ನೆಲ್ಯಹುದಿಕೇರಿ ಗ್ರಾಮ ಪಂಚಾಯತಿಯ ಬೆಟ್ಟದ ಕಾಡು ಗ್ರಾಮ ಸೀಲ್ ಡೌನ್ ತೆರವುಗೊಳಿಸುವಂತೆ ಜಿಲ್ಲಾ ಪಂಚಾಯತ್ ಸದಸ್ಯ ಸುನಿತ ಮಂಜುನಾಥ್ ಮನವಿ
ಬೆಟ್ಟದಕಾಡು ಗ್ರಾಮದಲ್ಲಿ 16 ದಿನ ಕಳೆದರೂ ಕೂಡ ಸೀಲ್ಡೌನ್ ತೆರವುಗೊಳಿಸದ ಅಧಿಕಾರಿಗಳು
ಮಡಿಕೇರಿ (Times Of Coorg) : ಕಳೆದ ತಿಂಗಳು 26/06/20 ರಂದು ಬೆಂಗಳೂರಿನಿಂದ ಬಂದ ವ್ಯಕ್ತಿಗೆ ಕೊರೊನ ಪೊಸಿಟೀವ್ ಕೇಸ್ ದೃಢ ಪಟ್ಟ ಹಿನ್ನಲೆ
ಆ ವ್ಯಕ್ತಿ ನಲ್ಯಹುದಿಕೇರಿ ಬೆಟ್ಟದಕಾಡು ಗ್ರಾಮಕ್ಕೆ ಬಂದು ಹೋಗಿರುತ್ತಾರೆ . ಈ ಹಿನ್ನಲೆ 26ರಂದು ಬೆಟ್ಟದಕಾಡು ಗ್ರಾಮ ಸೀಲ್ಡೌನ್ ಮಾಡಲಾಗಿತ್ತು. ಸೋಂಕಿತ ವ್ಯಕ್ತಿಯ ಸಂಪರ್ಕದವರು ದ್ರವ ಪರೀಕ್ಷೆ ಕೂಡ ಮಾಡಿರುತ್ತಾರೆ
ದ್ರವ ಪರೀಕ್ಷೆ ಮಾಡಿರುವ ಬಹುತೇಕ ಮಂದಿಗೆ ನೆಗಟಿವ್ ಬಂದಿರುತ್ತದೆ. ಬೆಟ್ಟದಕಾಡು ಗ್ರಾಮದಲ್ಲಿ ಇದುವರೆಗೆ ಯಾವುದೇ ಕೊರೊನ ಕೇಸ್ ಪತ್ತೆಯಾಗಿಲ್ಲ .
ಈಗ 16 ದಿನ ಕಳೆದರು ಸಂಬಂಧ ಪಟ್ಟ ಅಧಿಕಾರಿಗಳು ಸೀಲ್ಡೌನ್ ತೆರವುಗೊಳಿಸದ ಹಿನ್ನಲೆ ಇಲ್ಲಿನ ಗ್ರಾಮ ವಾಸಿಗಳು ಕಂಗಾಲಾಗಿದೆ . ಈ ಭಾಗದಲ್ಲಿ ಬಹುತೇಕ ಜನರು ಕೂಲಿ ಕಾರ್ಮಿಕರಾಗಿರುತ್ತಾರೆ ಯಾವುದೇ ಆದಾಯ ಇಲ್ಲದ ಕಾರಣ ಇವರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ
ಈಗಾಲೇ ಕೆಲವು ಸಂಘ ಸಂಸ್ಥೆಗಳು ದಾನಿಗಳು ಸೊಲ್ಪ ಮಟ್ಟಿಗೆ ಸಹಾಯ ಮಾಡಿರುತ್ತಾರೆ .
16 ದಿನ ಆದರೂ ಯಾವುದೇ ಕೊರೊನ ಕೇಸ್ ಪತ್ತೆಯಾಗದೆ ಇರುವ ಹಿನ್ನೆಲೆಯಲ್ಲಿ ಸೀಲ್ಡೌನ್ ತೆರವುಗೊಳಿಸುವಂತೆ ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯ ಸುನಿತಾ ಮಂಜುನಾಥ್ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

No comments
Post a Comment