ಮಡಿಕೇರಿ (Times Of Coorg) : ಸೋಮವಾರಪೇಟೆ ತಾಲ್ಲೂಕು ಚೆಟ್ಟಳ್ಳಿ ಗ್ರಾಮದ ಜ್ಯೋತಿನಗರ ನಿವಾಸಿ ಪಿ. ಮುತ್ತುಬೀರನ್ ಎಂಬುವವರು ತಮಿಳುನಾಡು ರಾಜ್ಯದ ಕೋಡಂಬಾಕಂನಲ್ಲಿದ್ದು ತನ್ನ ತಾಯಿ ಸರಸ್ವತಿ ಎಂಬುವವರು ಮೃತಪಟ್ಟಿರುವುದಾಗಿ ಸುಳ್ಳು ಮಾಹಿತಿ ನೀಡಿ ಕಮಿಷನರ್, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ರವರಿಂದ ದಿನಾಂಕ: 15-04-2020 ರಂದು ಪಾಸ್ ಪಡೆದುಕೊಂಡು ಬೈಕ್ ಸಂಖ್ಯೆ ಕೆಎ12-ವಿ-1798 ರಲ್ಲಿ ಚೆನ್ನೈ ಯಿಂದ ಹೊರಟು ದಿನಾಂಕ: 16-04-2020 ರಂದು ಚೆಟ್ಟಳ್ಳಿಗೆ ಬಂದಿರುತ್ತಾರೆ. ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಲಾಕ್ ಡೌನ್ ಅದೇಶ ಹೊರಡಿಸಿದ್ದರೂ ಸಹ ತನ್ನ ತಾಯಿಯವರು ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರೂ ಸುಳ್ಳು ಮಾಹಿತಿ ನೀಡಿದ ಮತ್ತು ಅದೇಶ ಉಲ್ಲಂಘಿಸಿದ ಪರಿಣಾಮ ಪಿ.ಮುತ್ತುಬೀರನ್ ರವರ ಮೇಲೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ, ಐ,ಪಿ.ಎಸ್, ರವರ ನಿರ್ದೇಶನದಂತೆ ಮಡಿಕೇರಿ ಉಪವಿಭಾಗ ಡಿವೈ.ಎಸ್.ಪಿ ದಿನೇಶ್ ಕುಮಾರ್ ಬಿ.ಪಿ ಮತ್ತು ಸಿ.ಪಿ.ಐ ದಿವಾಕರ್ ಸಿ.ಎನ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪಿಎಸ್ಐ ಚಂದ್ರಶೇಖರ್ ಹೆಚ್.ವಿ, ಪ್ರೊ.ಪಿಎಸ್.ಐ ಜಗದೀಶ್ ಸಿಬ್ಬಂದಿಯವರಾದ ಮಧು, ಸಿದ್ದರಾಮ ರವರು ಸೂಕ್ತ ಸಮಯಕ್ಕೆ ಸ್ಥಳಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಕಾನೂನು ಕ್ರಮ ಜರುಗಿಸಿರುತ್ತಾರೆ. ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯವನ್ನು ಶ್ಲಾಘಿಸಲಾಗಿದೆ.
No comments
Post a Comment