರಿತ ಪ್ರದೇಶಗಳು: 68

No comments

Post a Comment